ಆನ್‌ಲೈನ್‌ ಮೂಲಕ NEET ಪರೀಕ್ಷೆ ಕುರಿತು ಶೀಘ್ರ ನಿರ್ಧಾರ: ಧರ್ಮೇಂದ್ರ ಪ್ರಧಾನ್

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು (ನೀಟ್‌–ಯುಜಿ) ಆನ್‌ಲೈನ್‌ ಮೂಲಕ ಮಾಡಬೇಕೆ ಅಥವಾ ಭೌತಿಕ ರೂಪದಲ್ಲೇ ಇರಬೇಕೆ ಎನ್ನುವುದು ಶೀಘ್ರದಲ್ಲೇ ನಿರ್ಧಾರವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಮಂಗಳವಾರ ತಿಳಿಸಿದ್ದಾರೆ.

ಯಾವ ಮಾದರಿಯ ಪರೀಕ್ಷೆ ಉತ್ತಮ ಎನ್ನುವುದರ ಬಗ್ಗೆ ಜೆ.ಪಿ. ನಡ್ಡಾ ನೇತೃತ್ವದ ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಎರಡು ಸುತ್ತಿನ ಮಾತುಕತೆ ನಡೆದಿದೆ. ಎನ್‌ಟಿಎ ಕೂಡ ಈ ಪ್ರಯೋಗಕ್ಕೆ ಸಿದ್ಧವಿದೆ. ಸದ್ಯ ನೀಟ್‌–ಯುಜಿ ಪರೀಕ್ಷೆಯನ್ನು  ಒಎಮ್‌ಆರ್‌ ಶೀಟ್‌ ಭರ್ತಿ ಮಾಡುವ ಮೂಲಕ ಆಫ್‌ಲೈನ್‌ ಅಂದರೆ ಭೌತಿಕ ರೂಪದಲ್ಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘ಭವಿಷ್ಯದಲ್ಲಿ ಈ ಪರೀಕ್ಷೆ ಹೇಗೆ ನಡೆಸಬೇಕು ಎಂಬುದರ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು. ಪರಿಷ್ಕೃತ ಪರೀಕ್ಷಾ ಮಾದರಿ 2025ರಲ್ಲಿ ಜಾರಿಗೆ ಬರಲಿದೆ. ಈ ಬಗ್ಗೆ ಆದಷ್ಟು ಬೇಗ ತಿಳಿಸಲಾಗುವುದು’ ಎಂದು ಪ್ರಧಾನ್‌ ಹೇಳಿದ್ದಾರೆ.

ನೀಟ್‌ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ನಡೆಸುವ ಕುರಿತಾದ ಚರ್ಚೆ ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚಾಗಿರುವ ಕಾರಣ ಮತ್ತೆ ಈ ಕುರಿತು ಚರ್ಚಿಸಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು