Tuesday, August 26, 2025

ಸತ್ಯ | ನ್ಯಾಯ |ಧರ್ಮ

ದರ್ಶನ್ ಮತ್ತೆ ಪೊಲೀಸ್ ಕಸ್ಟಡಿಗೆ, ಪವಿತ್ರಾ ಗೌಡಗೆ ನ್ಯಾಯಾಂಗ ಬಂಧನ

ಚಿತ್ರದುರ್ಗದ ರೇಣುಕಾಸ್ವಾಮಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಎಸಿಎಂಎಂ ಕೋರ್ಟ್ ದರ್ಶನ್​​​ ಸೇರಿದಂತೆ 6 ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. A1 ಆರೋಪಿ ಆರೋಪಿ ಪವಿತ್ರಾಗೌಡ ಸೇರಿ ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್​​ ಸೂಚಿಸಿದೆ.

ಪ್ರಕರಣದ ಆರೋಪಿಗಳ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಇಂದು ಹಾಜರುಪಡಿಸಲಾಗಿತ್ತು. ಮೃತನ ಹಾಗೂ ಆರೋಪಿಗಳ ಮೊಬೈಲ್ ಗಳನ್ನು ಕಲೆ ಹಾಕಬೇಕು. ಇದರಿಂದ ಇನ್ನೂ ಹೆಚ್ಚು ಮಾಹಿತಿ ಸಿಗಲಿದೆ ಎಂಬ ಕಾರಣಕ್ಕೆ ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಅವರಿಗೆ ಮತ್ತೆ ಪೊಲೀಸ್ ಕಸ್ಟಡಿ ಮುಂದುವರೆಯಲಿದೆ.

ಇದೊಂದು ಭೀಕರ ಕೊಲೆ ಪ್ರಕರಣ ಆಗಿದ್ದರಿಂದ ಇನ್ನಷ್ಟು ಮಾಹಿತಿಯನ್ನು ಪತ್ತೆ ಹಚ್ಚಬೇಕಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್​​, ವಿನಯ್​​, ಪ್ರದೂಶ್​, ಧನರಾಜ್​, ನಾಗರಾಜ್​​, ಲಕ್ಷ್ಮಣ್​​ ಆರೋಪಿಗಳನ್ನು ಕಸ್ಟಡಿಗೆ ನೀಡಬೇಕು ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು.

ಪ್ರಕರಣದಲ್ಲಿ ಪವಿತ್ರಾಗೌಡ A1, ದರ್ಶನ್ A2 ಆರೋಪಿಯಾಗಿದ್ದಾರೆ. ದರ್ಶನ್ ಆಪ್ತೆ ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆಂದು ಆರೋಪಿಸಿ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಸೇರಿ ಸಹಚರರು ಹಲ್ಲೆ ನಡೆಸಿ ಕೊಂದಿದ್ದಾರೆಂಬ ಆಪಾದನೆ ಇದೆ. ರೇಣುಕಾಸ್ವಾಮಿಯನ್ನ ಜೂ.9ರಂದು ಹತ್ಯೆಗೈಯಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page