Friday, June 14, 2024

ಸತ್ಯ | ನ್ಯಾಯ |ಧರ್ಮ

ಯೆಮನ್‌ ಸರ್ಕಾರದಿಂದ ಗಲ್ಲು ಶಿಕ್ಷೆಗೆ ಗುರಿಯಾದ ಮಗಳು:  11 ವರ್ಷಗಳ ಬಳಿಕ ತಾಯಿ ಮಗಳ ಮಿಲನ  

ತಿರುವನಂತಪುರ: ಯೆಮನ್‌ ದೇಶದಲ್ಲಿ ವೃದ್ಧರೊಬ್ಬರ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಯೆಮನ್‌ ಜೈಲಿನಲ್ಲಿರುವ ಮಗಳನ್ನು 11 ವರ್ಷದ ಬಳಿಕ ತಾಯಿ ಭೇಟಿಯಾಗಿದ್ದು,  ಜಗತ್ತಿನಾಧ್ಯಂತ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.   ನಿಮಿಷಾ ಪ್ರಿಯ ಎನ್ನುವ ಮಹಿಳೆ ತನ್ನ ತಾಯಿ ಪ್ರೇಮಾ ಕುಮಾರಿ ಅವರನ್ನು ಏ.24ರಂದು ಭೇಟಿಯಾಗಿ ತಾಯಿ ಮಗಳಿಬ್ಬರು ಕಣ್ಣೀರುಗರೆದರು.

ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ಶುಶ್ರೂಷಕಿಯಾಗಿದ್ದರು. 2017ರಲ್ಲಿ ಭಾರತಕ್ಕೆ ಮರಳಲು ತಲಾಲ್‌ ಅಬ್ದೊ ಮಹ್ದಿ ಎನ್ನುವಾತನ ವಶದಲ್ಲಿದ್ದ ತನ್ನ ಪಾಸ್‌ಪೋರ್ಟ್‌ ಪಡೆದುಕೊಳ್ಳಲು ಆತನಿಗೆ ನಿದ್ದೆಬರುವ ಚುಚ್ಚುಮದ್ದು ನೀಡಿದ್ದರು. ಆದರೆ ಚುಚ್ಚುಮದ್ದಿನಲ್ಲಿನ ಔಷಧ ಓವರ್‌ ಡೋಸ್‌ಆಗಿ ಆತ ಮೃತಪಟ್ಟಿದ್ದ. ಕೊಲೆ ಪ್ರಕರಣ ಸಾಬೀತಾದ ಹಿನ್ನೆಲೆ ನಿಮಿಷಾ ಅವರಿಗೆ ಅಲ್ಲಿನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಹೀಗಾಗಿ 2017ರಿಂದ ನಿಮಿಷಾ ಅವರು ಯೆಮನ್‌ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಮಗಳನ್ನು ಭೇಟಿಯಾದ ಬಳಿಕ ವಿಡಿಯೊ ಸಂದೇಶ ಹಂಚಿಕೊಂಡ ಪ್ರೇಮಾ ಕುಮಾರಿ ಅವರು, ‘ಮಗಳನ್ನು ಮತ್ತೆ ನೋಡುತ್ತೇನೆ ಎಂದುಕೊಂಡಿರಲಿಲ್ಲ, ನನ್ನನ್ನು ನೋಡುತ್ತಿದ್ದಂತೆ ಅವಳು ಓಡಿ ಬಂದು ಅಪ್ಪಿಕೊಂಡಳು. ಅವಳ ಮದುವೆಯ ಸಂದರ್ಭದಲ್ಲಿ ನೋಡಿದ್ದೇ ಕೊನೆಯಾಗಿತ್ತು. ಅದಾದ ಬಳಿಕ ಇಲ್ಲಿಯೇ ನೋಡಿದ್ದು. ಇಬ್ಬರು ಹಲವು  ತಾಸು ಒಟ್ಟಿಗೆ ಕಳೆದೆವು. ಒಟ್ಟಿಗೆ ಊಟ ಮಾಡಿದೆವು. ಇದನ್ನು ಸಾಧ್ಯವಾಗಿಸಿದ ಯೆಮನ್‌ ಸರ್ಕಾರಕ್ಕೆ ಧನ್ಯವಾದ  ಹೇಳುತ್ತೇನೆ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು