Sunday, June 23, 2024

ಸತ್ಯ | ನ್ಯಾಯ |ಧರ್ಮ

ಸಿ.ಪಿ ಯೋಗೇಶ್ವರ್‌ ಕಾರಿನ ಮೇಲೆ ಮೊಟ್ಟೆ ತೂರಾಟ : 14 ಜೆಡಿಎಸ್‌ ಕಾರ್ಯಕರ್ತರ ಮೇಲೆ FIR ದಾಖಲು

ರಾಮನಗರ : ರಾಮನಗರಕ್ಕೆ ಬಂದಿದ್ದ ಬಿಜೆಪಿ ಶಾಸಕ ಸಿ.ಪಿ ಯೋಗೇಶ್ವರ್‌ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಪೋಲಿಸರ್‌ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಶನಿವಾರದಂದು ಸರ್ಕಾರದ 50 ಕೋಟಿ ವಿಶೇಷ ಅನುದಾನದ ಅಡಿ ಕಾಮಗಾರಿ ಚಾಲನೆಗೆಂದು ಬಿಜೆಪಿ ಶಾಸಕ ಸಿ ಪಿ ಯೋಗೇಶ್ವರ್‌ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣಕ್ಕೆ ಬಂದಿದ್ದಾರೆ.ಈ ವೇಳೆ ಜೆಡಿಎಸ್‌ ಕಾರ್ಯಕರ್ತರು ಅವರ ಕಾರಿನ ಮೇಲೆ ಕಲ್ಲು ಮತ್ತು ಮೊಟ್ಟೆಗಳನ್ನು ಹೊಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಹಿನ್ನಲೆ ಕಾರಿನ ಚಾಲಕನಾದ ವೆಂಕಟೇಶ್‌ ಎಂಬುವವರು ಜೆಡಿಎಸ್‌ ಕಾರ್ಯಕರ್ತರ ವಿರುದ್ದ ಚನ್ನಪಟ್ಟಣ ಗ್ರಾಮೀಣ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡ ಅಲ್ಲಿನ ಪೋಲೀಸರು ಇಂದು 14 ಜನ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಇದರ ಬೆನ್ನಲ್ಲೇ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್‌ ಕುಮಾರಸ್ವಾಮಿಯವರು ಭಾನುವಾರದಂದು ರಾಮನಗರಕ್ಕೆ ಭೇಟಿ ನೀಡಿದ್ದು, ಪ್ರಕರಣದ ಕುರಿತು ಡಿವೈಎಸ್‌ಪಿ ಓಂ ಪ್ರಕಾಶ್‌ ಜೊತೆ ಚರ್ಚೆ ನಡೆಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: 🟨 ಗಾಂಧಿ ಜನಯಂತಿ ಪ್ರಯುಕ್ತ ಸಾರ್ವಜನಿಕರಲ್ಲಿ ಪೌರಕಾರ್ಮಿಕರು ಹಾಗೂ ಮಾರ್ಷಲ್ಸ್ ಮನವಿ

🟨 ದಯವಿಟ್ಟು ಪೀಪಲ್ ಮೀಡಿಯಾ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ

https://fb.watch/fV5MIzhgVh/

Related Articles

ಇತ್ತೀಚಿನ ಸುದ್ದಿಗಳು