Home ಬ್ರೇಕಿಂಗ್ ಸುದ್ದಿ ಮರಣದಂಡನೆ ಶಿಕ್ಷೆ ಪ್ರಕಟ ಊಟ-ನಿದ್ರೆ ಬಿಟ್ಟು ತೀವ್ರ ಆತಂಕದಲ್ಲಿ ಮುಸ್ಕಾನ್-ಸಾಹಿಲ್

ಮರಣದಂಡನೆ ಶಿಕ್ಷೆ ಪ್ರಕಟ ಊಟ-ನಿದ್ರೆ ಬಿಟ್ಟು ತೀವ್ರ ಆತಂಕದಲ್ಲಿ ಮುಸ್ಕಾನ್-ಸಾಹಿಲ್

ಮೀರತ್: ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ರನ್ನು ಭೀಕರವಾಗಿ ಕೊಂದು ದೇಹವನ್ನು ತುಂಡಾಗಿ ಕತ್ತರಿಸಿ ನೀಲಿ ಡ್ರಮ್ ನಲ್ಲಿ ಹಾಕಿದ್ದ ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಇದೀಗ ಜೈಲಲ್ಲೇ ನಿದ್ರೆ-ಊಟ ಬಿಟ್ಟು ಕಂಗಾಲಾಗಿದ್ದಾರೆ ಎನ್ನಲಾಗಿದೆ.

ದೇಶಾದ್ಯಂತ ಸಂಚಲನ ಮೂಡಿಸಿದ್ದ ಮೀರತ್‌ನ ನೀಲಿ ಡ್ರಮ್‌ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್‌ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾ, ತೀರ್ಪಿನ ಬಳಿಕ ಆತಂಕದಲ್ಲಿ ರಾತ್ರಿ ಕಳೆದಿದ್ದಾರೆ. ಇಬ್ಬರೂ ಊಟವನ್ನೂ ಮಾಡದೆ ಮಾನಸಿಕವಾಗಿ ವಿಚಲಿತರಾಗಿದ್ದಾರೆ ಎಂದು ಜೈಲು ಆಡಳಿತದ ಮೂಲಗಳು ತಿಳಿಸಿವೆ.

ಮರ್ಚೆಂಟ್‌ ನೇವಿ ಅಧಿಕಾರಿ ಸೌರಭ್‌ ರಾಜ್‌ಪೂತ್‌ ಅವರನ್ನು ಕೊಂದು, ಅವರ ದೇಹವನ್ನು ಸಿಮೆಂಟ್‌ ತುಂಬಿದ ಡ್ರಮ್‌ನಲ್ಲಿ ಅಡಗಿಸಿದ್ದ ಪ್ರಕರಣದಲ್ಲಿ ಮುಸ್ಕಾನ್‌ ಮತ್ತು ಸಾಹಿಲ್‌ಗೆ ಮೀರತ್ ಕೋರ್ಟ್ ಇತ್ತೀಚೆಗೆ ಮರಣದಂಡನೆ ವಿಧಿಸಿತ್ತು. ಬುಧವಾರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ಬಳಿಕ ಇಬ್ಬರ ಆತಂಕ ಹೆಚ್ಚಾಗಿದೆ. ವಿಶೇಷವಾಗಿ, ತನ್ನ 10 ತಿಂಗಳ ಮಗಳು ರಾಧಾಳ ಭವಿಷ್ಯ ಮತ್ತು ಆರೈಕೆಯ ಬಗ್ಗೆ ಮುಸ್ಕಾನ್‌ ಚಿಂತಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋರ್ಟ್ ತೀರ್ಪಿಗೂ ಮುನ್ನ ಮತ್ತು ಬಳಿಕ ಇಬ್ಬರೂ ಊಟ ಮಾಡಿಲ್ಲ ಎಂದು ಜೈಲು ಆಡಳಿತದ ಮೂಲಗಳು ಹೇಳಿವೆ. ಮರಣದಂಡನೆ ಶಿಕ್ಷೆ ಪ್ರಕಟವಾದಾಗ ಮುಸ್ಕಾನ್‌ ಅಚ್ಚರಿ ಮತ್ತು ಅವಿಶ್ವಾಸ ವ್ಯಕ್ತಪಡಿಸುವ ರೀತಿಯಲ್ಲಿ “ಅರ್ರೆ!” ಎಂದು ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ.

You cannot copy content of this page

Exit mobile version