Wednesday, July 2, 2025

ಸತ್ಯ | ನ್ಯಾಯ |ಧರ್ಮ

ಹಾಸನ ಆಯ್ತು, ರಾಮನಗರ ಆಯ್ತು, ಇದೀಗ ಮಂಡ್ಯ ನನ್ನ ಭೂಮಿ ಎಂದು ಬಂದಿದ್ದಾರೆ – ಕುಮಾರಸ್ವಾಮಿಗೆ ಡಿಸಿಎಮ್ ಟಾಂಗ್

ಮಂಡ್ಯ :- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲೆಯ ಸ್ವಾಭಿಮಾನಿ ಜನತೆ ಇದುವರೆಗೆ ಮನೆ ಆಡಳಿತವನ್ನು ಬೇರೆಯವರಿಗೆ ಕೊಟ್ಟ ನಿದರ್ಶನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ,ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ್ ತಿಳಿಸಿದರು.
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೀ ಗೌಡ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು ಕೆ.ವಿ ಶಂಕರೇಗೌಡ, ಎಸ್.ಎಂ ಕೃಷ್ಣ, ಅಂಬರೀಶ್ ಆದಿಯಾಗಿ ಜಿಲ್ಲೆಯವರನ್ನು ಗೆಲ್ಲಿಸಿದ್ದೀರಿ, ಈ ಬಾರಿಯು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆಮಾಡಬಹುದು, ಕುಮಾರಸ್ವಾಮಿ ಸ್ಪರ್ಧೆ ಮಾಡಿರುವುದಕ್ಕೆ ನಮ್ಮ ತಕರಾರಿಲ್ಲ, ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕುಮಾರಸ್ವಾಮಿಯವರನ್ನ ಮುಖ್ಯಮಂತ್ರಿ ಮಾಡಿತ್ತು, ಆದರೆ ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಿಲ್ಲ, ವಿನಾಕಾರಣ ಕಾಂಗ್ರೆಸ್ಸನ್ನು ದೂರುತ್ತಾರೆ ಎಂದರು,
ಹಾಸನ ಆಯ್ತು, ರಾಮನಗರ ಆಯ್ತು, ಇದೀಗ ಮಂಡ್ಯ ನನ್ನ ಭೂಮಿ ಎಂದು ಬಂದಿದ್ದಾರೆ, ರಾಮನಗರ ಜಿಲ್ಲೆ ಎಚ್ ಡಿ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದಲ್ಲದೆ,‌ ಪ್ರಧಾನಿ ಮಟ್ಟದವರೆಗೆ ಬೆಳೆಸಿತು, ಎಚ್ ಡಿ ಕುಮಾರಸ್ವಾಮಿಯವರನ್ನ ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿತು, ಇದೀಗ ಅನ್ನ ಹಾಕಿದ ಮನೆಯನ್ನು ಬಿಟ್ಟು ಬಂದಿದ್ದಾರೆ ಎಂದು ತಿಳಿಸಿದರು.
ಜಾತ್ಯಾತೀತ ತತ್ವವನ್ನು ದೂರ ಮಾಡಿಬಿಜೆಪಿ ಜೊತೆ ಸ್ನೇಹ ಮಾಡಿ ಮಾಡಿದ್ದಾರೆ, ತಮ್ಮ ಕುಟುಂಬದ ಸದಸ್ಯರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಈ ಬಗ್ಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ, ಕಳೆದ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು ಸಾಕಷ್ಟು ಶ್ರಮ ಹಾಕಿದ್ದೆವು,ಆದರೆ ಫಲಗೂಡಲಿಲ್ಲ,ಇದೀಗ ನಮ್ಮ ವಿರುದ್ಧವೇ ದೂಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಅಭ್ಯರ್ಥಿಯಲ್ಲ ಬದಲಾಗಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅಭ್ಯರ್ಥಿ ಎಂದು ತಿಳಿಯಬೇಕು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಬಲಪಡಿಸುವಂತೆ ಮನವಿ ಮಾಡಿದರು.
ಮಂಡ್ಯದಲ್ಲಿ ಸ್ಟಾರ್ ಚಂದ್ರು, ಹಾಸನದಲ್ಲಿ ಶ್ರೇಯಸ್ ಪಟೇಲ್, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಸುರೇಶ್ ಗೆದ್ದೇ ಗೆಲ್ಲುತ್ತಾರೆ, ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page