ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ಗುಂಡನ ಬೆಳ್ಳೂರು ಗ್ರಾಮದ ಪವನ್ ಎಂಬುವನು ಹಲ್ಲೆ ಮಾಡಿರುವುದಾಗಿ ದಲಿತ ಮಹಿಳೆ ಮೀನಾಕ್ಷಿ ಆರೋಪ ಮಾಡಿದ್ದಾರೆ..
ಹಲ್ಲೆಗೊಳಗಾದ ಮೀನಾಕ್ಷಿ ಮಾಧ್ಯಮದವರೊಂದಿಗೆ ಮಾತನಾಡಿ ಗುಂಡನ ಬೆಳ್ಳೂರು ಗ್ರಾಮದ ಪವನ್ ಎಂಬುವನ ಹತ್ತಿರ ನಾನು ಒಂದು ಸಾವಿರ ರೂಗಳನ್ನು ಸಾಲವಾಗಿ ತೆಗೆದುಕೊಂಡಿದ್ದೆ ಆದರೆ ಇನ್ನು ಕೊಟ್ಟಿಲ್ಲ ಎಂಬ ಕಾರಣಕ್ಕೆ ನಮ್ಮ ಮನೆಯ ಬಳಿ ಇದ್ದ ಎರಡು ಕಬ್ಬಿಣದ ಪೈಪ್ ಗಳನ್ನು ನಮಗೆ ಕೇಳದೆ ತೆಗೆದುಕೊಂಡು ಹೋಗಿದ್ದ. ಅದಕ್ಕೆ ನಾನು ಪೋನಿನ ಮೂಲಕ ಅವನಿಗೆ ಕರೆ ಮಾಡಿ ಪೈಪ್ ತೆಗೆದುಕೊಂಡು ಹೋಗಿದ್ದಿಯ ಅದನ್ನು ತಂದುಕೊಡು ಎಂದು ಕೇಳಿದಕ್ಕೆ, ಪೋನಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ನನ್ನ ಮಗಳು ಅವರ ಮನೆಯ ಹತ್ತಿರ ಅವನಿಗೆ ಒಂದು ಸಾವಿರ ರೂ ಹಣವನ್ನು ಕೊಡಲು ಹೋದಾಗ ಬಡ್ಡಿ ಸೇರಿಸಿಕೊಡಿಯೆಂದು ಬೆದರಿಕೆ ಹಾಕಿ ನಮ್ಮ ಕೈಯಲ್ಲಿದ್ದ ಮೊಬೈಲ್ ನ್ನು ಕಿತ್ತುಕೊಂಡು ಮನೆಯಿಂದ ಹೊರಗೆ ಹೋಗುವಂತೆ ತಳ್ಳಿ ನನ್ನ ಮೇಲೆ ಹಾಗೂ ನನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ನಾನು ಆಸ್ಪತ್ರೆಗೆ ಬಂದು ಚಿಕೆತ್ಸೆ ಪಡೆದು ಆಲೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇನೆ. ಕೊಡಲೇ ಅವನನ್ನು ಬಂಧಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ತಿಳಿಸಿದರು.
