Friday, April 4, 2025

ಸತ್ಯ | ನ್ಯಾಯ |ಧರ್ಮ

ವಕ್ಫ್ ಮಸೂದೆ ವಿರುದ್ಧ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ: ಜೈರಾಮ್ ರಮೇಶ್

ದೆಹಲಿ: ಗುರುವಾರ ರಾಜ್ಯಸಭೆಯಲ್ಲಿ ವಕ್ಫ್ ಮಸೂದೆಯ ಕುರಿತು ಬಿಸಿ ಚರ್ಚೆಯ ನಂತರ, ಶುಕ್ರವಾರ ಮುಂಜಾನೆ ಅದನ್ನು ಅಂಗೀಕರಿಸಲಾಯಿತು. ಇದೀಗ, ಕಾಂಗ್ರೆಸ್ ಈ ವಕ್ಫ್ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.

ಈ ಕುರಿತು ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶುಕ್ರವಾರ ಮಾಹಿತಿ ಬಿಡುಗಡೆ ಮಾಡಿದ್ದಾರೆ. “ಕಾಂಗ್ರೆಸ್ ಪಕ್ಷವು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಕಾನೂನುಗಳನ್ನು ಪ್ರಶ್ನಿಸಿದೆ.

ಅವುಗಳಲ್ಲಿ, ಕಾಂಗ್ರೆಸ್ 2019 ರ ಪೌರತ್ವ ತಿದ್ದುಪಡಿ ಕಾಯ್ದೆ (CAA), 2005 ರ ಮಾಹಿತಿ ಹಕ್ಕು (RTI) ಕಾಯ್ದೆಯ ತಿದ್ದುಪಡಿಗಳು, ಚುನಾವಣಾ ಆಯೋಗದ ನಿಯಮಗಳು (2024) ತಿದ್ದುಪಡಿಗಳು ಮತ್ತು 199 ರ ಪೂಜಾ ಸ್ಥಳಗಳ ಕಾಯ್ದೆ ಸೇರಿವೆ.

ಇವುಗಳ ಜೊತೆಗೆ, ವಕ್ಫ್ ತಿದ್ದುಪಡಿ ಮಸೂದೆ 2024ರ ಕುರಿತೂ ಕಾಂಗ್ರೆಸ್ ಸುಪ್ರೀಂ ಕೋರ್ಟನ್ನು ಸಂಪರ್ಕಿಸಲಿದೆ” ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page