Tuesday, July 8, 2025

ಸತ್ಯ | ನ್ಯಾಯ |ಧರ್ಮ

ಸಿಎಂ ಸಿದ್ದರಾಮಯ್ಯ ಸಾವು ಬಯಸಿ ಫೇಸ್ಬುಕ್ ನಲ್ಲಿ ವಿವಾದಾತ್ಮಕ ಕಾಮೆಂಟ್; ಕಿಡಿಗೇಡಿ ವಿರುದ್ಧ ದೂರು ದಾಖಲು

ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿಗೆ ಸಿಎಂ ಸಿದ್ದರಾಮಯ್ಯ ಬೇಗ ಸಾಯಲಿ ಎಂದು ಜಾಲತಾಣದಲ್ಲಿ ಕಾಮೆಂಟ್ ಹಾಕಿದ ವ್ಯಕ್ತಿ ಮೇಲೆ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಮೆಂಟ್ ಹಾಕಿದ ವ್ಯಕ್ತಿ ತನ್ನ ಫೇಸ್ಬುಕ್ ನಲ್ಲಿ ಬಸವರಾಜ ನಂಜೇಗೌಡ ಎಂದು ಬರೆದುಕೊಂಡಿದ್ದಾನೆ.

ಫೇಸ್‌ಬುಕ್‌ ನ ಪೋಸ್ಟ್‌ ಒಂದರ ಕಮೆಂಟ್‌ ಸೆಕ್ಷನ್‌ ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಾವು ಬಯಸಿದ್ದ ಕಿಡಿಗೇಡಿ ಬಸವರಾಜ ನಂಜೇಗೌಡ ವಿರುದ್ಧ ದೂರು ದಾಖಲಿಸಲಾಗಿದೆ.

ಇಂತಹ ವಿಕೃತ ಮನಸ್ಸಿನ ವ್ಯಕ್ತಿಗಳು ಮಾಡುವ ಅಪಪ್ರಚಾರದ ಸುಳ್ಳು ವದಂತಿ ಹಾಗೂ ದಿಕ್ಕು ತಪ್ಪಿಸುವ ಹೇಳಿಕೆಗಳಿಂದ ರಾಜ್ಯದ ಜನರಿಗೆ ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳಿಗೆ ತೀವ್ರ ಸ್ವರೂಪದ ನೋವು ಉಂಟಾಗಿರುತ್ತದೆ. ಇದರಿಂದ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬಿರುವುದು ಹಾಗೂ ಶಾಂತಿ ಕದಡುವ ಇಂಥಾ ಕಿಡಿಗೇಡಿಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page