Monday, November 25, 2024

ಸತ್ಯ | ನ್ಯಾಯ |ಧರ್ಮ

ಶೋಷಣೆ ಅಸಮಾನತೆ ವಿರುದ್ಧ, ಜಾತಿ ಧರ್ಮಗಳ ವಿರುದ್ಧ ಪ್ರಶ್ನೆ ಮಾಡಲು ಹುಟ್ಟಿದ್ದೆ ದಲಿತ ಚಳುವಳಿ – ಮಾವಳ್ಳಿ ಶಂಕರ್

ನಗರದ ಸ್ವಾಭಿಮಾನ ಭವನದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ ಹಾಗೂ ಜಿಲ್ಲಾ ಸಮಿತಿ ಪುನರ್ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದು ಒದಗಿದೆ ಒಂದು ಕಡೆ ಸಂವಿಧಾನ ಮತ್ತೊಂದು ಕಡೆ ಅಲಿಖಿತ ಸಂವಿಧಾನ ಇದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಇದ್ದರೂ ಸಹ ಧಾರ್ಮಿಕ ಭಯೋತ್ಪಾದನೆ ಅಂತಹ ಅಲಿಖಿತ ಸಂವಿಧಾನಗಳು ದಾಳಿ ಮಾಡಿ ನಮ್ಮನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದರೂ.

ವೈದಿಕ ಕೋಮುವಾದಿಗಳು ಹೆಚ್ಚಾಗುತ್ತಿದ್ದು ಸಂವಿಧಾನ ಪ್ರಜಾಪ್ರಭುತ್ವದ ಬಗ್ಗೆ ಸಂಪೂರ್ಣವಾಗಿ ನಾಶ ಮಾಡುವ ಕ್ರಿಯೆಯಲ್ಲಿ ಅವರು ತೊಡಗಿದ್ದಾರೆ ಈ ಬಗ್ಗೆ ಪ್ರತಿಯೊಂದು ಶೋಷಿತ ಸಮಾಜ ಅರಿತು ಅದರ ವಿರುದ್ಧ ಧನಿಯತ್ತಬೇಕು ಎಂದು ಕರೆ ನೀಡಿದರು.

ಒಂದು ಕಡೆ ಅಸಮಾನತೆ ಅಘಧವಾಗಿ ನಮ್ಮನ್ನು ಕಾಡುತ್ತಿದೆ. ಇನ್ನೊಂದು ಕಡೆ ದೇಶದ ಸಂಪತ್ತು ಕೆಲವೇ ಜನರ ಕಪಿಮುಷ್ಠಿಯಲ್ಲಿ ಸಿಲುಕಿ ಕೊಂಡಿದೆ. ಕೆಲವೇ ಕುಟುಂಬಗಳು ದೇಶದ ಸಂಪತ್ತನ್ನು ಲೂಟಿ ಮಾಡುತ್ತೇವೆ ಕೇಂದ್ರ ಸರಕಾರ ಅವರ ಪರ ನೀತಿಗಳನ್ನು ಜಾರಿ ಮಾಡಿದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ದೇಶ ಸಾಧಿಸುವ ಸಾಧನೆ ಸಂಪೂರ್ಣವಾಗಿ ಹಿನ್ನಡೆ ತಲುಪಿದೆ ಎಂಬುದನ್ನು ನಾವು ಸೂಚ್ಯಂಕಗಳ ಮೂಲಕ ಗಮನಿಸಬಹುದು. ಇವತ್ತಿನ ದಿನಗಳಲ್ಲಿ ಬಡತನ ಅತ್ಯಂತ ಕೆಳಮಟ್ಟಕ್ಕೆ ತಲುಪುತ್ತಿದೆ ಶಿಕ್ಷಣ ಕೈ ಎಟುಗದ ರೀತಿಯಲ್ಲಿ ನಡೆಯುತ್ತಿದ್ದು ಮಹಿಳೆಯರ ಮೇಲಿನ ದೌರ್ಜನ್ಯಗಳು ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ ತೀವ್ರವಾಗಿ ನಡೆಯುತ್ತಿದೆ ಎಂದರು.

ಹಾಗಾಗಿ ಪ್ರತಿಯೊಬ್ಬ ಹಿಂದುಳಿದ ಸಮುದಾಯಗಳು, ಮಹಿಳೆಯರು, ಬಡತನದಲ್ಲಿರುವ ಮಕ್ಕಳು ಕೈಜೋಡಿಸಿ ಸಂಘಟನೆಯನ್ನು ಕಟ್ಟುವ ಮೂಲಕ ಸಮಸ್ಯೆಗಳನ್ನು ಎದುರಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅಂತರ್ರಾಷ್ಟ್ರೀಯ ಚಿತ್ರ ಕಲಾವಿದ ಕೆ ಟಿ ಶಿವಪ್ರಸಾದ್, ಡಿಎಸ್ಎಸ್ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಬೇಲೂರು ಲಕ್ಷ್ಮಣ್, ವಿಭಜಿಯ ಸಂಚಾಲಕ ಆಲೇಶಪ್ಪ, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಸುಮದುದ್ದ, ಡಾಕ್ಟರ್ ಕೃಷ್ಣ ಹತ್ನಿ, ಮಲ್ಲಿಗೆವಾಳುದೇವಪ್ಪ ಇತರರು ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page