ಹಾಸನ: ರಾಜ್ಯ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದ ಮುಂದೆ ನಗರದ ಬಿ.ಎಂ. ರಸ್ತೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆ ಮಾಡಿದರು.
ನಂತರ ಕಾಂಗ್ರೆಸ್ ಮಾಧ್ಯಮ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಡೆದಂತಹ ಮೂರು ಉಪಚುನಾವಣೆಯಲ್ಲಿ ಮೂರನ್ನು ಕೂಡ ಕಾಂಗ್ರೆಸ್ ಅಭ್ಯರ್ಥಿಗಳೂ ಜಯಗಳಿಸುವುದರ ಮೂಲಕ ಜಯಶಾಲಿಯಾಗಿ ಹೊರ ಬಂದಿದ್ದಾರೆ. ಈ ಮೂರು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದರು. ಇಂದು ಕಾಂಗ್ರೆಸ್ ಪಕ್ಷ ಬಡವರ ಪರವಾಗಿ, ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರವಾಗಿ ಹಾಗೂ ರೈತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಆಡಳಿತ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗಳು ಎಲ್ಲಾವನ್ನು ಒಪ್ಪಿಕೊಂಡ ಮತದಾರ ಈ ಉಪ ಚುನಾವಣೆಯಲ್ಲಿ ಉತ್ತಮ ಪಲಿತಾಂಶ ನೀಡಿದ್ದಾರೆ. ಸುಳ್ಳಿನ ಅಪಪ್ರಚಾರಕ್ಕೆ, ಕುಟುಂಬ ರಾಜಕಾರಣಕ್ಕೆ ಮತ್ತು ಉದ್ದೇಶ ಪೂರ್ವಕವಾಗಿ ಟೀಕೆ ಟಿಪ್ಪಣಿ ಮಾಡಿರುವಂತಹ ವ್ಯಕ್ತಿಗಳಿಗೆ ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರುಗಳಿಗೆ ಸ್ಪಷ್ಟ ಸಂದೇಶವನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ಜಾರಿಗೆ ತರಲಾಗಿರುವ ಐದು ಗ್ಯಾರಂಟಿ ಯೋಜನೆಗಳು ಹಾಗೂ ಈ ಟೀಕೆ ಟಿಪ್ಪಣಿ ಕೂಡ ಸುಳ್ಳು ಆರೋಪಗಳೆಂದು ಜನರು ಸಾಬೀತು ಮಾಡಿದ್ದಾರೆ. ಈ ಮೂರು ಕ್ಷೇತ್ರದ ಜನರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳುವುದಾಗಿ ತಿಳಿಸಿದರು. ಜಾರ್ಖಾಂಡ್ ರಾಜ್ಯದಲ್ಲೂ ಕೂಡ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದೆ. ನಮ್ಮ ಪಕ್ಷದ ಅದಿ ನಾಯಕಿ ಪ್ರಿಯಾಂಕ ಗಾಂಧಿ ಅವರು ಕೇರಳ ನಾಡಿ ರಾಜ್ಯದಲ್ಲಿ ೩ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಕ್ಷೇತ್ರದ ಜನತೆಗೂ ಕೂಡ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ದೇವಪ್ಪ ಮಲ್ಲಿಗೆವಾಳು, ಚಂದ್ರಶೇಖರ್, ರಘು ದಾಸರಕೊಪ್ಪಲು, ಅಶೋಕ್ ನಾಯಕರಹಳ್ಳಿ, ಶಿವಕುಮಾರ್ ವಿಶ್ವನಾಥ್, ಬೂದೇಶ್, ರಾಮಚಂದ್ರು ಇತರರು ಉಪಸ್ಥಿತರಿದ್ದರು.