Monday, June 17, 2024

ಸತ್ಯ | ನ್ಯಾಯ |ಧರ್ಮ

ಸ್ವ ಇಚ್ಚೆಯ ಮದುವೆಯ ಘೋಷಣೆಯ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಮೂಲಭೂತ ಹಕ್ಕನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ (Supreme Court) ಅಗಸ್ಟ್‌ 28, ಸೋಮವಾರದಂದು ಹಿಂದೂ ವಿವಾಹ ಕಾಯ್ದೆ 1955 (Hindu Marriege Act 1955) ರ ಪ್ರಕಾರ ವಕೀಲರ ಕಚೇರಿಗಳಲ್ಲಿ ನಡೆಯುವ ಮದುವೆಗಳ ಅಮಾನ್ಯತೆಯನ್ನು ಎನ್ನುವ ಮದ್ರಾಸ್ ಹೈಕೋರ್ಟ್‌ನ (Madras High Court) ತೀರ್ಪುನ್ನು ರದ್ದು ಮಾಡಿದೆ.

ತಮಿಳುನಾಡು ತಿದ್ದುಪಡಿಯ (Tamil Nadu Ammendment) ಮುಖಾಂತರ ಹಿಂದೂ ವಿವಾಹ ಕಾಯಿದೆಯಲ್ಲಿ ಸೇರಿಸಲಾದ ಸೆಕ್ಷನ್ 7 (ಎ) ಪ್ರಕಾರ ಸ್ವ ಇಚ್ಚೆಯ ವಿವಾಹ ವ್ಯವಸ್ಥೆಯನ್ನು ಆಧರಿಸಿದ ಪ್ರಕರಣವೊಂದು ಸುಪ್ರೀಂ ಕೋರ್ಟ್‌ನಲ್ಲಿದ್ದು, ಈ ಸೆಕ್ಷನ್ ಪ್ರಕಾರ ಇಬ್ಬರು ಹಿಂದೂ ಧರ್ಮಕ್ಕೆ ಸೇರಿದವರು ತಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ಇತರ ವ್ಯಕ್ತಿಗಳ ಸಮ್ಮುಖದಲ್ಲಿ ಯಾವುದೇ ಶಾಸ್ರ್ತಗಳಿಲ್ಲದೆ ವಿವಾಹವಾಗಬಹುದು.

2014 ರ ಎಸ್.ಬಾಲಕೃಷ್ಣನ್ ಪಾಂಡಿಯನ್ ವರ್ಸಸ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್‌ (S.Balakrishnan Pandiyan vs The Superintendent Of Police on 17 October, 2014) ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ವಕೀಲರು ಮುಂದೆ ನಡೆಸುವ ವಿವಾಹಗಳಿಗೆ ಮಾನ್ಯತೆಯಿಲ್ಲ, ಸುಯಮ್ಮರಿಯಾತೈ (ಸ್ವಗೌರವ) ವಿವಾಹವನ್ನು ಗೌಪ್ಯವಾಗಿ ನಡೆಸಲಾಗುವುದಿಲ್ಲ ಎಂಬ ತೀರ್ಪನ್ನು ನೀಡಿತ್ತು.

ಮೇ 5, 2023 ರಂದು ಮದ್ರಾಸ್ ಹೈಕೋರ್ಟ್ ಇಳವರಸನ್ ವರ್ಸಸ್ ಪೊಲೀಸ್ ಅಧೀಕ್ಷಕರು ಮತ್ತು ಇತರರು‌ (Ilvarasan vrs Superintendent of Police | SLP(Crl) No. 006534 – / 2023) ಪ್ರಕರಣದಲ್ಲಿ ವಕೀಲರು ನೀಡಿದ ಸ್ವಗೌರವದ ವಿವಾಹ ಪ್ರಮಾಣಪತ್ರವನ್ನು ಪರಿಗಣಿಸಲು ನಿರಾಕರಿಸಿತು. ಆಪಾದಿಸಿದ ವ್ಯಕ್ತಿ ವ್ಯಕ್ತಿ ತನ್ನ ಸಂಗಾತಿಯನ್ನು ಆಕೆಯ ಹೆತ್ತವರು ಅಕ್ರಮವಾಗಿ ಕೂಡಿಹಾಕಿದ್ದಾರೆ ಎಂದು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು (habeas corpus petition ) ವಜಾಗೊಳಿಸಿತು. ಇಂತಹ ‘ನಕಲಿ ವಿವಾಹ ಪ್ರಮಾಣಪತ್ರ’ ನೀಡುವ ವಕೀಲರ ವಿರುದ್ಧ ಬಾರ್ ಕೌನ್ಸಿಲ್ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಈ ತೀರ್ಪಿನಿಂದ ಹತಾಶೆಗೊಂಡ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

Special Leave Petitionಅನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು ಇಳವರಸನ್ ಕೇಸ್‌ನಲ್ಲಿ ಅನುಸರಿಸಿದ ಬಾಲಕೃಷ್ಣನ್ ಪಾಂಡಿಯನ್ ಕೇಸಿನ ತೀರ್ಪನ್ನು ತಿರಸ್ಕರಿಸಿತು.

