Monday, September 2, 2024

ಸತ್ಯ | ನ್ಯಾಯ |ಧರ್ಮ

ಮುಡಾ ಪ್ರಕರಣ ; ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಸೆ 9 ಕ್ಕೆ ಮುಂದೂಡಿದ ಕೋರ್ಟ್

ಮುಡಾ ಪ್ರಾಸಿಕ್ಯೂಷನ್ ವಿರುದ್ಧವಾಗಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೆ.9 ಕ್ಕೆ ಮುಂದೂಡಲಾಯಿತು. ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆ.9 ರಂದು ಮುಂದೂಡಿದ ಮುಖ್ಯ ನಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕರಣದ ಮೇಲಿದ್ದ ಕುತೂಹಲ ಇನ್ನಷ್ಟು ದಿನ ಮುಂದೂಡುವಂತೆ ಮಾಡಿದೆ.

ಪ್ರಾಸಿಕ್ಯೂಷನ್ ಗೆ ಗವರ್ನರ್ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ ರಾಘವನ್ ಸುದೀರ್ಘವಾದಂತ ವಾದವನ್ನು ಮಂಡಿಸಿದರು. ನಾನು ಕಾನೂನು ವಾಸ್ತವಂಶದ ಪ್ರಶ್ನೆಗಳ ಬಗ್ಗೆ ವಾದಿಸುತ್ತೇನೆ ಎಂದು ಹೇಳಿ ವಾದ ಆರಂಭಿಸಿದರು.

ಮುಡಾ ಪ್ರಕರಣದ ಬಗ್ಗೆ ಈ ವೇಳೆ ಜಡ್ಜ್ ಪ್ರತಿಕ್ರಿಯೆ ನೀಡಿ ಖಾಸಗಿ ದೂರು ದಾಖಲಿಸಲಾಗಿದೆ. ರಾಜ್ಯಪಾಲರ ಅನುಮತಿಯ ಮಾನ್ಯತೆ ಬಗ್ಗೆ ವಿಚಾರಣಾ ನ್ಯಾಯಾಲಯ ಪರಿಶೀಲಿಸಬಹುದು. ಹೈಕೋರ್ಟಿಗೆ ರಾಜ್ಯಪಾಲರ ಆದೇಶದ ಬಗ್ಗೆ ತೀರ್ಪು ನೀಡುವ ಅಧಿಕಾರವಿದೆ ಎಂದು ಜಡ್ಜ್ ಕೆಜೆ ರಾಘವನ್ ಅವರಿಗೆ ಪ್ರತಿಕ್ರಿಯೆ ನೀಡಿದರು.

ಇದೆ ವೇಳೆ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡುವಂತೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು.ಅದಕ್ಕೆ ಜಡ್ಜ್ ಹಬ್ಬಕ್ಕೂ ಮೊದಲು ವಾದ ಮಂಡನೆ ಮುಗಿಸಿಬಿಡಿ. ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಅಡ್ವಕೇಟ್ ಜನರಲ್ ಅಭಿಪ್ರಾಯದ ಬಗ್ಗೆಯೂ ವಾದಿಸಬೇಕಿದೆ. ಹಬ್ಬವಿದೆ ರಜೆ ಗಳಿವೆ ಒಂದು ವಾರ ಕಾಲಾವಕಾಶ ನೀಡಿ ಎಂದು ಎಜೆ ಶಶಿಕಿರಣ್ ಶೆಟ್ಟಿ ಜಡ್ಜ್ ಗೆ ಮನವಿ ಮಾಡಿದರು.

ಹೀಗಾಗಿ ಸಿದ್ದರಾಮಯ್ಯ ಸಲ್ಲಿಸಿರುವ ರಾಜ್ಯಪಾಲರ ಪ್ರಾಸಿಕ್ಯೂಷನ್ ಪ್ರಶ್ನಿಸಿದ ಅರ್ಜಿ ವಿಚಾರಣೆ ಸೆ.9 ಕ್ಕೆ ಮುಂದೂಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page