Friday, June 14, 2024

ಸತ್ಯ | ನ್ಯಾಯ |ಧರ್ಮ

ಬೌದ್ಧ ದಮ್ಮದ ಮೇಲೆ ಸೈಬರ್ ದಾಳಿ

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬೌದ್ದ ದಮ್ಮದ ಬಗ್ಗೆ ವಿಶ್ವಕ್ಕೆ ಜ್ಞಾನ ನೀಡುತ್ತಿದ್ದ ಅನೇಕ ಫೇಸ್ಬುಕ್ (facebook) ಖಾತೆಗಳು ಒಂದೇ ದಿನದಲ್ಲಿ ಹ್ಯಾಕ್ ಆಗಿದ್ದು, ಇತಿಹಾಸದ ಬಗ್ಗೆ ಮಾಹಿತಿ ತುಂಬಿಕೊಂಡಿದ್ದ ಖಾತೆಗಳು ಈಗ ಅಶ್ಲೀಲ ವಿಡಿಯೋಗಳಿಂದ ತುಂಬಿಹೋಗಿವೆ.

ಬೌದ್ಧ ದಮ್ಮ, ಭಾರತೀಯ ಸಂಸ್ಕೃತಿ, ಭಾರತ ಕಳೆದುಕೊಂಡ ಚಕ್ರವರ್ತಿಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದಿನ ಮಾಹಿತಿಯನ್ನು ತಿಳಿಸುತ್ತಿರುವ ಹೆಸರಾಂತ ಫೇಸ್ಬುಕ್‌ ಖಾತೆಗಳಾದ, ದಿ ಲ್ಯಾಂಡ್‌ ಆಫ್‌ ಬುದ್ಧ, ಅಶೋಕ: ದಿ ಸರ್ಚ್‌ ಫಾರ್‌ ಇಂಡಿಯಾ ಲಾಸ್‌ ಎಂಪೆರೋರ್‌, ಬುದ್ಧ ಲೈವ್‌, ಇಂಡಿಯನ್‌ ಕಲ್ಚರ್‌ ಭಾರತೀಯ ಸಂಸ್ಕೃತಿ ಖಾತೆಗಳನ್ನು ಕೆಲವರು ಕಿಡಿಗೇಡಿಗಳು ಹ್ಯಾಕ್‌ ಮಾಡಿದ್ದು, ಇತಿಹಾಸದ ಮಾಹಿತಿ ತುಂಬಿದ್ದ ಈ ಖಾತೆಗಳಲ್ಲಿ, ಈಗ ಅಶ್ಲೀಲ ವಿಡಿಯೋಗಳನ್ನು ತುಂಬಿದ್ದಾರೆ.

ದಿ ಲ್ಯಾಂಡ್‌ ಆಫ್‌ ಬುದ್ಧ

ದಿ ಲ್ಯಾಂಡ್‌ ಆಫ್‌ ಬುದ್ಧ ಫೇಸ್ಬುಕ್‌ ಖಾತೆ ಮುಖಪುಟ

ಬೌದ್ದ ದಮ್ಮದ ಬಗ್ಗೆ ಸಾವಿರಾರು ವರ್ಷಗಳ ಇತಿಹಾಸದ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದ ಫೇಸ್ಬುಕ್‌ ಖಾತೆ, ಈ ಖಾತೆಯಲ್ಲಿ ಸುಮಾರು 4.7 ಲಕ್ಷಜನ ಇದನ್ನು ಅನುಸರಿಸುತ್ತಿದ್ದು, 2,220 ವರ್ಷಗಳ ಇತಿಹಾಸ, ವಾಸ್ತು ಶಿಲ್ಪ, ಕೆಲವು ಪ್ರೇಕ್ಷಣೀಯ ಸ್ಥಳಗಳು ಮತ್ತು ಬುದ್ಧನ ಬಗ್ಗೆ ಮಾಹಿತಿ ನೀಡುತಿತ್ತು.

ಅಶೋಕ: ದಿ ಸರ್ಚ್‌ ಫಾರ್‌ ಇಂಡಿಯಾ ಲಾಸ್‌ ಎಂಪೆರರ್‌

ಅಶೋಕ: ದಿ ಸರ್ಚ್‌ ಫಾರ್‌ ಇಂಡಿಯಾ ಲಾಸ್‌ ಎಂಪೆರೋರ್‌ ಫೇಸ್ಬುಕ್‌ ಖಾತೆ ಮುಖಪುಟ

ಈ ಖಾತೆಯಲ್ಲಿ ಅಶೋಕ ಚಕ್ರವರ್ತಿಯ ಬಗ್ಗೆ ಹಲವಾರು ಹುಡುಕಾಟಗಳನ್ನು ಮಾಡಿ ಚಕ್ರವರ್ತಿಯ ಬಗ್ಗೆ ಅಪಾರ ಮಾಹಿತಿ ನೀಡುವ ಖಾತೆಯಾಗಿದ್ದು, ಸುಮಾರು 86 ಸಾವಿರ ಅನುಯಾಯಿ(FOLLOWERS)ಗಳನ್ನು ಹೊಂದಿತ್ತು. 1 ನೇ ಶತಮಾನದಲ್ಲಿ ಅಶೋಕ ಚಕ್ರವರ್ತಿಯ ಸಾಧನೆಗಳು ಜೀವನ ಚರಿತ್ರೆಯ ಬಗ್ಗೆ ಹಲವು ಮಾಹಿತಿಗಳನ್ನು ಆಧಾರಗಳ ಸಮೇತ ಜನರಿಗೆ ತಿಳಿಸುವ ಪ್ರಯತ್ನವನ್ನು ಈ ಖಾತೆ ನಡೆಸುತ್ತಿತ್ತು.

