Monday, October 28, 2024

ಸತ್ಯ | ನ್ಯಾಯ |ಧರ್ಮ

98 ಜನರಿಗೆ ಜೀವಾವಧಿ ಶಿಕ್ಷೆ ತೀರ್ಪು ಸ್ವಾಗತಿಸಿ ದಲಿತರಿಂದ ಪಟಾಕಿ ಸಿಡಿಸಿ ಸಂಭ್ರಮ

ಹಾಸನ: ಕೊಪ್ಪಳ ಜಿಲ್ಲೆ ಮರುಕುಂಡಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ೯೮ ಜನರಿಗೆ ಜೀವವಾಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪುನ್ನು ಸ್ವಾಗತಿಸಿ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಿ ಪಟಾಕಿ ಸಿಡಿಸ ಸಂಭ್ರಮಿಸಿದಲ್ಲದೇ ಘೋಷಣೆ ಕೂಗಿದರು.

ಇದೆ ವೇಳೆ ದಲಿತ ಮುಖಂಡರಾದ ಕೃಷ್ಣದಾಸ್ ಮಾತನಾಡಿ, ಕೊಪ್ಪಳ ಜಿಲ್ಲೆ ಮರುಕುಂಡಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ನ್ಯಾಯಾಲಯ ತೀರ್ಪು ನೀಡಿರುವುದನ್ನು ನಾವುಗಳು ಸ್ವಾಗತ ಮಾಡುತ್ತೇವೆ. ದಲಿತರಿಗೆ ನ್ಯಾಯ ಒದಗಿಸಿದಂತಹ ನ್ಯಾಯಾಲಯ ಸಂವಿಧಾನವನ್ನ ಎತ್ತಿ ಹಿಡಿದಿದೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗಿದೆ ಎಂದರು.

ಹಿರಿಯ ದಲಿತ ಮುಖಂಡರು ಹೆಚ್.ಕೆ. ಸಂದೇಶ್ ಮಾಧ್ಯಮದೊಂದಿಗೆ ಮಾತನಾಡಿ, ಗಂಗಾವತಿ ತಾಲೂಕಿನ ಮರುಕುಂಡಿ ಗ್ರಾಮದಲ್ಲಿ ೨೦೨೪ ಏಪ್ರಿಲ್ ೨೮ ರಂದು ಪುನಿತ್ ರಾಜಕುಮಾರ್ ಅವರ ಪವರ್ ಸಿನಿಮಾ ಟಕೆಟ್ ತೆಗೆದುಕೊಳ್ಳುವ ಕಾರಣಕ್ಕೆ ಅಲ್ಲಿನ ದಲಿತರ ಮಧ್ಯೆ ಜಗಳವಾಗಿ ನಂತರದಲ್ಲಿ ಸವರ್ಣಿಯರನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ಅಂದು ಇಡೀ ದಿನ ಮಾದಿಗ, ದಲಿತರ ೬೦ ಗುಡಿಸಲನ್ನು ಸುಟ್ಟು ಹಾಕಲಾಗಿತ್ತು. ನಂತರ ಪೊಲೀಸ್ ಠಾಣೆಗೆ ದಲಿತರು ದೂರು ನೀಡಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸುಮಾರು ೧೧೭ ಜನರ ಮೇಲೆ ದೂರು ದಾಖಲಾಗುತ್ತದೆ ಎಂದರು. ಇವರಲ್ಲಿ ೧೭ ಜನರು ಈಗಾಗಲೇ ಸಾವನಪ್ಪಿದ್ದಾರೆ. ಉಳಿಕೆ ೯೮ ಜನರ ಮೇಲೆ ಜೀವವಾದಿ ಶಿಕ್ಷೆ ನೀಡಲಾಯಿತು. ಇಂತಹ ಕ್ರಾಂತಿಕಾರಿ ತೀರ್ಪು ಎಲ್ಲಿ ಕೂಡ ಬಂದಿರುವುದಿಲ್ಲ ಎಂದು ಶ್ಲಾಘನೆವ್ಯಕ್ತಪಡಿಸಿದರು.

ಸಿ.ಜಿ.ಎಂ. ಒಕ್ಕೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಉಳುವಾರೆ, ಕೆ. ಈರಪ್ಪ, ರಂಗಸ್ವಾಮಿ ದಲಿತ ಮುಖಂಡರು ಗೋವಿಂದ್ ರಾಜ್ ಸಿಜಿಎಂ ಒಕ್ಕೂಟ ಅಂಬುಗ ಮಲ್ಲೇಶ್, ದಲಿತ ಮುಖಂಡರು ಈರೇಶ್ ಈರಳ್ಳಿ, ಗೋವಿಂದರಾಜು, ದಲಿತ ಮುಖಂಡರು ಕ್ರಾಂತಿ ಪ್ರಸಾದ್ ತ್ಯಾಗಿ ನಗರಸಭಾ ಸದಸ್ಯರು ಮತ್ತು ವಕೀಲರು, ವಕೀಲ ಯೋಗೀಶ್, ಕೆ ಪ್ರಕಾಶ್ ದಲಿತ ಮುಖಂಡರು ಜಗದೀಶ್ ಚೌಡಳ್ಳಿ, ಹರೀಶ್ ಕಟ್ಟೆಬೆಳಗೊಳಿ, ಸಾಹಿತಿ ಜಯರಾಮ್, ಬಿಒ ಇಲಾಖೆ ಕೆವೈಸಿ ಜಗದೀಶ್, ಸತೀಶ್ ಕಬ್ಬಳ್ಳಿ ಚಂದ್ರು ಶಾಣೆನಹಳ್ಳಿ ಮತ್ತು ಎಲ್ಲಾ ಹಿರಿಯ ಕಿರಿಯ ದಲಿತ ಮುಖಂಡರುಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page