ಅಟ್ರಾಸಿಟಿ ಕಮಿಟಿ ಸದಸ್ಯರಾದ ಶಿವಮ್ಮ ಮಾತನಾಡಿ ಗುಂಡನ ಬೆಳ್ಳೂರು ಗ್ರಾಮದ ಮೀನಾಕ್ಷಿ ಹಾಗೂ ಮಗಳು ರಕ್ಷಿತಾಳ ಮೇಲೆ ಸವರ್ಣಿಯನಾದ ಪವನ್ ಎಂಬುವನು ಹಲ್ಲೆ ಮಾಡಿದ್ದು, ಕೊಡಲೇ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡು ಆತನನ್ನು ಬಂದಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಗುಂಡನ ಬೆಳ್ಳೂರು ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ದೌರ್ಜನ್ಯ ಅಟ್ರಾಸಿಟಿ ಕೇಸುಗಳು ನಡೆಯುತ್ತಿರುವುದು, ಇದು ಮೊದಲೆನಲ್ಲ ಈ ಹಿಂದೆಯೂ ಕೂಡ ಇಂಥಹದ್ದೆ ಘಟನೆ ನಡೆದಿತ್ತು. ಆದರೆ ಪೊಲೀಸರು ಇಂತಹ ಕೇಸಿನಲ್ಲಿ ಜವಾಬ್ದಾರಿಯುತವಾಗಿ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು. ನಾಗರಿಕ ಸಮಾಜದಲ್ಲಿ ದಲಿತರನ್ನೇ ಕಡೆಗಣಿಸುತ್ತಾರೆ, ಏಕೆ ನಾವು ಮನುಷ್ಯರೇ, ನಮಗೂ ಬದುಕುವ ಹಕ್ಕಿದೆ. ಒಂದು ಸಣ್ಣ ವಿಷಯಕ್ಕೆ ಅಮ್ಮ ಮಗಳ ಮೇಲೆ ಹಲ್ಲೆ ಮಾಡಿರುವುದು ಯಾವ ರೀತಿ ಸರಿ. ಪೊಲೀಸರು ಕೊಡಲೇ ಕ್ರಮ ಕೈಗೊಂಡು ಹಲ್ಲೆ ಮಾಡಿರುವ ಪವನ್ ನ್ನು ಬಂಧಿಸಿ ತಾಯಿ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕು, ಇಲ್ಲವಾದಲ್ಲಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು..
ಮರಿಜೋಸೆಫ್ ಮಾತನಾಡಿ ಸವರ್ಣಿಯರು ದಲಿತರ ಮೇಲೆ ಹಲ್ಲೆ ಮಾಡಿ ಪ್ರಕರಣ ದಾಖಲು ಮಾಡಿದ ಕೆಲವೇ ಗಂಟೆಯಲ್ಲಿ ಆತನನ್ನು ಅರೆಸ್ಟ್ ಮಾಡುವ ಎಲ್ಲಾ ಕಾನೂನು ಇದೇ ಆದರೆ ಪೊಲೀಸರು ಏಕೋ ಈ ವಿಷಯದಲ್ಲಿ ಮೌನವಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ, ಹಲ್ಲೆ ನಡೆಸಿದರೆ ಹಲವಾರು ಕಠಿಣ ಕಾಯ್ದೆಗಳಿವೆ. ಆದರೆ ಏಕೆ ಪೊಲೀಸರು ಅಂತಹ ಖಾಯ್ದೆಗಳನ್ನು ಬಳಸಿಕೊಳ್ಳುತ್ತಿಲ್ಲ. ಘಟನೆ ನಡೆದು ನಾಲ್ಕೈದು ದಿನಗಳಾದರೂ ಹಲ್ಲೆ ಮಾಡಿದವನನ್ನು ಏಕೆ ಬಂಧಿಸಿಲ್ಲವೆಂದು ಪ್ರಶ್ನಿಸಿದರು. ಒಂದು ವಾರಗಳಿಂದ ಹಲ್ಲೆಗೊಳಗಾಗಿರುವ ಮಹಿಳೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರು ಎಂತ ಎಂತವರನ್ನೇ ಉಡುಕಿ ಬಂದಿಸುತ್ತಾರೆ. ಆದರೆ ಇವನನ್ನು ಏಕೆ ಬಂಧಿಸಿಲ್ಲವೆಂದರು ಕೊಡಲೇ ಪೊಲೀಸ್ ಇಲಾಖೆಯವರು ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಬೇಕು ಇಲ್ಲದಿದ್ದರೆ ಹಾಸನ ಎಸ್. ಪಿ ಕಚೇರಿಗೆ ಹೋಗಿ ಉಗ್ರ ಹೋರಾಟ ಮಾಡುತ್ತೇವೆ ಎಂದರು…
ಈ ಸಂದರ್ಭದಲ್ಲಿ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಸದ್ಯರುಗಳಾದ ನವೀನ್ ಸದಾ , D ಶಿವಮ್ಮ, ಮರಿಜೋಸೆಪ್, ಮಲ್ಲೇಶ್ ಅಂಬುಗಾ ಮತ್ತು ಶಿವಪ್ಪ ನಾಯ್ಕ ಮುಂತಾದವರು ಇದ್ದರು.