Home ಬ್ರೇಕಿಂಗ್ ಸುದ್ದಿ ಪ್ರಿಯಾಂಕ ಖರ್ಗೆ ವಿರುದ್ಧ ಕೀಳು ಭಾಷೆ ಬಳಕೆ ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಪ್ರಿಯಾಂಕ ಖರ್ಗೆ ವಿರುದ್ಧ ಕೀಳು ಭಾಷೆ ಬಳಕೆ ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಹಾಸನ: ಕಾಂಗ್ರೆಸ್ ಯುವ ನಾಯಕ ಪ್ರಿಯಾಂಕ ಖರ್ಗೆ ವಿರುದ್ಧ ಕೀಳು ಮತ್ತು ಅವಮಾನಕಾರಿ ಭಾಷೆಯಲ್ಲಿ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಘಟಕದ ವತಿಯಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಹೇಶ್ ಮತ್ತು ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಎಂ.ಕೆ. ದೇವಪ್ಪ ಮಲ್ಲಿಗೆವಾಳ್ ಮಾತನಾಡಿ, ಕಾಂಗ್ರೆಸ್ ನಾಯಕರರು ಹಾಗೂ ಕಾರ್ಯಕರ್ತರು ಪ್ರಿಯಾಂಕ ಖರ್ಗೆ ಅವರು ರಾಜ್ಯದ ಯುವ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕ ರಾಜಕಾರಣದ ಸಂಕೇತ. ಅವರು ಈ ರಾಜ್ಯ ಕಂಡ ಅತ್ಯಂತ ಬುದ್ಧಿವಂತ ದಲಿತ ನಾಯಕನಾಗಿದ್ದು, ರಾಷ್ಟ್ರ ಮಟ್ಟದ ಕೃತಕ ಬುದ್ಧಿಮತ್ತೆ ಸಮೀಕ್ಷೆಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ. ಇಂತಹ ಪ್ರತಿಭಾನ್ವಿತ ಯುವ ರಾಜಕಾರಣಿಯ ವಿರುದ್ಧ ಅಸಭ್ಯ ಶಬ್ದಗಳಲ್ಲಿ ಮಾತನಾಡುವುದು ಕೇವಲ ಅವಮಾನಕರವಲ್ಲ, ಸಾಮಾಜಿಕ ಅನ್ಯಾಯದ ಉದಾಹರಣೆ ಕೂಡ ಹೌದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ ಖರ್ಗೆಯ ವೇಗದ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರೊಂದು ವಿಭಾಗ ಅವರು ವಿರುದ್ಧ ಕೀಳು, ಅಸಹ್ಯ ಮತ್ತು ಅಮಾನವೀಯ ಹೇಳಿಕೆಗಳನ್ನು ನೀಡುತ್ತಿರುವುದು ಅತ್ಯಂತ ಖಂಡನೀಯ. ಇಂತಹವರ ವಿರುದ್ಧ ಪೊಲೀಸರು ತಕ್ಷಣವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಅಸ್ಪೃಶ್ಯತೆಯ ವಿರುದ್ಧ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಾಸನ ಜಿಲ್ಲಾ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಘಟಕದ ನಾಯಕರು ಮತ್ತಷ್ಟು ತೀವ್ರ ಎಚ್ಚರಿಕೆ ನೀಡುತ್ತಾ, ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. ಪ್ರಿಯಾಂಕ ಖರ್ಗೆಯ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಸಮಾಜದ ಎಲ್ಲ ವರ್ಗಗಳು ಈ ಹೋರಾಟದಲ್ಲಿ ನಮ್ಮೊಂದಿಗಿರಬೇಕು ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಎಂ.ಕೆ. ದೇವಪ್ಪ ಮಲ್ಲಿಗೆವಾಳ್, ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಡಿ.ಸಿ. ಸಣ್ಣಸ್ವಾಮಿ, ರಂಜಿತ್ ಗೊರೂರು, ವೆಂಕಟೇಶ್, ಅಶೋಕ್ ನಾಯಕರಹಳ್ಳಿ, ಪ್ರಸನ್ನ, ಹರೀಶ್, ಆರೀಫ್, ಪರಮೇಶ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version