Friday, June 14, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಹುದ್ದೆಗಳ ಭರ್ತಿ ವಿಚಾರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿ ವಿಚಾರದಲ್ಲಿ ಸರ್ಕಾರ ವಿಫಲ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಹಗರಣಗಳಿಂದ ರಾಜ್ಯದಲ್ಲಿನ ಯುವಜನತೆ ನಿರುದ್ಯೋಗದಿಂದ ಕಂಗಾಲಾಗಿದ್ದು, ಈ ಸಮಸ್ಯೆಗೆ ರಾಜ್ಯ ಸರ್ಕಾರವೇ ನೇರಹೊಣೆ ಎಂದು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ಉದ್ಯೋಗಾಕಾಂಕ್ಷಿಗಳ ಬಳಿ ಪುಸ್ತಕ, ಪೆನ್ನು, ಭವಿಷ್ಯದ ಕನಸು ಬಿಟ್ಟರೆ ಬೇರೇನೂ ಇಲ್ಲ. ಸರ್ಕಾರಕ್ಕೆ ಲಂಚದ ಆಸೆ, ಕಮಿಷನ್ ಆಸೆ ಬಿಟ್ಟರೆ ಬೇರೇನೂ ಇಲ್ಲ. 40% ಸರ್ಕಾರ ನಡೆಸಿದ ಪಿಎಸ್‌ಐ ಅಕ್ರಮದಿಂದಾಗಿ ಪ್ರಾಮಾಣಿಕ ಅಭ್ಯರ್ಥಿಗಳ ವಯಸ್ಸು ಮೀರುತ್ತಿದೆ, ಬದುಕು ಛಿದ್ರವಾಗಿದೆ. ಹೀಗಾಗಿ ಇವರ ಆತಂತ್ರದ ಬದುಕಿಗೆ ಪರಿಹಾರವೇನು ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದೆ.

ಸ್ವತಂತ್ರ್ಯ ಉದ್ಯಾನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಪಧವೀದರರ ಪ್ರತಿಭಟನೆ

Related Articles

ಇತ್ತೀಚಿನ ಸುದ್ದಿಗಳು