ದಿ ಬುದ್ಧ ಲೈವ್‌

ದಿ ಲೈವ್‌ ಬುದ್ಧ ಫೇಸ್ಬುಕ್‌ ಖಾತೆ ಮುಖಪುಟ

ಈ ಖಾತೆಯೂ ಕೂಡ ಸುಮಾರು 39 ಸಾವಿರ ಅನುಯಾಯಿಗಳನ್ನು ಹೊಂದಿದ್ದು, ಈ ಖಾತೆಯಲ್ಲೂ ಕೂಡ ಬುದ್ಧನ ಜೀವನ ಮತ್ತು ಬುದ್ಧ ದಮ್ಮದ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು.

ಇಂಡಿಯನ್‌ ಕಲ್ಚರ್‌ ಭಾರತೀಯ ಸಂಸ್ಕೃತಿ

ಇಂಡಿಯನ್‌ ಕಲ್ಚರ್‌ ಭಾರತೀಯ ಸಂಸ್ಕೃತಿ ಫೇಸ್ಬುಕ್‌ ಖಾತೆ ಮುಖಪುಟ

ಈ ಖಾತೆ ಸುಮಾರು 36 ಸಾವಿರ ಜನ ಅನುಯಾಯಿಗಳನ್ನು ಹೊಂದಿದ್ದು, ಭಾರತದಲ್ಲಿ ಜೀವಿಸಿದ್ದ ಧರ್ಮಗಳು, ಮತ್ತು ಅಂದಿನ ಸಂಸ್ಕೃತಿಗಳ ಬಗ್ಗೆ ಮಾಹಿತಿ ದೊರಕಿಸಿಕೊಡುವ ಮೂಲಕ ಭಾರತೀಯ ಸಂಸ್ಕೃತಿಗಳ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿತ್ತು.

ಇಷ್ಟೆಲ್ಲಾ ಮಾಹಿತಿ ನೀಡುತ್ತಿದ್ದ ಈ ಎಲ್ಲಾ ಫೇಸ್ಬುಕ್‌ ಖಾತೆಗಳನ್ನು ಕೆಲವರು ಹ್ಯಾಕ್‌ ಮಾಡಿದ್ದು, ಅದರಲ್ಲಿ ಅಶ್ಲೀಲ ವಿಡಿಯೋಗಳನ್ನು ಹಾಕಿ ಜನರಿಗೆ ಅಸಹ್ಯವಾಗುವ ರೀತಿ ವಿಡಿಯೋಗಳನ್ನು ಪೋಸ್ಟ್‌ ಮಾಡಲಾಗಿದೆ. ಆದರೆ ಈ ಎಲ್ಲಾ ಖಾತೆಗಳಲ್ಲಿ ಒಂದೇ ರೀತಿಯ ವಿಡಿಯೋಗಳನ್ನು ಪೋಸ್ಟ್‌ ಮಾಡಲಾಗಿದ್ದು, ಹ್ಯಾಕ್‌ ಮಾಡಿರುವ ವ್ಯಕ್ತಿ ಒಬ್ಬನೇ ಎನ್ನುವ ಅನುಮಾನ ಮೂಡಿಬರುತ್ತಿದೆ. ಇದನ್ನು ಗಮನಿಸಿದರೆ ಹ್ಯಾಕ್‌ ಮಾಡಿರುವುದು ಉದ್ದೇಶಪೂರ್ವಕ ಎಂದು ತಿಳಿದುಬರುತ್ತದೆ.

https://www.facebook.com/100046749980713/posts/652053836362943/?flite=scwspnss&mibextid=OtP56OL7i5FDo4lP

ಸಾಮಾಜಿಕ ಜಾಲತಾಣಗಳಲ್ಲಿ ಜನರು ಅತೀ ಹೆಚ್ಚು ಬಳಸುವ ಆಪ್‌ಗಳಲ್ಲಿ ಫೇಸ್ಬುಕ್‌ ಕೂಡ ಒಂದಾಗಿದ್ದು, ಇತ್ತೀಚಿಗೆ ಹಲವಾರು ಜನರ ಫೇಸ್ಬುಕ್‌ ಖಾತೆಗಳನ್ನು ಹ್ಯಾಕ್‌ ಮಾಡಲಾಗುತ್ತಿದೆ. ಈ ಹಿನ್ನಲೆ ಜನರು ಯಾವುದಾದರು ಮಾಹಿತಿ ಹಂಚಿಕೊಳ್ಳಲು ಸಾಮಾಜಿಕ ತಾಣಗಳು ಸುರಕ್ಷಿತವಲ್ಲ ಎಂದು ಮತ್ತೆ-ಮತ್ತೆ ಸಾಬೀತುಪಡಿಸುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು