Tuesday, July 29, 2025

ಸತ್ಯ | ನ್ಯಾಯ |ಧರ್ಮ

ಹುಡಾ ಅಧ್ಯಕ್ಷ ಸ್ಥಾನ ಸ್ಥಳೀಯರಿಗೆ ನೀಡಲು ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ಹಾಸನ : ನಗರದ ನರಾಭಿವೃದ್ಧಿ ಪ್ರಾಧಿಕಾರದ ಹುದ್ದೆಯನ್ನು ಹಾಸನ ನಗರದ ವ್ಯಾಪ್ತಿಯಲ್ಲಿರುವಂತಹ ಸ್ಥಳಿಯ ಕಾರ್ಯಕರ್ತರಿಗೆ ನೀಡಬೇಕಾಗಿರುವುದರಿಂದ ಜಿಲ್ಲಾ ಕಾಗ್ರೇಸ್ ಕಛೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ. ರಸ್ತೆ ತಡೆದು ಹುಡಾ ಕಛೇರಿ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಇದೆ ವೇಳೆ ನಗರಸಭೆ ಮಾಜಿ ಸದಸ್ಯ ಚಂದ್ರುಶೇಖರ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರದ ನರಾಭಿವೃದ್ಧಿ ಪ್ರಾಧಿಕಾರದ ಹುದ್ದೆಯನ್ನು ಹಾಸನದ ಸ್ಥಳಿಯ ಕಾರ್ಯಕರ್ತರಿಗೆ ನೀಡಬೇಕಾಗಿದ್ದು, ಕಾಂಗ್ರೇಸ್ ಸರ್ಕಾರ ಬಂದು ಸುಮಾರು ಎರಡು ವರ್ಷಗಳ ಕಾಲ ಕಳೆದರು ಸಹ ಈವರೆವಿಗೂ ಹಾಸನ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಸರ್ಕಾರಿ ನಾಮಿನಿ ಮಾಡದೆ ಇರುವುದು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಸರ್ಕಾದ ಮುಖಂಡರುಗಳ ಮೇಲೆ ಬೇಸವಾಗಿದೆ ಎಂದು ದೂರಿದರು. ಹಾಸನ ವಿಧಾನ ಸಭಾ ಕ್ಷೇತ್ರದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ನಗರದ ಸ್ಥಳಿಯವಾಗಿ ವಾಸವಾಗಿರುವಂತಹ ಯಾವುದೇ ಜಾತಿ ಮತ್ತು ಧರ್ಮದವರಾದ ಕಾಂಗ್ರೇಸ್ ಕಾರ್ಯಕರ್ತರಿಗೆ ನೀಡಬೇಕಾಗಿರುವುದು ಅತ್ಯವಶ್ಯಕವಾಗಿರುತ್ತದೆ. ಇಲ್ಲವಾದಲ್ಲಿ ನಮ್ಮ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಕಾರ್ಯಕರ್ತರನ್ನು ಕಳೆದುಕೊಳ್ಳುವ ಭೀತಿ ಉಂಟಾಗುವ ಸಂಭವವಿರುತ್ತದೆ ಎಂದು ಎಚ್ಚರಿಸಿದರು.
ನಮ್ಮ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಈ ಮೌನ ಪ್ರತಿಭಟನೆಯ ಮುಖೇನ ತಿಯಬಯಸುತ್ತಿದ್ದೇವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಘವೇಂದ್ರ, ಅಸ್ಲಾಂ ಪಾಷಾ, ಇಮ್ರಾನ್ ಖಾನ್, ಕುಮಾರಸ್ವಾಮಿ, ವಿನೋದ್, ಲೋಕೇಶ್, ಕುಮಾರ್, ಆರೀಫ್ ಖಾನ್, ಪುಟ್ಟೇಗೌಡ, ಗುರುಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page