Wednesday, June 26, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಪ್ರತಿಭಟನೆಯು ರಾಮಮಂದಿರ ವಿರೋಧಿ ಸಂದೇಶವನ್ನು ಕಳುಹಿಸುತ್ತಿದೆ: ಅಮಿತ್‌ ಶಾ

ನವದೆಹಲಿ: ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಶುಕ್ರವಾರ ಆರೋಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್‌ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತಿರುವುದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನಾ ಸಮಾರಂಭದ ವಿರುದ್ಧ ಎಂದು ಹೇಳಿದ್ದಾರೆ.
ಇಂದು ಪ್ರತಿಷ್ಠಾಪನಾ ಮಹೋತ್ಸವದ ವರ್ಷಾಚರಣೆ ಎಂದು ಅವರು, ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ರಾಮಜನ್ಮಭೂಮಿ ಶಂಕುಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ ಮತ್ತು ತುಷ್ಟೀಕರಣ ನೀತಿಯನ್ನು ಮುಂದು ವರಿಸುತ್ತಿದ್ದಾರೆ ಎಂಬ ಸೂಕ್ಷ್ಮ ಸಂದೇಶವನ್ನು ರವಾನಿಸುತ್ತಿದೆ ಎಂದರು. 
ಈ ಮಾತಿಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಬೆಲೆ ಏರಿಕೆಯ ವಿರುದ್ಧದ ತನ್ನ ಪ್ರಜಾಸತ್ತಾತ್ಮಕ ಪ್ರದರ್ಶನಗಳನ್ನು "ದಿಕ್ಕು ತಪ್ಪಿಸುವ, ತಬ್ಬಿಬ್ಬುಗೊಳಿಸುವ, ಧ್ರುವೀಕರಿಸುವ ಮತ್ತು ದುರುದ್ದೇಶಪೂರಿತ ತಿರುವು ನೀಡುವ" ಹತಾಶ ಪ್ರಯತ್ನ ಎಂದು ಹೇಳಿದೆ.
ಬೆಲೆ ಏರಿಕೆ, ನಿರುದ್ಯೋಗ ಮತ್ತು ಜಿಎಸ್‌ಟಿ ವಿರುದ್ಧದ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್ ಇಂದ ಇಂದಿನ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ದಿಕ್ಕು ತಪ್ಪಿಸುವ, ತಬ್ಬಿಬ್ಬುಗೊಳಿಸುವ, ಧ್ರುವೀಕರಿಸುವ ಮತ್ತು ದುರುದ್ದೇಶಪೂರಿತ ತಿರುವು ನೀಡುವ ಹತಾಶ ಪ್ರಯತ್ನವನ್ನು ಗೃಹ ಸಚಿವರು ಮಾಡಿದ್ದಾರೆ.  ಕೇವಲ ಅನಾರೋಗ್ಯದ ಮನಸ್ಸು ಹೊಂದಿರುವವರು ಮಾತ್ರ ಇಂತಹ ನಕಲಿ ವಾದಗಳನ್ನು ಉಂಟುಮಾಡುತ್ತಾರೆ. ಹಾಗಾಗಿ ನಮ್ಮ ಪ್ರತಿಭಟನೆಗಳು ಸ್ಪಷ್ಟವಾಗಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಕಳೆದ ವಾರದಿಂದ ಯೋಜಿತವಾಗಿದ್ದ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ಭಾರೀ ರೋಚಕವಾಗಿ ಮಾರ್ಪಟ್ಟಿದೆ. ಪ್ರತಿಭಟನಾಕಾರರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
"ಇದು ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ. ಅವರು ಪ್ರತಿದಿನ ಏಕೆ ಪ್ರತಿಭಟನೆಗಳನ್ನು ನಡೆಸುತ್ತಾರೆ? ಕಾಂಗ್ರೆಸ್ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ - ಅವರು ತಮ್ಮ ತುಷ್ಟೀಕರಣ ನೀತಿಯನ್ನು ಮರೆಮಾಚುವ ರೀತಿಯಲ್ಲಿ ವಿಸ್ತರಿಸಿದ್ದಾರೆ," ಎಂದು ಶಾ ಹೇಳಿದರು. 
ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಪ್ರತಿಭಟನೆಯ ಸಮಯವನ್ನು ಪ್ರಶ್ನಿಸಿದ ಅವರು, "ಇಂದು, ಜಾರಿ ನಿರ್ದೇಶನಾಲಯವು ಯಾರನ್ನೂ ಕರೆದಿಲ್ಲ ಅಥವಾ ಯಾರನ್ನೂ ವಿಚಾರಣೆ ಮಾಡಿಲ್ಲ, ಯಾವುದೇ ದಾಳಿ ನಡೆದಿಲ್ಲ, ಇಂದು ಏಕೆ ಪ್ರತಿಭಟನೆ ನಡೆಸಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದರು. 550 ವರ್ಷಗಳ ಹಿಂದಿನ ಸಮಸ್ಯೆಗೆ ಶಾಂತಿಯುತ ಪರಿಹಾರ ಒದಗಿಸಿ, ರಾಮ ಜನ್ಮಭೂಮಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದ್ದು ಇದೇ ದಿನ ಎಂದು ಒಪ್ಪಿಕೊಳ್ಳುತ್ತೇನೆ. ದೇಶದಲ್ಲಿ ಎಲ್ಲಿಯೂ ಗಲಭೆ ಹಿಂಸಾಚಾರ ನಡೆದಿಲ್ಲ. ತುಷ್ಟೀಕರಣ ನೀತಿ ದೇಶಕ್ಕಾಗಲೀ, ಕಾಂಗ್ರೆಸ್‌ಗಾಗಲೀ ಒಳ್ಳೆಯದಲ್ಲ ಎಂದು ಗೃಹ ಸಚಿವರು ಹೇಳಿದರು.
 

Related Articles

ಇತ್ತೀಚಿನ ಸುದ್ದಿಗಳು