Friday, February 27, 2026

ಸತ್ಯ | ನ್ಯಾಯ |ಧರ್ಮ

ಇಂತಹ ದುರಂಹಂಕಾರಿ ಡಿಸಿ ನಾನು ನೋಡಲಿಲ್ಲ, ಕಾಂಗ್ರೆಸ್ ಶಾಶ್ವತವಾಗಿ ಇರಲ್ಲ ರಾಜ್ಯದಲ್ಲಿ – ಹೆಚ್‌ ಡಿ ರೇವಣ್ಣ

ಹಾಸನ : ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಜಿಲ್ಲಾಧಿಕಾರಿ ವಿರುದ್ಧ ಮಾಜಿಸಚಿವ ಆಕ್ರೋಶ.

ಜನರ ಸಮಸ್ಯೆ ಬಗೆಹರಿಸಲು ಡಿಸಿ ಬಳಿ ಚರ್ಚಿಸಲು ಅಧಿಕಾರಿಗಳು ಹೊದರೆ ಕಚೇರಿಯಿಂದ ಹೊರೆಗೆ ನಡಿರಿ ಅಂತಾರೆ,ಇಂತಹ ದುರಂಹಂಕಾರಿ ಡಿಸಿ ನಾನು ನೋಡಲಿಲ್ಲ,ಏನ್ ಕಾಂಗ್ರೆಸ್ ಶಾಶ್ವತವಾಗಿ ಇರುತ್ತದೆ ಅಂದುಕೊಂಡಿದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಶಾಶ್ವತವಾಗಿ ಇರುತ್ತೆ ಎಂದು ಡಿಸಿ, ಎಸ್ಪಿ ತಿಳಿದುಕೊಂಡಿದ್ದಾರೆ.ಯಾವತ್ತಾದರೂ ಒಂದು ದಿನ ತಗುಲಿ ಹಾಕಿಕೊಳ್ತಾರೆ ಇವರು,ಕಾಲ ಜಾಸ್ತಿ ದೂರ ಇಲ್ಲ, ಡಿಸಿ, ಎಸ್ಪಿಗಳನ್ನು ನೋಡಿದ್ದೀನಿ ನಾನು, ಹೀಗೆ ಮಾಡಿದ್ರೆ ಒಂದಲ್ಲ ಒಂದು ದಿನ ಅದನ್ನು ಅನುಭವಿಸುವ ಕಾಲ ಬರುತ್ತೆ ಹುಷಾರಾಗಿರಿ ಯಾರು, ಯಾವ ರಾಜಕಾರಣಿಗಳು ನಿಮ್ಮನ್ನು ಉಳಿಸಲು ಬರಲ್ಲ,ನಾನು ನನ್ನ ಜೀವನದಲ್ಲಿ ನೋಡಿದ್ದೀನಿ ಕಾನೂನು ಬಿಟ್ಟು ಯಾವ ಕೆಲಸ ಮಾಡಬೇಡಿ ನಾವು ಹೇಳಿದ್ರು ಮಾಡಬೇಡಿ, ಬಡವರಿಗೆ ರಕ್ಷಣೆ ಕೊಡಿ.

ಕಾನೂನು ಬಿಟ್ಟು ಮಾಡಿ ಎಂದು ನಾನು ಹೇಳಿಲ್ಲ,ಪೊಲೀಸ್ ಅಧಿಕಾರಿಗಳಿಗೂ ಒಳ್ಳೆಯ ರೀತಿ ಕೆಲಸ ಮಾಡುತ್ತಿಲ್ಲ ಪಾಪ ಪೊಲೀಸರು ಒಳ್ಳೆಯರಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಯಾವ ರೀತಿ ಕೆಲಸ ನಡೆಯುತ್ತಿದೆ ಗೊತ್ತಿದೆ ಇಡೀ ದಿನ ಅಧಿಕಾರಿಗಳನ್ನು ಕೂರಿಸಿಕೊಳ್ತಾರೆ. ನಾವೇನಾದರೂ ಹೇಳಿದ್ರಿ ಯಾ‌ರ‌್ಯಾರೋ ಕೈಯಲ್ಲಿ ಬೈಸೋದು, ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡೋದು ರೇವಣ್ಣನ್ನ ಯಾರು ಬೈತಾರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಅವರ ಹಿನ್ನಲೆ‌ ಏನು ಎನ್ನೋದು ತೆಗೆದುಕೊಳ್ಳಬೇಕು.

ಅಧಿಕಾರಿಗಳನ್ನು ಎಂಟು ಗಂಟೆಗೆ ಬರಲು ಹೇಳ್ತಾರೆ ಡಿಸಿ ಮಧ್ಯಾಹ್ನ 12 ಗಂಟೆಗೆ ಬರ್ತಾರೆ ತಹಶೀಲ್ದಾರ್ ಕೇಳಿದ್ರೆ ಯಾವಾಗಲೂ ಡಿಸಿ ಆಫೀಸ್‌ನಲ್ಲಿ ಇದ್ದೀನಿ ಅಂತಾರೆ ಎಂದು ಹೇಳಿದ

Related Articles

ಇತ್ತೀಚಿನ ಸುದ್ದಿಗಳು

You cannot copy content of this page