Saturday, November 16, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಪಾಲಿಗೆ ಸಂವಿಧಾನವೆನ್ನುವುದು ಕೇವಲ ಖಾಲಿ ಪುಸ್ತಕ: ರಾಹುಲ್ ಗಾಂಧಿ

ಮಹಾರಾಷ್ಟ್ರದ ಅಮರಾವತಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸಂವಿಧಾನವನ್ನು ದೇಶದ ಡಿಎನ್‌ಎ ಎಂದು ಪರಿಗಣಿಸುತ್ತದೆ, ಆದರೆ ಆಡಳಿತಾರೂಢ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪಾಲಿಗೆ ಅದೊಂದು ಕೇವಲ ಖಾಲಿ ಪುಸ್ತಕ ಎಂದು ರಾಹುಲ್ ಹೇಳಿದರು.

ಮಹಾರಾಷ್ಟ್ರದಲ್ಲಿ ಮಾಡಿದಂತೆ ಶಾಸಕರ ಖರೀದಿ ಮತ್ತು ಮಾರಾಟದ ಮೂಲಕ ಸರ್ಕಾರಗಳನ್ನು ಬೀಳಿಸಬಹುದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಬರೆದಿಲ್ಲ. ದೊಡ್ಡ ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಬಹುದು ಎಂದು ಅದರಲ್ಲಿ ಬರೆದಿಲ್ಲ ಎಂದರು.

ದೇಶದಲ್ಲಿ ಎರಡು ಸಿದ್ಧಾಂತಗಳ ನಡುವೆ ಜಗಳ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಒಂದು ಕಡೆ ಇಂಡಿಯಾ ಮೈತ್ರಿ, ಇನ್ನೊಂದು ಕಡೆ ಬಿಜೆಪಿ-ಆರ್‌ಎಸ್‌ಎಸ್. ದೇಶವನ್ನು ಸಂವಿಧಾನದ ಮೂಲಕ ನಡೆಸಬೇಕು ಎಂದು ನಾವು ಹೇಳುತ್ತೇವೆ ಮತ್ತು ನರೇಂದ್ರ ಮೋದಿಯವರು ಸಂವಿಧಾನವನ್ನು ಖಾಲಿ ಪುಸ್ತಕ ಎಂದು ಹೇಳುತ್ತಾರೆ, ಅದರಲ್ಲಿ ಏನನ್ನೂ ಬರೆದಿಲ್ಲ ಎನ್ನುತ್ತಾರೆ. ಆರೆಸ್ಸೆಸ್-ಬಿಜೆಪಿಯವರಿಗೆ ಈ ಪುಸ್ತಕ ಖಾಲಿ, ಆದರೆ ನಮಗೆ ಇದು ಈ ದೇಶದ ಡಿಎನ್‌ಎ. ನರೇಂದ್ರ ಮೋದಿ ಮತ್ತು ಬಿಜೆಪಿಯ ಜನರು ಮುಚ್ಚಿದ ಕೋಣೆಯಲ್ಲಿ ಸಂವಿಧಾನವನ್ನು ಕೊಲ್ಲುತ್ತಾರೆ ಎಂದು ರಾಹುಲ್ ಹೇಳಿದರು.

ನರೇಂದ್ರ ಮೋದಿಯವರು ಉದ್ಯೋಗ ವ್ಯವಸ್ಥೆಯನ್ನು ಕೊನೆಗೊಳಿಸಿದರು

ನರೇಂದ್ರ ಮೋದಿ ಅವರು ಉದ್ಯೋಗ ವ್ಯವಸ್ಥೆಯನ್ನು ಕೊನೆಗೊಳಿಸಿದ್ದರಿಂದ ದೇಶದಲ್ಲಿ ದ್ವೇಷ ಹರಡುತ್ತಿದೆ ಎಂದು ರಾಹುಲ್ ಹೇಳಿದರು. ದೇಶದ ಕೋಟ್ಯಾಧಿಪತಿಗಳು ಚೀನಾ ವಸ್ತುಗಳನ್ನು ಇಲ್ಲಿ ಮಾರಾಟ ಮಾಡುತ್ತಿರುವುದರಿಂದಾಗಿ ಇಂದು ಯಾವುದೇ ರಾಜ್ಯದಲ್ಲೂ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದಾಗಿ ಕಾರ್ಖಾನೆಗಳು ಮುಚ್ಚಲ್ಪಟ್ಟವು, ಜನರಿಗೆ ಉದ್ಯೋಗ ನೀಡುತ್ತಿದ್ದ ಸಣ್ಣ ಉದ್ಯಮಗಳು ನಾಶವಾದವು. ನೋಟು ರದ್ದತಿ ಮತ್ತು ಜಿಎಸ್‌ಟಿಯಂತಹ ಅಸ್ತ್ರಗಳನ್ನು ಬಳಸಿ ನರೇಂದ್ರ ಮೋದಿಯವರು ಅದಾನಿ-ಅಂಬಾನಿಗೆ ದಾರಿ ಮಾಡಿಕೊಟ್ಟರು. ಇದರ ಪರಿಣಾಮ ದೇಶದ ಸಂಪತ್ತೆಲ್ಲ ಕೆಲವು ಕೋಟ್ಯಾಧಿಪತಿಗಳ ಕೈ ಸೇರಿತು ಎಂದರು.

ನನ್ನ ಮಾನಹಾನಿ ಮಾಡಲು ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ

ನಾನು ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ಪರವಾಗಿ ನಿಂತಿದ್ದರೆ ಪ್ರತಿಪಕ್ಷಗಳು ನನ್ನ ಪ್ರತಿಷ್ಠೆಯನ್ನು ಹಾಳುಮಾಡಲು ಮತ್ತು ಮಾನಹಾನಿ ಮಾಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣವು ರೈತರು ಮತ್ತು ಸಣ್ಣ ಉದ್ಯಮಗಳನ್ನು ನಾಶಮಾಡುವ ಅಸ್ತ್ರವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಿರುದ್ಯೋಗ ಹೆಚ್ಚುತ್ತಿದ್ದು, ಇದರಿಂದ ಸಮಾಜದಲ್ಲಿ ದ್ವೇಷ ಹರಡುತ್ತಿದೆ ಎಂದರು. ಕೈಗಾರಿಕೋದ್ಯಮಿಗಳು ನಿಮ್ಮನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿಲ್ಲ, ದೇಶದ ಜನರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದು ನಾನು ಮೋದಿ ಜೀ ಅವರಿಗೆ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page