ತಮಿಳುನಾಡಿಗೆ ಅನ್ವಯವಾಗುವ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 7A ನಲ್ಲಿ,
“ವಿಭಾಗ 7-ಎ: ಸಯಮ್ ಮರಿಯಾತೈ ಮತ್ತು ಸೀರ್ತಿರುತ್ಥ ವಿವಾಹಗಳ ಬಗ್ಗೆ ವಿಶೇಷ ನಿಬಂಧನೆಗಳೆಂದರೆ,
(1) ಈ ಸೆಕ್ಷನ್ ಇಬ್ಬರು ಹಿಂದೂಗಳ ನಡುವಿನ ಸಯಮ್‌ ಮಾರಿಯಾತೈ ಮದುವೆ ಅಥವಾ ಸೀರ್ತಿರುತ್ಥ ಮದುವೆ ಅಥವಾ ಯಾವುದೇ ಇತರ ಹೆಸರಿನಿಂದ, ಸಂಬಂಧಿಕರು, ಸ್ನೇಹಿತರು ಅಥವಾ ಇತರ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯುವ ಯಾವುದೇ ರೀತಿಯ ಮದುವೆಗೂ ಅನ್ವಯವಾಗುತ್ತದೆ.

(a) ಮದುವೆಯಲ್ಲಿ ಎರಡೂ ಪಾರ್ಟಿಗಳೂ ಅರ್ಥವಾಗುವ ಯಾವುದೇ ಭಾಷೆಯಲ್ಲಿ ಒಬ್ಬರನ್ನು ಇನ್ನೊಬ್ಬರು ತನ್ನ ಹೆಂಡತಿ/ಗಂಡನಾಗಿ ಪರಿಗಣಿಸುತ್ತೇನೆ ಎಂದು ಘೋಷಿಸಬೇಕು.

(b) ಮದುವೆಯಲ್ಲಿ ಜೋಡಿಗಳು ಪರಸ್ಪರ ಮಾಲೆ, ಅಥವಾ ಉಂಗುರ ಹಾಕುವುದು.

(c) ಅಥವಾ ತಾಳಿ ಕಟ್ಟುವ ಮೂಲಕ.

“ನಾಗಲಿಂಗಂ ವರ್ಸಸ್ ಶಿವಗಾಮಿ (2001) 7 SCC 487 (Nagalingam v Shivgami(2001) 7 SCC 487) ಪ್ರಕರಣದಲ್ಲಿ ಹೈಕೋರ್ಟ್ ಸೆಕ್ಷನ್ 7A ಅನ್ನು ಎತ್ತಿಹಿಡಿದಿದೆ. ಪಾಂಡಿಯನ್‌ ಪ್ರಕರಣದಲ್ಲಿ ಪ್ರತಿ ಮದುವೆಗೆ ಸಾರ್ವಜನಿಕ ವಿಧಿವಿಧಾನ ಅಥವಾ ಘೋಷಣೆಯ ಅಗತ್ಯವಿದೆ ಎಂದು ಒಂದು ಊಹೆ ಎಂಬುದನ್ನು ಸುಪ್ರೀಂ ಕೋರ್ಟ್‌ ಗಮನಿಸಿದೆ.

ಬಾಲಕೃಷ್ಣನ್ ಪಾಂಡಿಯನ್ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್‌ನ ಅಭಿಪ್ರಾಯವು ತಪ್ಪು. ಪ್ರತಿ ಮದುವೆಗೆ ಸಾರ್ವಜನಿಕ ಸಮಾರಂಭ ಅಥವಾ ಮದುವೆಯ ಘೋಷಣೆಯ ಅಗತ್ಯವಿದೆ ಎಂಬುದು ಒಂದು ಕಲ್ಪಿತ ವಾದ. ಸಾರ್ವಜನಿಕವಾಗಿ ಮದುವೆಯನ್ನು ಘೋಷಿಸಿದರೆ ಬಲವಂತವಾಗಿ ಪ್ರತ್ಯೇಕ ಪಡಿಸುವುದು ಅಥವಾ ಧಾಳಿ ಕೂಡ ನಡೆಯಬಹುದು ಎಂಬುದನ್ನು ಹೈಕೋರ್ಟ್‌ ಗಮನಿಸಿದೆ. ಮನೆಯವರ ಇಚ್ಚೆಗೆ ವಿರುದ್ಧವಾಗಿ ನಡೆಯುವ ಮದುವೆಗಳಿಗೆ ಅಪಾಯಗಳು ಸಂಭವಿಸುವ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕೃಷ್ಣನ್‌ ಪಾಂಡಿಯನ್‌ ಪ್ರಕರಣದ ತೀರ್ಪು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಹಕ್ಕಿನ ಉಲ್ಲಂಘನೆ ಎಂದಿದೆ.

ಸಂವಿಧಾನದ 21ನೇ ವಿಧಿ (Article 21 of the Indian Constitution) ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ನೀಡುತ್ತದೆ.

ವಕೀಲರು ಈ ಮದುವೆಯನ್ನು ಮಾಡಿಸುವುದು ವೈಯಕ್ತಿಕ ಸಾಮರ್ಥ್ಯದಿಂದಲೇ ಹೊರತು ವೃತ್ತಿಪರ ಸಾಮರ್ಥ್ಯದಿಂದ ಅಲ್ಲ. ಅವರ ಪಾತ್ರದ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಆದರೆ ಅವರು ಓರ್ವ ಸಂಬಂಧಿಕರಾಗಿ, ಸ್ನೇಹಿತರಾಗಿ ಪಾತ್ರವಹಿಸುವುದನ್ನು ತಳ್ಳಿಹಾಕುವಂತಿಲ್ಲ.

Related Articles

ಇತ್ತೀಚಿನ ಸುದ್ದಿಗಳು