Sunday, June 30, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್‌ ಮಾಜಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ

ಬೆಂಗಳೂರು: ಕಾಂಗ್ರೆಸ್‌ನ ಮಾಜಿ ವಕ್ತಾರ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್‌ ಕಾಳಪ್ಪ ಆಮ್‌ ಆದ್ಮಿ ಪಾರ್ಟಿಗೆ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ʼರಾಜ್ಯದಲ್ಲಿರುವ ಸರ್ಕಾರದಲ್ಲಿ ಭ್ರಷ್ಟಚಾರವು ತುಂಬಿ ತುಳುಕುತ್ತಿದೆ. ಬ್ರಿಜೇಶ್‌ ಕಾಳಪ್ಪ ಅವರು ಈ ಹಿಂದೆ ಇದ್ದ ಪಕ್ಷದಲ್ಲಿ 25 ವರ್ಷ ಸೇವೆಸಲ್ಲಿಸಿದರು ಅವರಿಗೆ ಪಕ್ಷದ ಟಿಕೆಟ್ ಕೊಟ್ಟಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಂದಿನ ರಾಜಕೀಯ ವ್ಯವಸ್ಥೆಯು ವ್ಯಕ್ತಿಯ ಸಾಮಾರ್ಥ್ಯ ನೋಡುವಲ್ಲಿ ವಿಫಲವಾಗಿದೆ ಎಂದು ದೂರಿದರು. ಬ್ರಿಜೇಶ್‌ ಕಾಳಪ್ಪ ಅಂತಹ ವ್ಯಕ್ತಿಗಳಿಗೆ ನಮ್ಮ ಪಕ್ಷದಲ್ಲಿ ಮುಕ್ತ ಸ್ವತಂತ್ರ ಕೊಡುತ್ತೇವೆ ಮತ್ತು ದೆಹಲಿ ಮಾದರಿಯನ್ನು ಕರ್ನಾಟಕ್ಕೆ ತಂದು ಮುಂದಿನ ದಿನಗಳಲ್ಲಿ ಕರ್ನಾಟಕ ಮಾದರಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಆಪ್‌ ಸೇರಿದ ಬ್ರಿಜೇಶ್‌ ಕಾಳಪ್ಪ ಮಾತನಾಡಿ ʼ25 ವರ್ಷ ಕಾಂಗ್ರೆಸ್‌ ಪಕ್ಷದಲ್ಲಿ ಕಾರ್ಯಕರ್ತನಾಗಿಯೇ ಇದ್ದೆ, ಕಾಂಗ್ರೆಸ್‌ ಪಕ್ಷದಲ್ಲಿ ನಿಮಗೆ ಟಿಕೆಟ್‌ ಸಿಗಬೇಕಾದರೆ ಪಕ್ಷದಲ್ಲಿನ ಯಾರಿಗಾದರೂ ಸಂಬಂಧಿಕನಾಗಿರಬೇಕು ಇಲ್ಲವೇ ಶ್ರೀಮಂತನಾಗಿರಬೇಕು ಎಂದು ಕಿಡಿಕಾರಿದರು. ಮೇ ತಿಂಗಳ ಕೊನೆಯ ವಾರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ತೊರೆದ ನಂತರ ಆಮ್‌ ಆದ್ಮಿ ಪಾರ್ಟಿಗೆ ಸೇರುವ ಆಕಾಂಕ್ಷೇಯಲ್ಲಿ ಪಕ್ಷ ಸೇರ್ಪಡೆಗೊಂಡಿದ್ದೇನೆ ಎಂದು ಹರ್ಷವ್ಯಕ್ತಪಡಿಸಿದರು. ನಮ್ಮ ಶ್ರಮ ಮತ್ತು ದುಡಿಮೆ ನಂಬಿ ಕೆಲಸ ಮಾಡಲು ಆಮ್‌ ಆದ್ಮಿ ಪಾರ್ಟಿ ಮುಕ್ತ ಸ್ವತಂತ್ರ ಕೊಡುತ್ತದೆ ಎಂ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರು ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು