Home ದೇಶ ಪಿಎಂ ಕಿಸಾನ್ ಫಲಾನುಭವಿಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆ

ಪಿಎಂ ಕಿಸಾನ್ ಫಲಾನುಭವಿಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆ

0

ಕೇಂದ್ರ ಸರ್ಕಾರವು ವರ್ಷದಿಂದ ವರ್ಷಕ್ಕೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ.

ಸುಮಾರು ಎರಡೂವರೆ ವರ್ಷಗಳಲ್ಲಿ 1.5 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಈ ಯೋಜನೆಯಿಂದ ತೆಗೆದುಹಾಕಲಾಗಿದೆ. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ರಾಮ್ ನಾಥ್ ಠಾಕೂರ್ ಈ ಕುರಿತು ಲಿಖಿತ ಉತ್ತರ ನೀಡಿದ್ದಾರೆ. 2021-22ರಲ್ಲಿ 10,79,92,336 ರೈತರು ಪಿಎಂ ಕಿಸಾನ್ ಫಲಾನುಭವಿಗಳಾಗಿದ್ದು, ಅವರಿಗೆ ರೂ.67,147 ಕೋಟಿ ನೀಡಲಾಗಿದೆ.

2022-23ರಲ್ಲಿ ಫಲಾನುಭವಿಗಳ ಸಂಖ್ಯೆ 10,74,35,548ಕ್ಕೆ ಇಳಿಕೆಯಾಗಿದ್ದು, ಅವರಿಗೆ ನೀಡಲಾಗಿದ್ದ ಮೊತ್ತವೂ ರೂ.58,303.25 ಕೋಟಿಗೆ ಇಳಿಕೆಯಾಗಿದೆ. ಅಂದರೆ ವರ್ಷದಲ್ಲಿ 5,56,788 ಫಲಾನುಭವಿಗಳನ್ನು ತೆಗೆದುಹಾಕಲಾಗಿದೆ.

ಅಲ್ಲದೆ, ಪಿಎಂ ಕಿಸಾನ್ ಮೊತ್ತವನ್ನು ರೂ.8,8 44.11 ಕೋಟಿಗಳಿಗೆ ಇಳಿಸಲಾಗಿದೆ. 2023-24ರಲ್ಲಿ ಫಲಾನುಭವಿಗಳ ಸಂಖ್ಯೆ 9,90,30,164ಕ್ಕೆ ಇಳಿಕೆಯಾಗಿದೆ. ಅಂದರೆ ವರ್ಷದಲ್ಲಿ ಫಲಾನುಭವಿಗಳ ಸಂಖ್ಯೆ 84,05,384ಕ್ಕೆ ಇಳಿದಿದೆ. 2024-25ರಲ್ಲಿ (ಜುಲೈ 22, 2024) ಫಲಾನುಭವಿಗಳ ಸಂಖ್ಯೆ 9,25,71,834..64,58,330 ಫಲಾನುಭವಿಗಳನ್ನು ತೆಗೆದುಹಾಕಲಾಗಿದೆ.

You cannot copy content of this page

Exit mobile version