Tuesday, November 12, 2024

ಸತ್ಯ | ನ್ಯಾಯ |ಧರ್ಮ

ಕೋವಿಡ್ ಕಾಲದ ಭ್ರಷ್ಟಾಚಾರ; ಸ್ಪೋಟಕ ಮಧ್ಯಂತರ ವರದಿ ಹೊರ ಹಾಕಿದ ನ್ಯಾ.ಡಿ.ಕುನ್ಹಾ ಸಮಿತಿ

ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಕಾಲದ ಭ್ರಷ್ಟಾಚಾರ ಈಗ ಬಗೆದಷ್ಟೂ ಅಕ್ರಮ ಹೊರ ಬೀಳುತ್ತಿದೆ. ಅದರಲ್ಲೂ ವಿಶೇಷವಾಗಿ ಆಗಿನ ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿಗೆ ಸಮಿತಿ ತೀವ್ರ ಅಸಮಾಧಾನ ಹೊರಹಾಕಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ನಾ ಅವರ ನೇತೃತ್ವದಲ್ಲಿ ರಚನೆಯಾದ ಆಯೋಗ ಹೊರತಂದ ಮಧ್ಯಂತರ ವರದಿಯ ಅನ್ವಯ ಖಾಸಗಿ ಲ್ಯಾಬ್​ಗಳಿಗೆ 6.93ಕೋಟಿ ಹಣ ಸಂದಾಯವಾಗಿದೆ. ಆದ್ರೆ 14 ಲ್ಯಾಬ್​ಗಳು ICMRನಿಂದ ಮಾನ್ಯತೆ ಪಡೆದಿಲ್ಲ. ಈ ICMR ಲ್ಯಾಬ್​ಗಳು ಅಧಿಕೃತ ಅಲ್ಲ ಎಂದು ಜಾನ್ ಮೈಕೆಲ್ ಡಿ ಕುನ್ಹಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ RTPCR ಟೆಸ್ಟ್​ಗೆ ಲ್ಯಾಬ್​ಗಳ ಸಾಮರ್ಥ್ಯ, ಕ್ಷಮತೆ ಗುರುತಿಸಿಲ್ಲ. ಸಾಮರ್ಥ್ಯ, ಕ್ಷಮತೆ ಪರಿಶೀಲಿಸದೆ ಲ್ಯಾಬ್​ಗಳಿಗೆ ಅನುಮತಿ ನೀಡಲಾಗಿದೆ. 6 ಖಾಸಗಿ ಲ್ಯಾಬ್ ಗಳಿಗೆ ಒಪ್ಪಂದವಿಲ್ಲದೆ ಹಣ ಸಂದಾಯ ಮಾಡಲಾಗಿದೆ. 8 ಲ್ಯಾಬ್​ಗಳಿಗೆ ಅನುಮತಿ ಪಡೆಯದೆ 4.28 ಕೋಟಿ ಹಣ ನೀಡಲಾಗಿದೆ. ಕಾರ್ಯಾದೇಶವಿಲ್ಲದೆ ಖಾಸಗಿ ಲ್ಯಾಬ್​ಗಳು ಬಿಲ್ ನೀಡಿವೆ. ಅನಧಿಕೃತವಾಗಿ ಲ್ಯಾಬ್​ಗಳಿಗೆ ಹಣ ಸಂದಾಯ ಮಾಡಿದ ಬಗ್ಗೆ ಮಧ್ಯಂತರ ವರದಿ ನೀಡಲಾಗಿದೆ.

ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ವಿಧಿಸಿ ಪಿಪಿಇ ಕಿಟ್ ಖರೀದಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ಜನರ ಹೆಣದ ಮೇಲೆ ಹಣ ಮಾಡಿದೆ. ಇದರಿಂದಾಗಿ 49 ಕೋಟಿ ವಸೂಲಿ ಮಾಡಲು ಕುನ್ನಾ ಕಮೀಟಿ ವರದಿ ನೀಡಿದೆ. ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆಯಲ್ಲೂ ಭಾರಿ ಮೊತ್ತದ ಭ್ರಷ್ಟಾಚಾರ ಆಗಿದೆ. ಪಿಪಿಇ ಕಿಟ್, ಸಿಟಿ ಸ್ಕ್ಯಾನ್, ವೆಂಟಿಲೆಟರ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಈಗಾಗಲೇ ಇಲಾಖೆ ಹಿಂದಿನ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದೇವೆ. ಕಿದ್ವಾಯಿ ಅಸ್ಪತ್ರೆಯ RTPCR ಟೆಸ್ಟಿಂಗ್ ನಲ್ಲಿ 200 ಕೋಟಿಗೂ ಹೆಚ್ಚು ಅವ್ಯವಹಾರ ಮಾಡಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ ಅವರ ಸಮಿತಿಯ ವರದಿಯಲ್ಲಿ ತಿಳಿಸಿದ್ದಾರೆ.

ಇದು ಕೇವಲ ಮಧ್ಯಂತರ ವರದಿ. ಅಂತಿಮ ವರದಿಯಲ್ಲಿ ಇನ್ನು ಬಹಳಷ್ಟು ಭ್ರಷ್ಟಾಚಾರ ಬಯಲಾಗುತ್ತೆ ಎನ್ನುವ ಮೂಲಕ ಬಿಜೆಪಿ ಸರ್ಕಾರದಲ್ಲಿ ಆದ ದೊಡ್ಡ ಭ್ರಷ್ಟಾಚಾರದ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿ ನಿರೀಕ್ಷೆಗೆ ಎದುರು ನೋಡುವಂತೆ ಸಮಿತಿ ಮಾಹಿತಿ ಹೊರಹಾಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page