Wednesday, January 28, 2026

ಸತ್ಯ | ನ್ಯಾಯ |ಧರ್ಮ

ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್

ಗಂಡು ಹೆಣ್ಣಿನ ನಡುವೆ ಪರಸ್ಪರ ಸಮ್ಮತಿ ಮೇರೆಗೆ ಆರಂಭಗೊಂಡ ಸಂಬಂಧ ನಿರಾಸೆಯಿಂದ ಕೊನೆಗೊಂಡು, ಆ ನಂತರ ಹೆಣ್ಣಾಗಲಿ, ಗಂಡಾಗಲಿ.. ಸಂತ್ರಸ್ತರಂತೆ ವರಸೆ ಬದಲಿಸಿದರೆ ಅಂತಹ ಪ್ರಕರಣದಲ್ಲಿ ಆರೋಪಿಯನ್ನು ಅಪರಾಧದ ಅಡಿಯಲ್ಲಿ ತರಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಡೇಟಿಂಗ್ ಆಪ್ ನಲ್ಲಿ ಭೇಟಿಯಾದ ಸಂಬಂಧ ಓಯೋ ರೂಂ ವರೆಗೂ ಹೋದ ನಂತರ ಅದನ್ನು ಅತ್ಯಾಚಾರ ಎಂದು ಪರಿಗಣಿಸಿದ್ದಕ್ಕೆ ಹೈಕೋರ್ಟ್ ಗರಂ ಆಗಿದೆ. ಈ ಪ್ರಕರಣದ ಸಂಬಂಧ ಹೈಕೋರ್ಟ್ ಗೆ ಮಹಿಳೆಯೊಬ್ಬರು ದಾಖಲಿಸಿದ್ದಂತ ಎಫ್‌ಐಆರ್ ರದ್ದುಪಡಿಸುವಂತೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದಂತ ಹೈಕೋರ್ಟ್ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲವೆಂದು ತೀರ್ಪು ನೀಡಿದೆ.

ಮಹಿಳೆ, ಯುವಕ ಡೇಟಿಂಗ್ ಆಪ್ ನಲ್ಲಿ 1 ವರ್ಷದಿಂದ ಸಂಪರ್ಕದಲ್ಲಿದ್ದರು. ಭೇಟಿಯಾಗಲು ನಿರ್ಧರಿಸಿ ರೆಸ್ಟೋರೆಂಟ್ ನಲ್ಲಿ ಊಟ ಮಾಡಿದ್ದರು. ನಂತ್ರ ಓಯೋ ರೂಮ್ ಗೆ ಕರೆದೊಯ್ದು ಯುವಕನಿಂದ ಲೈಂಗಿಕ ಕ್ರಿಯೆ ನಡೆಸಲಾಗಿದೆ. ಲೈಂಗಿಕ ಕ್ರಿಯೆಗೆ ಮುಂದಾದಾಗ ಒಪ್ಪಿಗೆ ನಿರಾಕರಿಸಿದ್ದಾಗಿ ಮಹಿಳೆ ದೂರು ನೀಡಿದ್ದಾರೆ. ಒಪ್ಪಿಗೆ ಹಿಂಪಡೆದ ಬಳಿಕವೂ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಆರೋಪಿಸಿದ್ದಾರೆ. ಮರುದಿನ ಆಕೆಯ ಅಪಾರ್ಟಮೆಂಟ್ ಗೆ ಯುವಕ ಡ್ರಾಪ್ ಮಾಡಿದ್ದಾರೆ. ಆದೇ ದಿನ ವೈದ್ಯಕೀಯ ತಪಾಸಣೆ ಮಾಡಿಸಿ ದೂರನ್ನು ಮಹಿಳೆ ನೀಡಿದ್ದಾರೆ.

ಒಟ್ಟಿನಲ್ಲಿ ಮಹಿಳೆ ಮೊದಲು ಯುವಕನ ಜೊತೆ ಚೆನ್ನಾಗಿದ್ದು, ಆ ನಂತರ ಆತನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದರು. ಆದರೆ ಕೋರ್ಟ್  ಯುವಕನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿ ಮಹತ್ವ ತೀರ್ಪು ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page