Wednesday, April 23, 2025

ಸತ್ಯ | ನ್ಯಾಯ |ಧರ್ಮ

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿಯುವ ಕಾಂಗ್ರೆಸ್ ಕಪ್ಪು ಭಾವುಟ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಹಾಸನ : ನಗರದ ಹೇಮಾವತಿ ಪ್ರತಿಮೆ ಮುಂಬಾಗ ಕೇಂದ್ರ ಸರಕಾರದ ಅಸಂವಿಧಾನಿಕ ಹಾಗೂ ಮುಸ್ಲಿಂ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಯುವ ಕಾಂಗ್ರೆಸ್ ಸಮಿತಿಯಿಂದ ಕಪ್ಪು ಬಾವುಟ ಪ್ರದರ್ಶಿಸಿದಲ್ಲದೇ ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿ ಆಕ್ರೋಶವ್ಯಕ್ತಪಡಿಸಿದರು.ಇದೆ ವೇಳೆ ಹಾಸನ ವಿಧಾನ ಸಭಾ ಕ್ಷೇತ್ರದ ಅಸೆಂಬ್ಲಿ ಅಧ್ಯಕ್ಷ ಇರ್ಪಾನ್ ಮಾಧ್ಯಮದೊಂದಿಗೆ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಕೇಂದ್ರದ ಬಿಜೆಪಿ ಸರಕಾರವು ಸಂವಿಧಾತ್ಮಕ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ವಕ್ಫ್ ಕಾಯಿದೆ ತಿದ್ದುಪಡಿಯು ಮುಸ್ಲಿಂರ ಮೇಲಿನ ಧ್ವೇಷದ ಕಾರಣಕ್ಕಾಗಿ ತಂದಿದೆ. ಬಾಬ ಸಾಹೇಬರು ಬರೆದಿರುವ ಸಂವಿಧಾನವನ್ನು ಬದಲಾವಣೆ ಮಾಡಲು ಇಂತಹ ಕಾಯಿದೆ ಮತ್ತು ಮಸೂದೆಗಳ ಮೂಲಕ ಹೊರಟಿದ್ದಾರೆ. ಬಿಜೆಪಿ ಈ ಕೋಮುವಾದವನ್ನು ನಾವು ವಿರೋಧಿಸುತ್ತೇವೆ.

ವಕ್ಫ್ ಆಸ್ತಿ ಎಂದರೇ ಮೋದಿ ಮತ್ತು ಅಮಿತ್ ಶಾ ಅವರ ಆಸ್ತಿ ಎಂದುಕೊAಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ವಕ್ಫ್ ಆಸ್ತಿ ಎಂದರೇ ಮೋದಿ, ಅಮಿತ್ ಶಾ ಹಾಗೂ ಯೋಗಿ ಆಸ್ತಿಯಲ್ಲ. ಬಿಜೆಪಿಯವರ ಆಸ್ತಿಯಲ್ಲ. ಇದು ಅಲ್ಲಾ ಹೆಸರಿನಲ್ಲಿ ಮುಸಲ್ಮಾನರು ದಾನ ಮತ್ತು ದೇಣಿಗೆ ಕೊಟ್ಟಿರುವ ಸಂಪತ್ತು ಇದಾಗಿದೆ. ಕೇಂದ್ರದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಹಲವಾರು ಕೇಂದ್ರದ ಆಸ್ತಿಗಳನ್ನು ಮಾರಾಟ ಮಾಡಿದಾಗೆ ಈಗ ವಕ್ಫ್ ಆಸ್ತಿ ಮಾರಾಟ ಮಾಡಲು ಹೊರಟಿದ್ದಾರೆ ಎಂದು ದೂರಿದರು. ನಾವು ಭಾರತೀಯ ಮುಸಲ್ಮಾನರು ಇದಕ್ಕೆಲ್ಲಾ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಇದನ್ನ ವಿರೋಧ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೇವೆ ಎಂದರು. ಹಲವಾರು ಜನ ಮುಸ್ಲಿಂರು ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೆ ಕೊಟ್ಟು ಹೋರಾಟ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹಿದ್, ಇಸ್ಮಾಯಿಲ್, ಹರ್ಷದ್, ನಿಹಾಲ್, ಕಿರಣ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page