ಮಗಳು ಪ್ರೀತಿ ಮಾಡಿದ್ದಕ್ಕೆ ತಂದೆಯಿಂದಲೆ ಮಗಳ ಬರ್ಬರ ಹತ್ಯೆ

ಬೀದರ್: ಮಗಳು ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ತಂದೆಯೆ ದೊಣ್ಣೆಯಿಂದ ಹೊಡೆದು ತನ್ನ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಭೀಕರ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಬರಗೇನ್ ತಾಂಡಾದಲ್ಲಿ ಮಗಳ ಮೇಲೆ ಅಪ್ಪನೇ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಮೋನಿಕಾ ಮೋತಿರಾಮ ಜಾಧವ್ (18) ಕೊಲೆಯಾಗಿರುವ ಯುವತಿ. ತನ್ನ ಮಗಳನ್ನು ಕೊಲೆ ಮಾಡಿದ ನಂತರ ಮೋತಿರಾಮ ಎಸ್ಕೇಪ್ ಆಗಿದ್ದು, ಈ ಬಗ್ಗೆ ಸಂತಪೂರ ಪೊಲೀಸ್ ಠಾಣೆಗೆ ಮೃತ ಯುವತಿಯ ತಾಯಿ ಭಾಗುಬಾಯಿ ದೂರು ನೀಡಿದ್ದು ತನಿಖೆ ನಡೆಯುತ್ತಿದೆ.

ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಆಧುನಿಕ ಕಾಲದ ಭಾರತದಲ್ಲಿ ಲವ್ ಮಾಡಿ ಮದುವೆ ಅಗುವುದು ಕಾಮನ್ ಆಗಿದೆ. ತಂದೆ, ತಾಯಿ ಕೂಡ ಮಕ್ಕಳ ಪ್ರೀತಿಯನ್ನು ಒಪ್ಪಿ ಮದುವೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ಅಪ್ಪ ಮಗಳು ಲವ್ ಮಾಡಿದ್ದಾಳೆ ಎಂದು ಕೊಲೆಯನ್ನೇ ಮಾಡಿದ್ದಾನೆ.

Related Articles

ಇತ್ತೀಚಿನ ಸುದ್ದಿಗಳು