Friday, July 11, 2025

ಸತ್ಯ | ನ್ಯಾಯ |ಧರ್ಮ

ಈಶಾನ್ಯ ಮತ್ತು ಪಶ್ಚಿಮ ರಾಜ್ಯಗಳಲ್ಲಿ ‘ಪ್ರತ್ಯೇಕ’ ಹಿಂಸಾಚಾರ

ಈಶಾನ್ಯ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಪ್ರತ್ಯೇಕ ರಾಜ್ಯಗಳಿಗಾಗಿ ಹಿಂಸಾಚಾರ ಮುಂದುವರಿದಿದೆ. ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾಕಾರರು ಸ್ವತ್ತುಗಳನ್ನು ಧ್ವಂಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಿಂದ ಡಾರ್ಜಿಲಿಂಗ್ ಪ್ರತ್ಯೇಕಿಸುವಂತೆ ಆಗ್ರಹಿಸಿ ಗೂರ್ಖಾ ಜನಮುಕ್ತಿ ಮೋರ್ಚಾ ಶನಿವಾರದಿಂದ ಅನಿರ್ದಿಷ್ಟಾವಧಿ ಬಂದ್ ಆರಂಭಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಡಾರ್ಜಿಲಿಂಗ್, ಕಾಲಿಂಪಾಂಗ್ ಮತ್ತು ಕುರ್ಸಿಯಾಂಗ್‌ನಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ಮುಚ್ಚಲಾಗಿದೆ. ಆಂದೋಲನಕಾರರು ರಾಮಮ್-ರಿಂಬಿಕ್ ನಿಪ್ಪಾನ್ ಜಲವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆಯನ್ನು ಬಲವಂತವಾಗಿ ತಡೆದರು. ಮತ್ತೊಂದೆಡೆ… ಅಸ್ಸಾಂನಲ್ಲಿ ಆಂದೋಲನಗಳು ಹೆಚ್ಚುತ್ತಿವೆ. ದೀಪು-ಡೊಲ್ಡೊಲಿ ನಿಲ್ದಾಣಗಳ ನಡುವಿನ ಹಳಿಗಳನ್ನು ಕಿತ್ತು ಹಾಕಿದ ಕಾರಣ ರೈಲು ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.

ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಅನಿರ್ದಿಷ್ಟ ಕರ್ಫ್ಯೂ ಮುಂದುವರೆದಿದೆ. ಏತನ್ಮಧ್ಯೆ, ಪ್ರತ್ಯೇಕ ಬೋಡೋಲ್ಯಾಂಡ್ ರಚನೆ ಮಾಡಂದಂತೆ ಒತ್ತಾಯಿಸಿ 27 ಬೋಡೊಯೇತರ ಸಮುದಾಯಗಳು ಶನಿವಾರ 36 ಗಂಟೆಗಳ ಬಂದ್ ಆರಂಭಿಸಿವೆ. ಇದರಿಂದಾಗಿ ಕೆಳ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page