Friday, June 14, 2024

ಸತ್ಯ | ನ್ಯಾಯ |ಧರ್ಮ

ದಕ್ಷಿಣದ ಚಿತ್ರಗಳಿಗೆ ಡಬ್ಬಿಂಗ್ ಮಾಡುವ 8 ಕಲಾವಿದರು

ಎಸ್ ಎಸ್ ರಾಜಮೌಳಿ ಅವರ ಬಾಹುಬಲಿ ಚಿತ್ರದ ಯಶಸ್ಸಿನೊಂದಿಗೆ ದಕ್ಷಿಣ ಭಾರತದ ಚಲನಚಿತ್ರಗಳ ಹಿಂದಿ ಡಬ್ಬಿಂಗ್ ಆವೃತ್ತಿಗೆ ಬೇಡಿಕೆಯು ಗಗನಕ್ಕೇರಿದೆ. ಬಾಹುಬಲಿ ಮತ್ತು ಕೆಜಿಎಫ್ ಸಿನಿಮಾಗಳ ಮೊದಲು ದೇಶದ ಇತರ ಭಾಗಗಳಲ್ಲಿನ ಜನರು ದಕ್ಷಿಣದ ಚಲನಚಿತ್ರಗಳ ಬಗ್ಗೆ ಅಷ್ಟಾಗಿ ಆಸಕ್ತಿ ಹೊಂದಿರಲಿಲ್ಲ. ಆದರೆ ಈಗ ಇಂಥ ಕೆಲವು ಚಲನಚಿತ್ರಗಳು ದೇಶಾದ್ಯಂತ ದಕ್ಷಿಣ ಚಲನಚಿತ್ರಗಳ ಜನಪ್ರಿಯತೆಯನ್ನು ಹೆಚ್ಚಿಸಿವೆ.

ಅಲ್ಲಿನ ಜನರು ತಮ್ಮ ನೆಚ್ಚಿನ ಸೌತ್ ಸೂಪರ್ ಸ್ಟಾರ್‌ಗಳ ಬಾಯಿಂದ ಹಿಂದಿ ಡೈಲಾಗ್‌ಗಳನ್ನು ಕೇಳಿ  ಇಷ್ಟಪಟ್ಟಿದ್ದಾರೆ. ಆದರೆ ಆ ಡೈಲಾಗ್ ಗಳನ್ನು ಹೇಳಿದವರು ಆ ನಟ ಅಲ್ಲ ಅನ್ನೋದು ಪ್ರೇಕ್ಷಕರಿಗೆ ತಿಳಿದಿಲ್ಲ.

ಈ ದಕ್ಷಿಣ ಭಾರತದ ನಟರ ಹಿಂದಿ ಧ್ವನಿಗಳನ್ನು ಸಾಮಾನ್ಯವಾಗಿ ಅನುಭವಿ ಡಬ್ಬಿಂಗ್ ಕಲಾವಿದರಿಂದ ಡಬ್ ಮಾಡಲಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ದಕ್ಷಿಣ ಭಾರತದ ನಟರಿಗೆ ಹಿಂದಿ ಡಬ್ಬಿಂಗ್ ಮಾಡಲು ಪ್ರಸಿದ್ಧ ಬಾಲಿವುಡ್ ನಟರ ಡಬ್ಬಿಂಗ್ ಸಹಾಯವನ್ನು ಪಡೆಯುತ್ತಾರೆ.

ಇದು ಹೊಸದೇನು ಅಲ್ಲ. ಆದರೆ ಇತ್ತೀಚೆಗೆ ಇಂಥ ವಾಯ್ಸ್ ಓವರ್ ಆರ್ಟಿಸ್ಟ್ ಗಳು ತಮ್ಮ ವಿಶಿಷ್ಟ ಧ್ವನಿಯಿಂದಾಗಿ ಖ್ಯಾತಿಯನ್ನು ಪಡೆಯಲಾರಂಭಿಸಿದ್ದಾರೆ ಅನ್ನೋದು ಸತ್ಯ. ಅವರಿಗೆ ಸಲ್ಲಬೇಕಾದ ಮನ್ನಣೆ ಈಗ ಸಿಗುತ್ತಿದೆ.

