Thursday, January 22, 2026

ಸತ್ಯ | ನ್ಯಾಯ |ಧರ್ಮ

ದಬ್ಬಾಳಿಕೆ ಮಾಡುತ್ತಿರುವ ಮುರುಳಿ ಮೋಹನ್ ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಟಿಸಿ – ದಲಿತ ಮುಖಂಡರ ಆಗ್ರಹ

ಹಾಸನ: ದಬ್ಬಾಳಿಕೆ ಮಾಡುತ್ತಿರುವ ಮುರುಳಿ ಮೋಹನ್ ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಟನೆ ಮಾಡುವಂತೆ ದಲಿತ ಮುಖಂಡರಾದ ದಿನೇಶ್ ಅವರು ಅಗ್ರಹಿಸಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ, ಮಾಜಿ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಹಾಗೂ ಸ್ವಾಯ್ ಸಮಿತಿಯ ಅಧ್ಯಕ್ಷರಾಗಿರುವ ಡಿ.ಸಿ. ಸಣ್ಣಸ್ವಾಮಿ ಅವರ ಮೇಲೆ ನಡೆದ ದೈಹಿಕ ಹಲ್ಲೆ ಹಾಗೂ ದೌರ್ಜನ್ಯವನ್ನು ತೀವ್ರವಾಗಿ ಖಂಡನೀಯ ಎಂದರು.ಜ. 16 ರಂದು ಹಾಸನ ಜಿಲ್ಲೆಯಲ್ಲಿ ಮಾನ್ಯ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡರವರು ಜನಸ್ಪಂದನ ಸಭೆ ನಡೆಸಿ ಸಾವಿರಕ್ಕೂ ಹೆಚ್ಚು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚನೆ ನೀಡಿರುವುದು ಜನಪರ ಆಡಳಿತದ ಉತ್ತಮ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಆದರೆ ಅದೇ ದಿನ ಸಂಜೆ ಅಧಿಕಾರಿಗಳ ಸಭೆಗೆ ತೆರಳುತ್ತಿದ್ದ ವೇಳೆ ಅಹಿತಕರ ಘಟನೆ ನಡೆದಿರುವುದು ವಿಷಾದನೀಯ ಸಂಗತಿಯಾಗಿದೆ. ಸಚಿವರೊಂದಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾ ಸಾಗುತ್ತಿದ್ದ ಸಂದರ್ಭದಲ್ಲಿ, ಪರಾಜಿತ ಕಾಂಗ್ರೆಸ್ ಎಂಎಲ್‌ಎ ಅಭ್ಯರ್ಥಿಯಾಗಿರುವ ಮುರಳಿ ಮೋಹನ್ ಎಂಬುವವರು ಗೇಟ್‌ನ ಮುಂಭಾಗ ತಡೆದು, ಏಕವಚನದಲ್ಲಿ ನಿಂದಿಸಿ, ಡಿ.ಸಿ. ಸಣ್ಣಸ್ವಾಮಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಿ, ಬಟ್ಟೆ ಹಿಡಿದು ಎಳೆದಾಡಿ, ಅವಾಚ್ಯವಾಗಿ ವರ್ತಿಸಿರುವುದು ಅತ್ಯಂತ ಖಂಡನೀಯ ಕೃತ್ಯವಾಗಿದೆ ಎಂದು ದಿನೇಶ್ ಆರೋಪಿಸಿದರು.ಒಬ್ಬ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ನಾಯಕನ ಮೇಲೆ ಸಾರ್ವಜನಿಕವಾಗಿ ಕೈ ಮಾಡಿರುವುದು ಭಯದ ವಾತಾವರಣವನ್ನು ನಿರ್ಮಾಣ ಮಾಡಿದ್ದು, ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮುರಳಿ ಮೋಹನ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಷಯವನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ ದಿನೇಶ್ , ಪಕ್ಷದ ನಾಯಕರ ಭದ್ರತೆ ಮತ್ತು ಗೌರವವನ್ನು ಕಾಪಾಡುವುದು ಆಡಳಿತದ ಕರ್ತವ್ಯವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ದಿನೇಶ್, ರಮೇಶ್, ಜಗದೀಶ್, ಶಿವಣ್ಣ, ಮಧುಸೂದನ್ ಸೇರಿದಂತೆ ಇತರರು ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page