Friday, September 13, 2024

ಸತ್ಯ | ನ್ಯಾಯ |ಧರ್ಮ

ಸೀತಾರಾಂ ಯೆಚೂರಿ ಅವರನ್ನು ಕೊನೆಯ ಬಾರಿ ನೋಡಲು ತನ್ನ ಶಪಥ ಮುರಿದ ಸಿಪಿಎಂ ನಾಯಕ

ತಿರುವನಂತಪುರಂ: ಜೀವನದಲ್ಲಿ ಇನ್ನೆಂದೂ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುವುದಿಲ್ಲ ಪ್ರತಿಜ್ಞೆ ಮಾಡಿದ್ದ ಎಂದು ಸಿಪಿಎಂ ಮುಖಂಡರೊಬ್ಬರು ತಮ್ಮ ಪ್ರತಿಜ್ಞೆಯನ್ನು ಮುರಿದಿದ್ದಾರೆ. ಗುರುವಾರ ನಿಧನರಾದ ಕಮ್ಯುನಿಸ್ಟ್ ಯೋಧ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಅವರು ಇಂಡಿಗೋ ವಿಮಾನ ಬಳಸಿ ದೆಹಲಿಗೆ ಹೋದರು.

ಯೆಚೂರಿಯವರನ್ನು ಕೊನೆಯ ಬಾರಿಗೆ ನೋಡುವುದಕ್ಕಿಂತಲೂ ನನ್ನ ಶಪಥ ದೊಡ್ಡದಲ್ಲ ಎಂದು ಅವರು ಹೇಳಿದರು. ಜೂನ್ 13, 2022 ರಂದು, ಕೇರಳ ಸಿಎಂ ಪಿಣರಾಯಿ ವಿಜಯನ್, ಆ ರಾಜ್ಯದ ಸಿಪಿಎಂ ನಾಯಕ ಮತ್ತು ಎಲ್ಡಿಎಫ್ ಮಾಜಿ ಸಂಚಾಲಕ ಇಪಿ ಜಯರಾಜನ್ ಕಣ್ಣೂರಿನಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವಾಗ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ವಿಜಯನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಜಯರಾಜನ್ ಪ್ರತಿಭಟನಾಕಾರರನ್ನು ಪಕ್ಕಕ್ಕೆ ತಳ್ಳಿದ್ದರು.

ಈ ಘಟನೆಯ ಹಿನ್ನೆಲೆಯಲ್ಲಿ ಇಂಡಿಗೋ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡು ವಾರ ಮತ್ತು ಸಿಪಿಎಂ ನಾಯಕ ಜಯರಾಜನ್‌ಗೆ ಮೂರು ವಾರಗಳ ಪ್ರಯಾಣ ನಿಷೇಧ ಹೇರಿತ್ತು. ಈ ನಿರ್ಧಾರದಿಂದ ಅವರು ಕೋಪಗೊಂಡಿದ್ದರು. ತಾನು ಅಥವಾ ತನ್ನ ಕುಟುಂಬ ಸದಸ್ಯರು ಇನ್ನು ಮುಂದೆ ದೇಶೀಯ ಅಥವಾ ಅಂತರಾಷ್ಟ್ರೀಯ ಪ್ರಯಾಣಕ್ಕಾಗಿ ಇಂಡಿಗೋ ವಿಮಾನಗಳನ್ನು ಬಳಸುವುದಿಲ್ಲ ಎಂದು ಜಯರಾಜನ್ ಪ್ರತಿಜ್ಞೆ ಮಾಡಿದ್ದರು.
ಬದುಕಿನಲ್ಲಿ ಇನ್ನೊಮ್ಮೆ ಇಂಡಿಗೋ ವಿಮಾನ ಹತ್ತುವ ಪ್ರಮೇಯ ಬಂದರೆ ನಾನು ಪ್ರಯಾಣ ರದ್ದು ಮಾಡುತ್ತೇನೆ ಹೊರತು ಇಂಡಿಗೋ ವಿಮಾನ ಹತ್ತುವುದಿಲ್ಲ ಎಂದು ಹೇಳಿದ್ದರು. ಇಂಡಿಗೋಗಿಂತ ಉತ್ತಮ ಸೇವೆಗಳನ್ನು ಒದಗಿಸುವ ಹಲವಾರು ವಿಮಾನಯಾನ ಸಂಸ್ಥೆಗಳು ದೇಶದಲ್ಲಿವೆ ಎಂದೂ ಅವರು ಹೇಳಿದ್ದರು.

ಈ ನಡುವೆ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಗುರುವಾರ ನಿಧನರಾದರು. ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸದ ಪಕ್ಷದ ನಾಯಕ ಇ.ಪಿ.ಜಯರಾಜನ್ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ. ಗುರುವಾರ ರಾತ್ರಿ ಕರಿಪುರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹತ್ತಿ ದೆಹಲಿ ತಲುಪಿದ್ದರು. ಇಂಡಿಗೋದಲ್ಲಿ ಪ್ರಯಾಣಿಸದಿರಲು ಮಾಡಿದ್ದ ನಿರ್ಧಾರ ಸೀತಾರಾಮ್‌ ಯೆಚೂರಿಯವರಿಗಿಂತಲೂ ದೊಡ್ಡ ಎಂದು ಅವರು ಈ ಸಂಧರ್ಭದಲ್ಲಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page