Tuesday, February 3, 2026

ಸತ್ಯ | ನ್ಯಾಯ |ಧರ್ಮ

ಕುದುರೆಯೇರಿ ಮೆರವಣಿಗೆ ಹೊರಟ ದಲಿತ ವರ: ಕತ್ತಿಗಳಿಂದ ದಾಳಿ ನಡೆಸಲು ಯತ್ನಿಸಿದ ಜಾತಿ ರೋಗ ಪೀಡಿತರು

ಅಹಮದಾಬಾದ್: ದಲಿತ ವರನೊಬ್ಬ ಕುದುರೆಯ ಮೇಲೆ ಮೆರವಣಿಗೆ ಹೊರಟಿದ್ದನು. ಆದರೆ ಆ ಗ್ರಾಮದ ಮೇಲ್ಜಾತಿಯ ವ್ಯಕ್ತಿಗಳಿಗೆ ಇದನ್ನು ಸಹಿಸಲಾಗಲಿಲ್ಲ. ಅವರು ಕತ್ತಿಗಳಿಂದ ದಾಳಿ ಮಾಡಲು ಪ್ರಯತ್ನಿಸಿದ್ದಲ್ಲದೆ, ಮದುವೆ ದಿಬ್ಬಣದಲ್ಲಿದ್ದ ಕೆಲವು ವ್ಯಕ್ತಿಗಳಿಗೆ ಥಳಿಸಿದ್ದಾರೆ.

(Dalit Groom Attacked With Swords) ಈ ವಿಡಿಯೋ ಕ್ಲಿಪ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಚಂದ್ರುಮಾನ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವಿಶಾಲ್ ಚಾವಡ ಅವರ ಮದುವೆ ಭಾನುವಾರ ನಡೆಯಿತು. ವರನಾಗಿ ತಯಾರಾಗಿದ್ದ ಆತ ಕುದುರೆಯ ಮೇಲೆ ಮೆರವಣಿಗೆ ಹೋಗುತ್ತಾ ಮದುವೆ ದಿಬ್ಬಣದೊಂದಿಗೆ ವೇದಿಕೆಯತ್ತ ಹೊರಟಿದ್ದನು.

ಆದರೆ, ಆ ಗ್ರಾಮದ ಕೆಲವು ಜಾತಿ ರೋಗ ಪೀಡಿತ ಮೇಲ್ಜಾತಿಯ ವ್ಯಕ್ತಿಗಳಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದಲಿತ ವರ ಕುದುರೆಯ ಮೇಲೆ ಮೆರವಣಿಗೆ ಹೋಗುವುದನ್ನು ಅವರು ತಡೆದರು. ‘ಈ ಊರಿನಲ್ಲಿ ದಲಿತನೊಬ್ಬ ಕುದುರೆ ಸವಾರಿ ಮಾಡಲು ಎಷ್ಟು ಧೈರ್ಯ?’ ಎಂದು ರೇಗಾಡಿದರು. ಒಬ್ಬ ವ್ಯಕ್ತಿ ಉದ್ದನೆಯ ಕತ್ತಿಯಿಂದ ದಾಳಿ ಮಾಡಲು ಯತ್ನಿಸಿದಾಗ ಕೆಲವು ಮಹಿಳೆಯರು ಅಡ್ಡಿಪಡಿಸಿದರು. ಮೇಲ್ಜಾತಿಯ ಇತರ ಕೆಲವರು ಮದುವೆ ಗುಂಪಿನಲ್ಲಿದ್ದ ಪುರುಷರ ಮೇಲೆ ಹಲ್ಲೆ ನಡೆಸಿದರು.

ಮತ್ತೊಂದೆಡೆ, ಈ ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಧಾವಿಸಿದರು. ಈ ಘಟನೆಯಿಂದ ಭಯಭೀತರಾಗಿದ್ದ ದಲಿತ ವರನ ಕುಟುಂಬಕ್ಕೆ ರಕ್ಷಣೆ ಒದಗಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಕುದುರೆಯ ಮೇಲೆ ಮೆರವಣಿಗೆ ಹೊರಟಿದ್ದ ದಲಿತ ವರನ ಮೇಲೆ ಕತ್ತಿಯಿಂದ ದಾಳಿ ಮಾಡಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page