Home ರಾಜ್ಯ ಚಿತ್ರದುರ್ಗ ಮುಸ್ಲಿಮರಲ್ಲೂ ಒಳಮೀಸಲಾತಿ ತರಬೇಕು: ಸಿ ಟಿ ರವಿ

ಮುಸ್ಲಿಮರಲ್ಲೂ ಒಳಮೀಸಲಾತಿ ತರಬೇಕು: ಸಿ ಟಿ ರವಿ

0

ಚಿತ್ರದುರ್ಗ: ಮುಸ್ಲಿಂ ಸಮುದಾಯದಲ್ಲಿ 48 ಉಪಜಾತಿಗಳಿದ್ದು, ಅವರಲ್ಲಿ ಹೆಚ್ಚಿನವರು ಬಡವರು ಮತ್ತು ಹಿಂದುಳಿದವರು. ಈ ನಿಟ್ಟಿನಲ್ಲಿ ಸರ್ಕಾರವು ಮುಸ್ಲಿಮರಿಗೆ ಅವರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಾನಮಾನದ ಆಧಾರದ ಮೇಲೆ ಒಳ ಮೀಸಲಾತಿಯನ್ನು ಒದಗಿಸಬೇಕು ಮತ್ತು ಆ ಮೂಲಕ ಅವರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ಹೇಳಿದ್ದಾರೆ.

ಮುಸ್ಲಿಮರು ಮತ್ತು ಒಬಿಸಿಗ ಸಮುದಾಯಗಳಲ್ಲಿ ಸಾಕಷ್ಟು ಬಡವರಿದ್ದಾರೆ, ರಾಜ್ಯ ಸರ್ಕಾರವು ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಡಿ ನಿರ್ಗತಿಕರಿಗೆ ಒಳ ಮೀಸಲಾತಿ ನೀಡಬೇಕು ಎಂದು ರವಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

“ಬಿಜೆಪಿಯನ್ನು ದಲಿತ ಮತ್ತು ಮೀಸಲಾತಿ ವಿರೋಧಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವವೆಂದರೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮೀಸಲಾತಿಯನ್ನು ವಿರೋಧಿಸಿದ್ದರು. ಇತ್ತೀಚೆಗೆ ನೆಹರು ಅವರು ಮೀಸಲಾತಿ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಬರೆದ ಪತ್ರವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು.

ನೆಹರು ಪತ್ರವನ್ನು ಉಲ್ಲೇಖಿಸಿ ಮೋದಿ “ದೇಶದ ಮೊದಲ ಪ್ರಧಾನಿ ಮೀಸಲಾತಿಯ ಪರವಿರಲಿಲ್ಲ. ಅವರಿಗೆ ಹೆಚ್ಚಿಗೆ ಉದ್ಯೋಗ ಕೊಡುವುದರಲ್ಲೂ ನೆಹರೂ ಅವರಿಗೆ ಆಸಕ್ತಿ ಇರಲಿಲ್ಲ. ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಬಿಜೆಪಿ ಹೆಚ್ಚಿಸಿದ್ದು” ಎಂದು ಹೇಳಿದ್ದರು ಎಂದು ಸಿಟಿ ರವಿ ಈ ಸಂದರ್ಭದಲ್ಲಿ ಹೇಳಿದರು.

You cannot copy content of this page

Exit mobile version