Saturday, June 22, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್  ಮುಖಂಡ, ಮಾಜಿ ಸಂಸದ ಸರಡಗಿ ನಿಧನ: ಮಲ್ಲಿಕಾರ್ಜುನ್ ಖರ್ಗೆಯವರಿಂದ ಭಾವುಕ ಪೋಸ್ಟ್‌

ಕಲ್ಬುರ್ಗಿ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಹಿರಿಯ ̇ಮುಖಂಡ, ಮಾಜಿ ಸಂಸದ ಸರಡಗಿ ಇಕ್ಬಾಲ್ ಅಹ್ಮದ್ ಸರಡಗಿ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು (ಬುಧವಾರ) ಮೃತಪಟ್ಟಿದ್ದಾರೆ. ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತು.

1944ರ ಜೂ.5ರಂದು ಕಲಬುರಗಿಯಲ್ಲಿ ಜನಿಸಿದ್ದ ಇಕ್ಬಾಲ್ ಅಹ್ಮದ್ ಸರಡಗಿ, ಎಲ್.ಎಲ್.ಬಿ ಶಿಕ್ಷಣ ಪಡೆದಿದ್ದರು. ಸರಡಗಿ 1999ರಿಂದ 2009ರವರೆಗೆ ಎರಡು ಅವಧಿಗೆ ಕಲಬುರಗಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಸೇವೆ ಸಲ್ಲಿದ್ದರು. 2014ರಿಂದ 2020ರವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಸರಕಾರದ ವಿವಿಧ ಸಮಿತಿಗಳ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ಮೃತರು ಪತ್ನಿ ಸೇರಿ ಓರ್ವ ಪುತ್ರ ಮತ್ತು ಮಗಳನ್ನು ಅಗಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಹಫತ್ ಗುಂಬಜ್ ಪ್ರದೇಶದ ನ್ಯಾಷನಲ್ ಕಾಲೇಜು ಸಮೀಪದ ಮಸೀದಿಯಲ್ಲಿ ಅಂತಿಮ ಪ್ರಾರ್ಥನೆ ನಡೆದು ಬಳಿಕ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

ಇಕ್ಬಾಲ್ ಅಹ್ಮದ್ ಸರಡಗಿ ನಿಧನದ ಬಗ್ಗೆ ಎಕ್ಸ್‌ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವುಕ ವಿಧಾಯಯ ಪತ್ರ ಬರೆದಿದ್ದಾರೆ. ನನ್ನ ಆತ್ಮೀಯ ಗೆಳೆಯ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗುಲ್ಬರ್ಗದ ಮಾಜಿ ಸಂಸದ ಶ್ರೀ ಇಕ್ಬಾಲ್ ಅಹಮದ್ ಸರಡಗಿ ಅವರ ನಿಧನದಿಂದ ತೀವ್ರ ನೋವಾಗಿದೆ. ಶಿಕ್ಷಣತಜ್ಞ ಮತ್ತು ಪರೋಪಕಾರಿ, ಅವರು ಗುಲ್ಬರ್ಗದ ಜನರ ಉನ್ನತಿಗಾಗಿ ಅವಿರತವಾಗಿ ಶ್ರಮಿಸಿದರು ಮತ್ತು ಎಲ್ಲರಿಗೂ ಕಲ್ಯಾಣಕ್ಕಾಗಿ ಶ್ರಮಿಸಿದವರು. ಅವರ ಕೌನ್ಸಿಲರ್ ದಿನಗಳಿಂದ ಅವರು ಗುಲ್ಬರ್ಗದ ಸಂಸದರಾದ ಸಮಯದವರೆಗೆ ಮತ್ತು ನಂತರ ನಾವು ಈ ರಾಜಕೀಯ ಕ್ಷೇತ್ರದಲ್ಲಿ ಒಟ್ಟಾಗಿ ಪ್ರಯಾಣಿಸಿದ್ದೇವೆ, ಆದ್ದರಿಂದ ಇದು ನನಗೆ ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ, ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಇಂದು ಪೋಸ್ಟ್‌ ನಲ್ಲಿ ವಿಧಾಯದ ನುಡಿನಮನ ಸಲ್ಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು