Tuesday, June 18, 2024

ಸತ್ಯ | ನ್ಯಾಯ |ಧರ್ಮ

ರೈತರ ದುಡಿಮೆಗೆ ಬೆಲೆ ಸಿಗುವಂತೆ ಸಹಕಾರಿ ಬ್ಯಾಂಕ್ ಕಾರ್ಯ ನಿರ್ವಹಿಸಬೇಕು: ಬಸವರಾಜ ಬೊಮ್ಮಾಯಿ

ಹಾವೇರಿ: (ಶಿಗ್ಗಾವಿ) ರೈತರ ದುಡಿಮೆಗೆ ಬೆಲೆ ಸಿಗುವಂತೆ ಸಹಕಾರಿ ಬ್ಯಾಂಕ್ ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಹೇಳಿದ್ದಾರೆ.
ಇಂದು ಧಾರವಾಡ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ನ ಶಿಗ್ಗಾಂವಿ ಶಾಖೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ರೈತರ ಬದುಕು ಅನಿಶ್ಚಿತತೆಯಿಂದ ಕೂಡಿದೆ. ನಾವು ರೈತರ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ರೈತರ ಬದುಕಿನಲ್ಲಿ ಒಂದು ಸ್ಥಿರತೆ ಬರಬೇಕಾದರೆ ಕೃಷಿಯಲ್ಲಿ ಹೊಸ ಕ್ರಾಂತಿ ಆದಕಾರಣ ದೇಶದಲ್ಲಿ ಆಹಾರದ ಕೊರತೆ ನೀಗಿದ್ದು, ಆದ್ದರಿಂದ ನಮ್ಮ ದೇಶ ಸ್ವಾವಲಂಬಿಯಾಗಿ ಬೇರೆ ದೇಶಗಳಿಗೆ ಆಹಾರ ಒದಗಿಸಲು ನಮ್ಮ ರೈತ ಬಾಂದವರು ಕಾರಣ ಎಂದು ಹೇಳಿದರು.
ಸಹಕಾರಿ ರಂಗ ಬಹಳ ಮಹತ್ವದ ರಂಗ ಈ ಪ್ರಜಾಪ್ರಭುತ್ವದಲ್ಲಿ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಸಹಕಾರಿ ರಂಗ ಕಾರ್ಯನಿರ್ವಹಿಸುತ್ತದೆ. ಜನರ ದುಡುಮೆಗೆ ಬೆಲೆ ಸಿಗಬೇಕು. ರೈತರ ದುಡಿಮೆ ಬೆಲೆ‌ಸಿಗಬೇಕು ಆ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ ಕೆಲಸ ಮಾಡಲಿ ಎಂದರು.
ನಮ್ಮ ಸರಕಾರ ಶೂನ್ಯ ಬಡ್ಡಿ‌ದರಲ್ಲಿ ರೈತರಿಗೆ ಐದು ಲಕ್ಷದವರೆಗೂ ಸಾಲ ನೀಡಿದ್ದು ನಮ್ಮ ಸರಕಾರದ ಅವಧಿಯಲ್ಲಿ ಆವರ್ತನಿಧಿ ಒಂದು ಸಾವಿರ ಕೋಟಿ ಇತ್ತು. ಆದರೆ, ನಾನು ಬಜೆಟ್ ನಲ್ಲಿ ಮೂರು ಸಾವಿರಕ್ಕೆ ಕೋಟಿಗೆ ಏರಿಕೆ ಮಾಡಿದ್ದೇನೆ.
ಕಳೇದ ವರ್ಷದ ಬಜೆಟನಲ್ಲಿ ರೈತರಿಗೆ‌ ಬೀಜ ಗೊಬ್ಬರ ಕೊಳ್ಳಲು ಹದಿನೈದು ಸಾವಿರ ಹಣವನ್ನು ಭೂಸಿರಿ ಯೋಜನೆ ನೀಡಿದ್ದೇವು. ಜೀವನ ಜ್ಯೋತಿ ಯೋಜನೆ‌ಗೆ ನಮ್ಮ ಸರಕಾರ ಹಣವನ್ನು ಇಟ್ಟಿತ್ತು. ಆದರೆ ಈಗೀನ ಸರಕಾರ ಅದನ್ನು ರದ್ದು‌ಮಾಡಿದೆ. ಆ ಯೋಜನೆಯಿಂದ ರೈತರಿಗೆ ವಿಮೆ ನೀಡುವ ಉದ್ದೇಶದಿಂದ ಮಾಡಿರುವದನ್ನು ಈ ಸರಕಾರ ಕಿತ್ತುಕೊಂಡಿದೆ.
ರೈತ ವಿದ್ಯಾನಿಧಿ ಯೋಜನೆ ಕೂಡ ಸ್ಥಗಿತ ಆಗಿದೆ. ರೈತರ ಮಕ್ಕಳ ಅನುಕೂಲಕ್ಕಾಗಿ ರೈತ‌ವಿದ್ಯಾನಿದಿ ಯೋಜನೆ ಮುಂದುವರೆಸುವಂತೆ ಆಗ್ರಹಿಸಿದರು.
ಡಿಸಿಸಿ ಬ್ಯಾಂಕ್ ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್ ನ ಸಿಂಬಂಧಿಗೆ ಕಿವಿ ಮಾತು ಹೇಳಿದರು.
ಅಲ್ಲದೇ, ಹಾವೇರಿಗೆ ಮೇಗಾ ಡೈರಿ ಸ್ಥಾಪಿಸಿ 100 ಕೋಟಿಗೂ ಹೆಚ್ಚು ಅನುದಾನ ನೀಡಿ ರೈತರಿಗೆ ಕ್ಷೀರ ಕ್ರಾಂತಿ ಮಾಡಿದ ಕಿರ್ತಿ ನಮ್ಮ ಸರಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು