Thursday, January 16, 2025

ಸತ್ಯ | ನ್ಯಾಯ |ಧರ್ಮ

ಎಲ್ಲರಿಗೂ ಸೂರು ಯೋಜನೆ ಮಾರ್ಚ್ ಕೊನೆಗೆ 300 ಮನೆ ನಿರ್ಮಾಣ – ಶಾಸಕ ಶಿವಲಿಂಗೇಗೌಡ

ಎಲ್ಲರಿಗೂ ಸೂರು ಯೋಜನೆಯ ಪ್ರಗತಿ ಪರಿಶೀಲಿಸಿದ ಶಾಸಕ ಶಿವಲಿಂಗೇಗೌಡ : ಮಾರ್ಚ್ ಕೊನೆಗೆ 300 ಮನೆ ನಿರ್ಮಾಣ

ಅರಸೀಕೆರೆ: ಹೌಸಿಂಗ್ ಫಾರ್ ಅಲ್ ಯೋಜನೆಯಡಿ 1,180 ಮನೆಗಳು ನಿರ್ಮಾಣ ಆಗಲಿದ್ದು, ಮೊದಲ ಹಂತದಲ್ಲಿ 300 ಮನೆಗಳು ಮಾರ್ಚ್ ಅಂತ್ಯದೊಳಗೆಪೂರ್ಣವಾಗಲಿವೆ. ಫಲಾನುಭವಿಗಳು ತಕ್ಷಣ ಕೇವಲ ₹1 ಲಕ್ಷ ವಂತಿಗೆ ನೀಡಿ ಮನೆಯ ಪಡೆಯಬೇಕು ಎಂದುಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು. , ಇಲ್ಲಿನ ಸುಬ್ರಹ್ಮಣ್ಯನಗರ ಬಡಾವಣೆ ಸಮೀಪದಲ್ಲಿ ಹೌಸಿಂಗ್ ಫಾರ್ ಹಾಲ್ ಯೋಜನೆಯ ಕನಸಿನ ಮನೆ ಕಾಮಗಾರಿ ವಿಳಂಬವಾಗಿರುವುದನ್ನು ಬುಧವಾರ ಪರಿಶೀಲಿಸಿದ ನಂತರ ಅವರು ಮಾತನಾಡಿದರು.


ಬಡವರು, ನಿರ್ಗತಿಕರು, ಮಧ್ಯಮ ವರ್ಗದವರಿಗೆ ಅನುಕೂಲ ಫಲಾನುಭವಿಗಳು ಸ್ಪಂದಿಸಲು ಸಚಿವರ ಕೋರಿಕೆ ಬಡವರು, ನಿರ್ಗತಿಕರು, ಮಧ್ಯಮ ವರ್ಗದವರಿಗೆ ಅನೂಕೂಲವಾಗಲಿದೆ. ಫಲಾನುಭವಿಗಳು ಸ್ಪಂದಿಸಬೇಕು. ಈ ನಿಟ್ಟಿನಲ್ಲಿನಗರಸಭಾ ಸದಸ್ಯರು ಗಮನಹರಿಸಬೇಕು. ಈ ಯೋಜನೆ ಸಾಕಾರಗೊಳ್ಳಲು ನಗರಸಭೆ ತ್ಯಾಗ ಹಾಗೂ ಸಹಕಾರದಿಂದ ಸಾಧ್ಯವಾಗಿದೆ ಎಂದರು. ‘ಸರ್ಕಾರದಿಂದ ಸಾಲದ ವ್ಯವಸ್ಥೆ’ ಸರ್ಕಾರದ ಎಲ್ಲರಿಗೂ ಸೂರು ಯೋಜನೆ ಅಡಿ 1,180 ಮನೆಗಳ ನಿರ್ಮಾಣ ಕನಸಿನ ಯೋಜನೆ ಆಗಿತ್ತು. ಇದರಲ್ಲಿಕೇಂದ್ರ ಸರ್ಕಾರ ₹1.50 ಲಕ್ಷ, ರಾಜ್ಯ ಸರ್ಕಾರ ₹1.50 ಲಕ್ಷ ಹಾಗೂ ಫಲಾನುಭವಿಗಳು ₹2 ಲಕ್ಷ ನೀಡಬೇಕಾಗಿತ್ತು. ಈ ಕ್ರಮಕ್ಕೆ ಫಲಾನುಭವಿಗಳ ನಿರಾಸಕ್ತಿ ಉಂಟಾಗಿತ್ತು. ಹೀಗಾಗಿಈಗ ಸರ್ಕಾರವೇ ಫಲಾನುಭವಿಗಳ ₹1 ಲಕ್ಷ ನೀಡಲು ಹಾಗೂ ಇನ್ನೂ ₹ 1ಲಕ್ಷಕ್ಕೆ ಬ್ಯಾಂಕ್‌ನಲ್ಲಿ ಶೇ 5 ರ ದರದಲ್ಲಿ ಸಾಲದ ವ್ಯವಸ್ಥೆ ಮಾಡಿದೆ ಎಂದು ಕೆ.ಎಂ. ಶಿವಲಿಂಗೇಗೌಡ ಹೇಳಿದರು. ,‌ ಫಲಾನುಭವಿಗಳು ಸಂಬಂಧಪಟ್ಟ ನಗರಸಭೆಯ ಸದಸ್ಯರನ್ನು ಸಂಪರ್ಕಿಸಿ, ತಮ್ಮ ಕನಸಿನ ಸ್ವಂತ ಸೂರನ್ನು ಪಡೆಯಬೇಕು. 2 ನೇ ಹಂತದಲ್ಲಿ800 ಮನೆಗಳು ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಗಿದ್ದು, ಸುಸಜ್ಜಿತ ರಸ್ತೆ, ಯುಜಿಡಿ ವ್ಯವಸ್ಥೆ, ನೀರಿನ ಟ್ಯಾಂಕರ್ ಹಾಗೂಸುಂದರ ವಾತಾವರಣದಲ್ಲಿ ಉತ್ತಮ ಮನೆ ನಿರ್ಮಾಣ ಆಗಲಿವೆ ಎಂದರು.

