Wednesday, July 16, 2025

ಸತ್ಯ | ನ್ಯಾಯ |ಧರ್ಮ

ಡಾಲಿ ಧನಂಜಯರ ಮೇಲಿನ ಅಭಿಮಾನ: ಟಿಕೆಟ್ ಬುಕ್ ಮಾಡಲು ಮುಂದಾದ ಫ್ಯಾನ್ಸ್

ಬೆಂಗಳೂರು: ಡಾಲಿ ಧನಂಜಯ್ ಅವರ ಹೊಸ ಚಲನಚಿತ್ರ ಹೆಡ್ ಬುಷ್ ಬಿಡುಗಡೆಯಾದ ನಂತರ, ಆ ಚಿತ್ರದಲ್ಲಿ ಧನಂಜಯ್‌ ಅವರು ವೀರಗಾಸೆ ಕಲಾವಿದರನ್ನು ಅವಮಾನ ಮಾಡಿದ್ದಾರೆ ಎನ್ನುವ ಹೊಸ ವಿವಾದ ಸೃಷ್ಟಿಯಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಧನಂಜಯ್‌ ಅವರು, ನಮಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಚಿತ್ರವನ್ನು ಕೇವಲ ಚಿತ್ರವಾಗಿ ನೋಡಬೇಕು. ಹಾಗೇನಾದರು ವೀರಗಾಸೆ ಕಲಾವಿದರಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದರು.

ಈ ವಿವಾದ ಕುರಿತು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಾ ಇದ್ದಹಾಗೆ ಡಾಲಿ ಧನಂಜಯ್‌ ಅವರಿಗೆ ಬೆಂಬಲವಾಗಿ ಅವರ ಅಭಿಮಾನಿಗಳು ಅವರ ಜೊತೆ ನಿಂತಿದ್ದಾರೆ.

ಒಬ್ಬರಿಂದ ಒಬ್ಬರು ಸ್ಫೂರ್ತಿಗೊಂಡು ಹೆಡ್ ಬುಷ್ ಚಿತ್ರಕ್ಕೆ ಟಿಕೆಟ್ ಬುಕ್ ಮಾಡ್ತಿರೋ ಅಭಿಮಾನಿಗಳು, ಸೋಷಿಯಲ್ ಮಿಡಿಯಾದಲ್ಲಿ ಹೊಸ ಅಭಿಯಾನವನ್ನು ಹುಟ್ಟುಹಾಕಿದ್ದಾರೆ.

“ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ” ಎನ್ನುವ ಡಾಲಿ ಧನಂಜಯ್‌ ಅವರ ಡೈಲಾಗ್‌ ಈಗ ಎಲ್ಲೆಡೆ ವೈರಲ್‌ ಆಗಿದೆ.

ಈ ಅಭಿಯಾನದಿಂದ ಬುಕ್ ಮೈ ಶೋ ನಲ್ಲಿ ಹೆಡ್ ಬುಷ್ ಚಲನಚಿತ್ರದ ಟಿಕೆಟ್‌ ಬುಕ್ಕಿಂಗ್‌ ನಲ್ಲಿ 9.3/10 ರೇಟಿಂಗ್ ಏರಿಕೆ ಕಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page