ಕಾಂತಾರ ಕಳ್ಳತನ ಬಯಲು: ಕೇಸು ಹಾಕಲು ಮುಂದಾದ ಸಂಸ್ಥೆ!!!

ಇದುವರೆಗೆ ಜನರ ನಡುವೆ ನಡೆಯುತ್ತಿದ್ದ ಗುಸುಗುಸು ಇಂದು ನಿಜವಾಗಿದೆ. ಕಾಂತಾರ ಸಿನೆಮಾದ “ವರಹಾ ರೂಪಮ್‌” ಹಾಡಿನ ಟ್ಯೂನು ತನ್ನದೆಂದು ಮೂಲ ಹಾಡಿನ ಕಾಪಿರೈಟ್‌ ಹೊಂದಿರುವ ಸಂಸ್ಥೆ ಹೇಳಿದ್ದು, ಅದು ತಾನು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ಈ ಕುರಿತು ತನ್ನ ಫೇಸ್ಬುಕ್‌ ಪೇಜಿನಲ್ಲಿ ಪೋಸ್ಟ್‌ ಮಾಡಿರುವ ಸಂಸ್ಥೆಯು, “ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ಅಥವಾ “ಕಾಂತಾರ” ದೊಂದಿಗೆ ಸಂಯೋಜಿತವಾಗಿಲ್ಲ ಎನ್ನುವುದು ನಮ್ಮ ಕೇಳುಗರಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಆಡಿಯೋ ವಿಷಯದಲ್ಲಿ ನಮ್ಮ IP “ನವರಸಂ” ಮತ್ತು “ವರಾಹ ರೂಪಂ” ನಡುವಿನ ಅನಿವಾರ್ಯ ಹೋಲಿಕೆಗಳು ಇವೆಯಾದ್ದರಿಂದ, ಇದು ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಮ್ಮ ದೃಷ್ಟಿಕೋನದಿಂದ “ಸ್ಫೂರ್ತಿ” ಮತ್ತು “ಕೃತಿಚೌರ್ಯದ” ನಡುವಿನ ವ್ಯತ್ಯಾಸವು ಬಹಳವಿದೆ ಮತ್ತು ನಿರ್ವಿವಾದವಾಗಿದೆ ಹಾಗೂ ಈ ಹಿನ್ನೆಲೆಯಲ್ಲಿ ನಾವು ಇದಕ್ಕೆ ಕಾರಣವಾದ ಸೃಜನಶೀಲ ತಂಡದ ವಿರುದ್ಧ ಕಾನೂನು ಕ್ರಮವನ್ನು ಬಯಸುತ್ತೇವೆ. ವಿಷಯದ ಮೇಲೆ ನಮಗಿರುವ ಹಕ್ಕುಗಳಿಗೆ ಯಾವುದೇ ಕ್ರೆಡಿಟ್‌ ನೀಡಲಾಗಿಲ್ಲ ಮತ್ತು ಚಲನಚಿತ್ರದ ಸೃಜನಶೀಲ ತಂಡವು ಹಾಡನ್ನು ಮೂಲ ಕೃತಿಯಾಗಿ ಪ್ರಚಾರ ಮಾಡಿದೆ.” ಎಂದು ಹೇಳಿದೆ.

ಈ ಕುರಿತು ಮುಂದುವರೆದು ಸಂಸ್ಥೆಯು, ನಮ್ಮ ಕೇಳುಗರ ಬೆಂಬಲವನ್ನು ನಾವು ವಿನಂತಿಸುತ್ತೇವೆ ಮತ್ತು ಅದರ ಕುರಿತು ನೀವು ಪ್ರಚಾರ ಮಾಡಬೇಕೆಂದು ನಿಮ್ಮನ್ನು ವಿನಂತಿಸುತ್ತೇವೆ. ಸಂಗೀತದ ನಕಲಿನ ವಿರುದ್ಧ ಕಲಾವಿದರ ಹಕ್ಕುಗಳನ್ನು ರಕ್ಷಿಸುವ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ನಾವು ನಮ್ಮ ಸಹ ಕಲಾವಿದರನ್ನು ವಿನಂತಿಸುತ್ತೇವೆ.” ಎಂದು ಹೇಳಿದೆ.

ಕಾಂತಾರ ಚಿತ್ರತಂಡದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಎರಡೂ ಹಾಡುಗಳ ಲಿಂಕ್‌ ಕೆಳಗೆ ನೀಡಲಾಗಿದೆ

ಕಾಂತಾರ ಚಿತ್ರದ ಹಾಡು

ಥೈಕ್ಕುಡಮ್‌ ತಂಡದ ಹಾಡು

Related Articles

ಇತ್ತೀಚಿನ ಸುದ್ದಿಗಳು