Monday, August 4, 2025

ಸತ್ಯ | ನ್ಯಾಯ |ಧರ್ಮ

ಮೊಸಳೆ ಬಬಿಯಾ & ದೇವಸ್ಥಾನದ ಅರ್ಚಕ: ಮತ್ತೆ ಚರ್ಚೆಗೆ ಗ್ರಾಸವಾದ ಟ್ವೀಟ್‌

ಎರಡು ದಿನಗಳ ಹಿಂದೆ ದೇವರ ಮೊಸಳೆ ಎಂದು ಪ್ರಖ್ಯಾತಿಗೊಂಡಿದ್ದ ಕಾಸರಗೋಡಿನ ಮೊಸಳೆ ಬಬಿಯಾ ಸಾವನ್ನಪ್ಪಿತ್ತು. ಈ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಬಿಯಾ ಪೋಟೋಗಳನ್ನು ಹಾಕಿ ಸಂತಾಪ ಸೂಚಿಸಿದ್ದರು.

ಈ ವೇಳೆ ಮೊಸಳೆ ಬಬಿಯಾ ಕುರಿತು ಸಾಕಷ್ಟು ವಿಚಾರ ವೈರಲ್‌ ಆಗುತ್ತಿದ್ದು, ಬಬಿಯಾ ಸಸ್ಯಹಾರಿಯೋ? ಮಾಂಸಹಾರಿಯೋ? ಎಂಬ ಚರ್ಚೆ ನಡೆಯಿತು.

ಮೊಸಳೆ ಸಾವಿನ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ಬಬಿಯಾ ಸಸ್ಯಾಹಾರಿಯಾಗಿದ್ದು, ದೇವಾಲಯದಲ್ಲಿ ನಡೆಯುವ ಪೂಜೆಯ ನಂತರ ನೈವೇದ್ಯದ ಅಕ್ಕಿಯನ್ನು ಮತ್ತು ಬೆಲ್ಲವನ್ನು ಸೇವಿಸಿಸುತ್ತಿತ್ತು ಎನ್ನುವ ವಿಡಿಯೋಗಳು ಮತ್ತು ಪೋಟೋಗಳು ವೈರಲ್‌ ಆಗಿದ್ದವು. ಹೀಗಾಗಿ ಮೊಸಳೆ ಬಬಿಯಾ ಸಸ್ಯಹಾರಿ ಎಂದು ಹೇಳಲಾಗಿತ್ತು.

ಈ ಪೋಟೋ ಮತ್ತು ವಿಡಿಯೋಗಳಿಗೆ ಸಂಬಂಧಿಸಿದಂತೆ ಇನ್ನೋಂದು ಕಡೆ ಬಬಿಯಾ ಮೊಸಳೆ ಸಸ್ಯಹಾರಿ ಅಲ್ಲಾ ಮಾಂಸಹಾರಿ ಎಂದು ಬಬಿಯಾ ಕೋಳಿತಿನ್ನುವ ವಿಡಿಯೋಗಳು ಮತ್ತು ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಬಬಿಯಾ ಸಸ್ಯಹಾರಿ ಎನ್ನುವುದು ಸುಳ್ಳು ಎಂದು ಖಚಿತಪಡಿಸುವ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ.

ಆದರೆ ಈಗ ಬಬಿಯಾಗೆ ಸಂಬಂಧಿಸಿದ ಇಂತಹದ್ದೇ ಒಂದು ಪೋಟೋ ಮತ್ತೆ ಚರ್ಚೆಗೆ ಕಾರಣವಾಗಿದೆ. ಪೋಟೋದಲ್ಲಿರುವುದು ಬಬಿಯಾ ಮತ್ತೆ ದೇವಸ್ಥಾನದ ಅರ್ಚಕ ಅಲ್ಲಾ ಎಂದು ತಿಳಿದಿದೆ. ಈ ಹಿನ್ನಲೆಯಲ್ಲಿ ಟ್ವಿಟರ್‌ನಲ್ಲಿ ಮತ್ತೊಂದು ಚರ್ಚೆ ನಡೆಯುತ್ತಿದ್ದು, ಈ ಸುದ್ದಿ ಸಾಕಷ್ಟು ವೈರಲ್‌ ಆಗಿದೆ.

ಚರ್ಚೆಗೆ ಕಾರಣವಾದ ಪೋಟೋ

ಈ ಹಿನ್ನೆಯಲ್ಲಿ ಮೊಸಳೆ ಬಬಿಯಾ ಮತ್ತೆ ದೇವಸ್ಥಾನದ ಅರ್ಚಕ ಎಂದು ಹೇಳಲಾಗುತ್ತಿದ್ದ ಪೋಟೋ, ಕೋಸ್ಟರಿಕಾದ ಚಿಟೋ ಮತ್ತೆ ಪೂಚೊ ಮೊಸಳೆಯಾಗಿದ್ದು, photo, I swim with crocodile documentary ಯಿಂದ ಕದಿಯಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಮಧು ಎಂಬ ವ್ಯಕ್ತಿ ಮೊಸಳೆ ಮತ್ತು ವ್ಯಕ್ತಿಯ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಪೋಟೋದಲ್ಲಿರುವುದು ಬಬಿಯಾ ಮತ್ತು ಅರ್ಚಕರಲ್ಲ ಎಂದು ಹೇಳಲಾಗುತ್ತಿದ್ದು, ಇದು ಇನ್ನೊಂದು ಚರ್ಚೆಗೆ ದಾರಿಮಾಡಿಕೊಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page