Monday, July 28, 2025

ಸತ್ಯ | ನ್ಯಾಯ |ಧರ್ಮ

ಮಹರಾಷ್ಟ್ರ ಸರ್ಕಾರದ ಹೊಸ ನಿರ್ಣಯಕ್ಕೆ ವಿರೋಧ ಪಕ್ಷಗಳಿಂದ ಟೀಕೆ

ಮುಂಬೈ: ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಹೊಸ ನಿರ್ಣಯವನ್ನು ಕೈಗೊಂಡಿದ್ದು, ಇನ್ನು ಮುಂದೆ ಸರ್ಕಾರಿ ನೌಕರರು ದೂರವಾಣಿ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ಬದಲು ‘ವಂದೇ ಮಾತರಂ’ ಹೇಳ ಬೇಕೆಂದು ತಿಳಿಸಿದೆ.

ಮಹರಾಷ್ಟ್ರ ಸರ್ಕಾರ ಹೊರಡಿಸಿರುವ ಸುತ್ತೋಲೆಯೊಂದರಲ್ಲಿ,  ರಾಜ್ಯದ ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಅನುದಾನಿತ ಶಾಲೆ, ಕಾಲೇಜು ಮತ್ತು ಇತರ ಸಂಸ್ಥೆಗಳ ನೌಕರರು, ಕಚೇರಿ ಅಥವಾ ವೈಯಕ್ತಿಕ ಮೊಬೈಲ್‌ ಸಂಖ್ಯೆಗಳಿಗೆ ಬರುವ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ ಬದಲು ‘ವಂದೇ ಮಾತರಂ’ ಎಂದೇ ಹೇಳಬೇಕು’ಎಂದು ತಿಳಿಸಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಂಸ್ಕೃತಿ ಸಚಿವ ಸುಧೀರ್‌ ಮುಂಗಟಿವಾರ್‌ ಅವರು, ಇನ್ನು ಮುಂದೆ ʼಹಲೋʼ ಬದಲು ವಂದೇ ಮಾತರಂʼ ಎಂದೇ ಹೇಳಬೇಕೆಂದು ರಾಜ್ಯದ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸುಧೀರ್‌ ಮುಂಗಟಿವಾರ್‌

ದೂರವಾಣಿ ಕರೆಗಳನ್ನು ಸ್ವೀಕರಿಸುವಾಗ ʼಜೈ ಭೀಮ್‌ʼ  ʼಜೈ ಶ್ರೀರಾಮ್‌ʼ ಎಂದೂ ಅಥವಾ ಅವರ ಪೋಷಕರ ಹೆಸರನ್ನು ಹೇಳಿದರೂ ಅದಕ್ಕೆ ಸರ್ಕಾರದ ವಿರೋಧವಿಲ್ಲ. ಆದರೆ ʼಹಲೋʼ ಎಂದು ಕರೆಯುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಭಿಯಾನ ಕೈಗೊಂಡಿದ್ದೇವೆ ಎಂದು ಹೇಳಿದರು.

ಈ ಹಿನ್ನಲೆ ಮಹರಾಷ್ಟ್ರ ಸರ್ಕಾರದ ಹೊಸ ನಿರ್ಣಯದ ಕುರಿತು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page