Wednesday, April 9, 2025

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಮುಖಂಡ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಬಂಧನ

2014ರ ಜೂನ್ ನಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್, ಗಾಂಧಿ ಬಜಾರ್ ನಗರ ಶಾಖೆಯಲ್ಲಿ ಸುಮಾರು 68 ಕೋಟಿ ಮೌಲ್ಯದ ನಕಲಿ ಚಿನ್ನ ಅಡಮಾನ ಪ್ರಕರಣದ ಅಡಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ನಿನ್ನೆ ಐಡಿ ಅಧಿಕಾರಿಗಳು ನಿನ್ನೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ನ ಮಾಜಿ ಉದ್ಯೋಗಿಗಳ ಮನೆಗಳ ಮೇಲೆ ರೈಡ್ ಮಾಡಿದ್ದರು. ಅಷ್ಟೇ ಅಲ್ಲದೆ ಡಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರಿಂದ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು ನಡೆಸಿದ್ದರು. ನಂತರ ಇಂದು ಅವರನ್ನು ಬಂಧಿಸಿ 1ನೇ ಸಿಸಿ ಹೆಚ್ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಅವರಿಗೆ ಸಂಬಂಧಿಸಿದವರ ಮನೆಗಳು ಕಛೇರಿ ಸೇರಿ 8 ಕಡೆಗಳಲ್ಲಿ ನಿನ್ನೆ ಇಡಿ ದಾಳಿ ನಡೆಸಿದೆ. ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್‌ ಗೆಸ್ಟ್‌ಹೌಸ್‌ ಮೇಲೂ ದಾಳಿ ನಡೆದಿದೆ. ಇದೇ ಸಂದರ್ಭದಲ್ಲಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ.

2014 ರಲ್ಲಿ ನಡೆದ ಘಟನೆಗೆ ನಾಲ್ಕು ವರ್ಷಗಳ ಬಳಿಕ 2018 ರಲ್ಲಿ ಡಿಸಿಸಿ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಮಂಜುನಾಥ ಗೌಡ ಅವರನ್ನು ಎಸಿಬಿ ಬಂಧನ ಮಾಡಿತ್ತು. ಆದರೆ ಚಾರ್ಜ್ ಶೀಟಿನಲ್ಲಿ ಮಂಜುನಾಥ್ ಗೌಡ ಹೆಸರನ್ನು ಕೈಬಿಡಲಾಗಿತ್ತು. ಬಳಿಕ ಇಡಿ ಈ ಪ್ರಕರಣದೊಳಗೆ ಬರುತ್ತಿದ್ದಂತೆ ಇಆರ್ ದಾಖಲು ಮಾಡಿ ತನಿಖೆ ನಡೆಸಲು ಮುಂದಾಗಿತ್ತು.

ಆ ನಂತರ ಮಂಜುನಾಥ್ ಗೌಡ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದ ಬಳಿಕ ಇಡಿ ಕಾನೂನು ಸಮರದ ನಂತರ ತಡೆಯಾಜ್ಞೆ ತೆರವು ಮಾಡಿ, ಇಡಿ ತನಿಖೆ ಮುಂದುವರೆಸಿದೆ. ಅದರ ಮುಂದುವರೆದ ಭಾಗವಾಗಿ ಇಂದು ಮಂಜುನಾಥ ಗೌಡ ಬಂಧನವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page