ಆದ್ದರಿಂದ, ಈಗ ಖ್ಯಾತಿ ಗಳಿಸುತ್ತಿರುವ ಆ ಡಬ್ಬಿಂಗ್ ಕಲಾವಿದರ ಪಟ್ಟಿಯನ್ನು ನಿಮ್ಮದುರು ಇಡುತ್ತಿದ್ದೇವೆ.

1 ಸಂಕೇತ್ ಮಾತ್ರೆ

ಪ್ರಸಿದ್ಧ ಧ್ವನಿ ಕಲಾವಿದರಾದ ಸಂಕೇತ್ ಮಾತ್ರೆ ಅವರು ಚೂಡನ್ (ದಿ ರಿಯಲ್ ಟೈಗರ್), ಶ್ರೀಮಂತುಡು (ದಿ ರಿಯಲ್ ತೇವರ್), ಮತ್ತು ಆಗಡು (ಎನ್‌ಕೌಂಟರ್ ಶಂಕರ್), ಹಾಗೆಯೇ ಜೈ ಭೀಮ್, ಸೂರರೈ ಪೊಟ್ರು ಮತ್ತು ಕಪ್ಪಾನ್‌ನಲ್ಲಿ ಸೂರ್ಯ, ಮಹೇಶ್ ಬಾಬುಗೆ ಹಿಂದಿ ಧ್ವನಿಯನ್ನು ನೀಡಿದ್ದಾರೆ.

ಎನ್ಟಿಆರ್ ಜೂನಿಯರ್ ಮತ್ತು ರಾಮ್ ಪೋತಿನೇನಿ ಕೂಡ ಸಂಕೇತ್ ಅವರ ಧ್ವನಿಯನ್ನು ತಮ್ಮ ಡಬ್ಬಿಂಗ್ ಚಲನಚಿತ್ರಗಳಲ್ಲಿ ಬಳಸಿದ್ದಾರೆ.

2. ಶ್ರೇಯಸ್ ತಲ್ಪಾಡೆ

ವೆಲ್ಕಮ್ ಟು ಸಜ್ಜನ್ ಪುರ್, ಇಕ್ಬಾಲ್, ಗೋಲ್ಮಾಲ್ ಸರಣಿಯ ಬಾಲಿವುಡ್ ತಾರೆ ಶ್ರೇಯಸ್ ತಲ್ಪಾಡೆ ಅಲ್ಲು ಅರ್ಜುನ್ ಅವರ  ಪುಷ್ಪದಲ್ಲಿ ತಮ್ಮ ವಾಯ್ಸ್ ನ ಝಲಕ್ ತೋರಿಸಿದ್ದಾರೆ. ಹೌದು, ಪುಷ್ಪ ಚಿತ್ರದ ಹಿಂದಿ ಅವತರಣಿಕೆಯಲ್ಲಿ ಅಲ್ಲು ಅರ್ಜುನ್ ಪಾತ್ರಕ್ಕೆ ಧ್ವನಿ ನೀಡಿರುವ ನಟ ಶ್ರೇಯಸ್ ತಲ್ಪಡೆ. ವರದಿಗಳ ಪ್ರಕಾರ, ಅವರು ಈಗ ಅಲ್ಲು ಅರ್ಜುನ್ ಅವರ ಮುಂಬರುವ ಹಿಂದಿ ಬ್ಲಾಕ್‌ಬಸ್ಟರ್ ಅಲಾ ವೈಕುಂಠಪುರಮುಲೋ’ಗು ಧ್ವನಿ ನೀಡಲಿದ್ದಾರೆ,

3. ವಿನೋದ್ ಕುಲಕರ್ಣಿ

ಆರ್ಯ 2, ಪವರ್, ರೆಬೆಲ್, ಮತ್ತು ಕಂಡಿರೀಗದಂತಹ ಚಿತ್ರಗಳಲ್ಲಿ, ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರಿಗೆ ಧ್ವನಿ ಓವರ್ ಕಲಾವಿದ ವಿನೋದ್ ಕುಲಕರ್ಣಿ ಡಬ್ ಮಾಡಿದ್ದಾರೆ.

