Tuesday, October 28, 2025

ಸತ್ಯ | ನ್ಯಾಯ |ಧರ್ಮ

ರೈತರ ಆಂದೋಲನದಲ್ಲಿ ಭಾಗವಹಿಸಿದ್ದ ರೈತ ಮಹಿಳೆಯ ಬಗ್ಗೆ ವಿವಾದಾತ್ಮಕ ಪೋಸ್ಟ್: ಕಂಗನಾ ಕ್ಷಮಾಪಣೆ

ಚಂಡೀಗಢ್: ಮೋದಿ ಸರ್ಕಾರವು ತಂದಿದ್ದ ಕೃಷಿ ಕಾಯಿದೆಗಳ ವಿರುದ್ಧ 2020-21ರಲ್ಲಿ ರೈತರು ನಡೆಸಿದ ಆಂದೋಲನದ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಬಿಜೆಪಿ ನಾಯಕಿ ಕಂಗನಾ ರಣಾವತ್ ಕ್ಷಮಾಪಣೆ ಕೇಳಿದ್ದಾರೆ.

ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಕಂಗನಾ ತಮ್ಮ ವಿರುದ್ಧ ಅನುಚಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಮಹೀಂದರ್ ಕೌರ್ ಎಂಬ ವೃದ್ಧ ರೈತ ಮಹಿಳೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಭಟಿಂಡಾ ಕೋರ್ಟ್‌ನಲ್ಲಿ ಹಾಜರಾದ ಕಂಗನಾ, ತಾನು ಆ ಮಹಿಳಾ ರೈತರ ಬಗ್ಗೆ ಮಾಡಿದ ಅನುಚಿತ ಹೇಳಿಕೆಗಳಿಗೆ ಕ್ಷಮೆಯಾಚಿಸಿದರು. ಇದರಿಂದಾಗಿ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page