Monday, June 17, 2024

ಸತ್ಯ | ನ್ಯಾಯ |ಧರ್ಮ

ಚಿತ್ರಪಟ: ಸಾಣೆಹಳ್ಳಿಯಲ್ಲಿ ಕಂಡ ದಕ್ಲಕಥಾ ದೇವಿಕಾವ್ಯದ ದೃಶ್ಯಗಳು

“ನನಗೆ ಅಸ್ಪೃಶ್ಯತೆಯ ಅನುಭವ ಸ್ವಮರುಕ ಅಥವಾ ಸ್ವರತಿಯಂತಹ ಮನೋರೋಗವಲ್ಲ. ಕೀಳರಿಮೆಯಲ್ಲ. ಆರಾಧನೆ ಅಥವಾ ಅಹಂ ಅಲ್ಲ. ಅಸ್ಪೃಶ್ಯತೆಯ ಅನುಭವ ಒಂದು ಅರಿವು. ನಿಜಮನುಷ್ಯನನ್ನು ಕಾಣುವ ಬೆಳಕು. ಹಸಿದವನಿಗೆ ಅನ್ನವೇ ಗುರು. ಹುಟ್ಟಿದ ಬಳಿಕ ಮುಟ್ಟಬಾರದವನಾದವನಿಗೆ ಮೊದಲು ಮುಟ್ಟಿದ ಜೀವವೇ ಗುರು. ಈ ಅರಿವು ಎಂತಹ ಗುರುವೆಂದರೆ ಆರಡಿ ಮನುಷ್ಯನನ್ನು ಮೂರಡಿಗೆ ಕುಗ್ಗಿಸಿ ಇಡೀ ಮನುಷ್ಯನನ್ನು ನನ್ನ ಎದುರಿಗೆ ಬೆತ್ತಲಾಗಿಸಿ ಮನುಷ್ಯನೆಂದರೆ ಇವನೇನಾ ನೋಡು, ನಿನ್ನೊಳಗೆ ನೀನು ಕೇಳಿಕೋ ಎಂದು ಕೆಣಕುತ್ತದೆ. ನಿನ್ನೊಳಗಿನ ನಿಜಮನುಷ್ಯನನ್ನು ಹುಡುಕು. ಈ ಹುಡುಕಾಟ ಒಂದು ಮಹಾಪ್ರಯಾಣ. ನೀನು ಒಬ್ಬ ಪ್ರಯಾಣಿಕ ಎಂಬುದು ಗುರುಬೋಧನೆ” – ಪ್ರೊ.ಕೆ ಬಿ ಸಿದ್ದಯ್ಯ.

ಹಿರಿಯ ಕವಿ ಪ್ರೊ.ಕೆ.ಬಿ.ಸಿದ್ದಯ್ಯ ಅವರ ಖಂಡಕಾವ್ಯವಾದ ದಕ್ಲಕಥಾ ದೇವಿ ಕಾವ್ಯವನ್ನು ಯುವ ರಂಗನಿರ್ದೇಶಕ ಲಕ್ಷ್ಮಣ ಕೆ.ಪಿ ನಾಟಕರೂಪಕ್ಕೆ ಮಾರ್ಪಡಿಸಿ ನಿರ್ದೇಶನ ಮಾಡಿದ್ದಾರೆ. ಜಂಗಮ ಕಲೆಕ್ಟಿವ್‌ ತಂಡ ಇದನ್ನು ಅಭಿನಯಿಸಿ ಪ್ರದರ್ಶಿಸುತ್ತಿದೆ. ಈ ನಾಟಕವು ಕನ್ನಡ ರಂಗಭೂಮಿಯಲ್ಲಿ ಒಂದು ವಿನೂತನ ಪ್ರಯೋಗವಾಗಿದ್ದು ಹೊಸ ಅನುಭೂತಿಯನ್ನು ನೀಡುತ್ತಾ ನಾಡಿನಲ್ಲಿ ಒಂದು ಹೊಸ ಬಗೆಯ ಸಂಸ್ಕೃತಿ ಚರ್ಚೆಗೆ ಎಡೆಮಾಡಿದೆ.  

ಹಿರಿಯ ರಂಗಕರ್ಮಿ ಹಾಗೂ ಹವ್ಯಾಸಿ ಫೋಟೋಗ್ರಾಫರ್ ಐವನ್‌ ಡಿ ಸಿಲ್ವಾ ಅವರು ಸಾಣೆಹಳ್ಳಿಯಲ್ಲಿ ನಡೆದ ದಕ್ಲಕಥಾ ದೇವಿಕಾವ್ಯದ ದೃಶ್ಯಗಳನ್ನು ಪೀಪಲ್‌ ಮೀಡಿಯಾ ಚಿತ್ರಪಟಕ್ಕಾಗಿ ಸೆರೆ ಹಿಡಿದಿದ್ದಾರೆ.

ಐವನ್‌ ಡಿ ಸಿಲ್ವಾ, ರಂಗಕರ್ಮಿ, ಹವ್ಯಾಸಿ ಫೊಟೋಗ್ರಾಫರ್

Related Articles

ಇತ್ತೀಚಿನ ಸುದ್ದಿಗಳು