Friday, June 14, 2024

ಸತ್ಯ | ನ್ಯಾಯ |ಧರ್ಮ

ಕ್ರೀಮ್ ಬಿಸ್ಕೆಟ್ ಅವಿನಾಶ್ ಅವರ ಐದನೇ ಬಿಸ್ಕೆಟ್,  ಸಾಥ್ ಕೊಟ್ಟ ಚಂದನವನದ ಸ್ಟಾರ್ಸ್

ಕ್ರೀಮ್ ಬಿಸ್ಕೆಟ್ ಎಂಟರ್ಟೈನ್ಮೆಂಟ್ಸ್ ಸಂಸ್ಥೆ ವತಿಯಿಂದ ಇತ್ತೀಚೆಗೆ ಕೊಂಡಜ್ಜಿ ಬಸಪ್ಪ ಆಡಿಟೋರಿಯಂನಲ್ಲಿ ಐದನೇ ಆವೃತ್ತಿಯ little, teen, mrs, Mr & miss Heritage Model of karnataka ಫ್ಯಾಷನ್ ಇವೆಂಟ್ ಗ್ರ್ಯಾಂಡ್ ಫಿನಾಲೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಾಲಿ ಡೇಸ್ ಸಿನಿಮಾ ಖ್ಯಾತಿಯ ನಟ ಪ್ರದೀಪ್, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್, ಕಾಮಿಡಿ ಕಿಲಾಡಿ ಖ್ಯಾತಿಯ ಲೋಕೇಶ್, ನಟ ಕಂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹಾಗೂ ಇನ್ನಿತರರು ಆಗಮಿಸಿದ್ದರು.

ಕ್ರೀಮ್ ಬಿಸ್ಕೆಟ್ ಎಂಟರ್ಟೈನ್ಮೆಂಟ್ಸ್ ಸಂಸ್ಥೆ ಮುಖ್ಯಸ್ಥ ಅವಿನಾಶ್ ಮಾತನಾಡಿ, ಕ್ರೀಮ್ ಬಿಸ್ಕೆಟ್ ಎಂಟರ್ ಟ್ರೈನ್ಮೆಂಟ್ ವತಿಯಿಂದ ನಡೆದ 5ನೇ ಆವೃತ್ತಿ ಬ್ಯೂಟಿ ಪೆಜೆಂಟ್ ಇದು. ಟೈಟಲ್ ಹೇಳುವಂತೆ ನಮ್ಮ ಪರಂಪರೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಒಬ್ಬರು ಒಂದೊಂದು ವಿಶೇಷ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಾರೆ. ಸ್ಪೆಷಲ್ ರೌಂಡ್ಸ್ ಇರುತ್ತದೆ. ಒಂದಷ್ಟು ಜನರನ್ನು ಆಡಿಷನ್ ಮಾಡಿ ಆಯ್ಕೆ ಮಾಡಲಾಗುತ್ತದೆ. ನಮ್ಮ ಕಂಪನಿ ಲಾಂಚ್ ಆಗಿ ಎರಡು ವರ್ಷವಾಯ್ತು. ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಹಾಗೂ ಶಿವಣ್ಣ ಸರ್ ಲೋಗೋ ಲಾಂಚ್ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.

ಈ ಸಂಸ್ಥೆಯ ವೆಬ್ ಸೈಟನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಿಕೊಟ್ಟಿದ್ದರು. ನೂರಕ್ಕೂ ಹೆಚ್ಚು ಸೆಲೆಬ್ರಿಟಿಗಳು ಸಪೋರ್ಟ್ ಈ ಸಂಸ್ಥೆಗೆ ಬೆಂಬಲ ಕೊಟ್ಟಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಈ ಫ್ಯಾಷನ್ ಶೋ ಆಯೋಜಿಸಲಾಗುತ್ತಿದ್ದು, ಮುಂದಿನ ಬಾರಿ ನಡೆಯುವ ಇವೆಂಟ್ ಗೆ ಶಿವಣ್ಣ ಆಗಮಿಸಲಿದ್ದಾರೆ ಅನ್ನೋ ಭರವಸೆ ಸಂಸ್ಥೆ ಕಡೆಯಿಂದ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು