Thursday, August 15, 2024

ಸತ್ಯ | ನ್ಯಾಯ |ಧರ್ಮ

ಮನೆಯೂಟ ಸಾಧ್ಯವಿಲ್ಲ, ಜೈಲೂಟವನ್ನೇ ತಿನ್ನಿ: ನಟ ದರ್ಶನ್‌ಗೆ ಕೋರ್ಟಿನಲ್ಲಿ ನಿರಾಶೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ನಟ ದರ್ಶನ್ ತನಗೆ ಅವರು ಜೈಲೂಟ ಬೇಡ, ಮನೆಯೂಟ ಬೇಕು ಎಂದು ಕೋರ್ಟಿನಲ್ಲಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿದೆ. ಹೀಗಾಗಿ ನಟ ದರ್ಶನ್ ಗೆ ಜೈಲು ಊಟವೇ ಗತಿ ಎನ್ನುವಂತೆ ಆಗಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವಂತ ನಟ ದರ್ಶನ್ ಅವರು, ತಮಗೆ ಜೈಲೂಟ ಬೇಡ, ಮನೆಯೂಟಕ್ಕೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೇ ಕೋರ್ಟ್ ವಾದ- ಪ್ರತಿವಾದವನ್ನು ಆಲಿಸಿದ ನಂತ್ರ, ತೀರ್ಪನ್ನು ಜುಲೈ. 25ಕ್ಕೆ ಕಾಯ್ದಿರಿಸಿತ್ತು.

ಈ ಅರ್ಜಿಯ ವಿಚಾರಣೆಯನ್ನು ಇಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟಿನಲ್ಲಿ ನಡೆಸಲಾಯಿತು. ಅಂತಿಮವಾಗಿ ಮನೆಯೂಟದ ಮನವಿಯನ್ನು ಕೋರ್ಟ್ ನಿರಾಕರಿಸಿದೆ.

ಜೈಲು ಊಟದಿಂದ ಅಜೀರ್ಣ, ಅತಿಸಾರವಾಗುತ್ತಿದೆ. ಆದ್ದರಿಂದ ಜೈಲಿನಲ್ಲಿ ಮನೆಯ ಊಟ ತರಿಸಿಕೊಳ್ಳಲು ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ತನಗೆ ಅನುಮತಿಸಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ಸೂಚಿಸಬೇಕು ಎಂದು ಕೋರಿ ಮೊದಲು ದರ್ಶನ್ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರಿನ ನ್ಯಾಯಾಲಯದಲ್ಲಿ ಈ ಪ್ರಕರಣದ ಅರ್ಜಿಯ ವಿಚಾರಣೆ ನಡೆಯಿತು. ಪೊಲೀಸರ ಪರ ಜೈಲು ನಿಯಮಾವಳಿಗಳಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲ. ಅವಕಾಶ ನೀಡಿದರೂ 15 ದಿನಗಳ ಕಾಲ ಮಾತ್ರವೇ ಅವಕಾಶ ನೀಡಲು ನಿಯಮಾವಳಿಯಿದೆ ಎಂದು ಮನವರಿಕೆ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page