4. ಮನೋಜ್ ಪಾಂಡೆ

ಮನೋಜ್ ಪಾಂಡೆ ವಾಯ್ಸ್ ಓವರ್ ಆರ್ಟಿಸ್ಟ್ ಆಗಿದ್ದು, ರಾಣಾ ದಗ್ಗುಬಾಟಿ ಅವರ ಹಿಂದಿ ಧ್ವನಿಯಾಗಿ ಬಾಹುಬಲಿ ಮತ್ತು ಕೃಷ್ಣ ಕಾ ಬದ್ಲಾ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

5. ರಾಜೇಶ್ ಕಾವಾ

ವಾಯ್ಸ್ ಓವರ್ ಆರ್ಟಿಸ್ಟ್ ಆಗಿರುವ ರಾಜೇಶ್ ಕಾವಾ ಅವರು ವಿಜಯ್ ಅವರ ಬಹುತೇಕ ಡಬ್ಬಿಂಗ್ ಹಿಂದಿ ಚಲನಚಿತ್ರಗಳಲ್ಲಿ ವೇಲಾಯುಧಂ (ಸೂಪರ್ ಹೀರೋ ಶಾಹೆನ್‌ಶಾ) ಮತ್ತು ತಂಗ ಮಗನ್‌ನಂತಹ ಚಿತ್ರಗಳಲ್ಲಿ ಧನುಷ್‌ಗೆ ಧ್ವನಿ ನೀಡಿದ್ದಾರೆ.

6. ಶರದ್ ಕೇಳ್ಕರ್

ಬಾಹುಬಲಿ ಚಿತ್ರದಲ್ಲಿ ಪ್ರಭಾಸ್‌ಗಾಗಿ ಧ್ವನಿ ಕೊಟ್ಟ ನಟ ಶರದ್ ಕೇಳ್ಕರ್ ಅವರ ಧ್ವನಿ ಬಹುಶಃ ದಕ್ಷಿಣ ಭಾರತದ ಚಲನಚಿತ್ರವೊಂದಕ್ಕೆ ಕೊಟ್ಟ ಅತ್ಯಂತ ಪ್ರಸಿದ್ಧವಾದ ಹಿಂದಿ ಧ್ವನಿಯಾಗಿದೆ. ಅವರ ಧ್ವನಿಯು ಪ್ರಭಾಸ್ ರ ಬಾಹುಬಲಿ ಪಾತ್ರಕ್ಕೆ ಪರಿಪೂರ್ಣವಾಗಿತ್ತು ಅನ್ನೋದು ಅನೇಕರ ಅಭಿಪ್ರಾಯ.

7. ಅಜಯ್ ದೇವಗನ್

ಅಜಯ್ ದೇವಗನ್ ಬಹುಶಃ ಡಬ್ಬಿಂಗ್ ಹಿಂದಿ ಚಿತ್ರವೊಂದಕ್ಕೆ ಧ್ವನಿ ನೀಡಿದ ಅತ್ಯಂತ ಪ್ರಸಿದ್ಧ ನಟ. ಅವರು ರಾಮ್ ಚರಣ್ ಅವರ ಧ್ರುವ ಚಿತ್ರಕ್ಕೆ ಹಿಂದಿ ಡಬ್ಬಿಂಗ್ ಒದಗಿಸಿದ್ದಾರೆ.

8. ಅರ್ಬಾಜ್ ಖಾನ್

ಧ್ರುವ ಚಿತ್ರದಲ್ಲಿ, ಅರವಿಂದ್ ಸ್ವಾಮಿ ನಟಿಸಿದ ಪ್ರತಿನಾಯಕ ಪಾತ್ರಧಾರಿಗೆ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ಹಿಂದಿ ಧ್ವನಿಯನ್ನು ಒದಗಿಸಿದ್ದಾರೆ.

ಇದನ್ನೂ ನೋಡಿ: ಮೈಸೂರು ದಸರಾ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್ : ಅ.5ಕ್ಕೆ ತೆರೆ

ಈ ವಿಡಿಯೋ ಫೇಸ್‌ಬುಕ್‌ ನಲ್ಲಿ ನೋಡಲು- 👇🏼

https://fb.watch/fY5Pn7MFTr/

Related Articles

ಇತ್ತೀಚಿನ ಸುದ್ದಿಗಳು