ಅರಸೀಕೆರೆಯ ಸುಬ್ರಹ್ಮಣ್ಯನಗರ ಬಡಾವಣೆ ಸಮೀಪದ ಎಲ್ಲರಿಗೂ ಸೂರು ಯೋಜನೆಯಡಿ ನಿರ್ಮಾಣ ಆಗುತ್ತಿರುವ ಮನೆಗಳನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ಪರಿಶೀಲಿಸಿದರು. , ಗೃಹಮಂಡಳಿ ವತಿಯಿಂದ ನಗರದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ನಿವೇಶನ ಹಾಗೂ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೆ. ಆದರೆ ಕೆಲವರು ಸುಳ್ಳು ಮಾಹಿತಿ ನೀಡಿ ಅಡ್ಡಿ ಮಾಡಿದ್ದಾರೆ. ಮನೆಗಳನ್ನು ಆಕಾಶದಲ್ಲಿ ನಿರ್ಮಾಣ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಜಮೀನುಗಳಲ್ಲಿ ಶೇ 60 ಭಾಗ ನಿವೇಶನ ಮಾಲೀಕರದ್ದಾಗಿರುತ್ತದೆ. ಶೇ 40 ಭಾಗ ಇತರೆ ಮೂಲಭೂತ ಸೌಕರ್ಯಗಳಿಗೆ ವಿನಿಯೋಗವಾಗುತ್ತದೆ ಎಂದರು. , ಯಾವುದೇ ತಾರತಮ್ಯ ಮಾಡದೇ ಪಕ್ಷತೀತಾವಾಗಿ ಗೃಹಮಂಡಳಿ ನಿವೇಶನಗಳು ಅಥವಾ ಮನೆಗಳಿಗೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದು ಜನರಿಗೆ ಬಿಟ್ಟಿದ್ದು, ಯಾರಿಗೂ ಬಲವಂತ ಮಾಡುವುದಿಲ್ಲ ಎಂದರು. , ಯಾದಾಪುರಕ್ಕೆ ಅಪಾರ ಸಂಖ್ಯೆಯ ಭಕ್ತರು ಬರುತ್ತಿದ್ದು, ರಸ್ತೆಗಳ ವಿಸ್ತರಣೆ ಮಾಡಲಾಗುವುದು. ರೈತರು ಔದಾರ್ಯದಿಂದ ಸ್ವಲ್ಪ ಜಮೀನು ಬಿಟ್ಟುಕೊಟ್ಟರೆ, ವಿಭಜಕ ಅಳವಡಿಸಲಾಗುವುದು. ಈ ಸಂಬಂಧ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page