Wednesday, September 24, 2025

ಸತ್ಯ | ನ್ಯಾಯ |ಧರ್ಮ

ಮಾನನಷ್ಟ ಮೊಕದ್ದಮೆಯನ್ನು ಕ್ರಿಮಿನಲ್ ವ್ಯಾಪ್ತಿಯಿಂದ ಹೊರಗಿಡಬೇಕು: ಸುಪ್ರೀಂ ಕೋರ್ಟ್

ದೆಹಲಿ: ಮಾನನಷ್ಟ ಪ್ರಕರಣಗಳನ್ನು ಕ್ರಿಮಿನಲ್ ವ್ಯಾಪ್ತಿಯಿಂದ ಹೊರಗಿಡುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

‘ದಿ ವೈರ್’ ನ್ಯೂಸ್ ಪೋರ್ಟಲ್ ನಡೆಸುವ ‘ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ’ ಸಂಸ್ಥೆ ಮತ್ತು ಅದರ ರಾಜಕೀಯ ವ್ಯವಹಾರಗಳ ಸಂಪಾದಕರಾದ ಅಜೋಯ್ ಆಶೀರ್ವಾದ್ ಮಹಾಪ್ರಶಸ್ತ್ರ ಅವರು, ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ಮಾನನಷ್ಟ ಪ್ರಕರಣದ ಸಮನ್ಸ್‌ಗಳನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಮಂಗಳವಾರ ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಅಮಿತಾ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಲಾಯಿತು.

“ಮಾನನಷ್ಟ ಸಂಬಂಧಿತ ಎಲ್ಲಾ ವಿಷಯಗಳನ್ನು ಕ್ರಿಮಿನಲ್ ವ್ಯಾಪ್ತಿಯಿಂದ ತೆಗೆದುಹಾಕಬೇಕು” ಎಂದು ನ್ಯಾಯಮೂರ್ತಿ ಸುಂದರೇಶ್ ಅವರು ಅಭಿಪ್ರಾಯಪಟ್ಟರು.

‘ದಿ ವೈರ್’ ಸಂಸ್ಥೆಯು ತಮ್ಮ ವಿರುದ್ಧ ದ್ವೇಷಪೂರಿತ ಪ್ರಚಾರ ನಡೆಸಿ ತಮ್ಮ ಘನತೆಗೆ ಹಾನಿ ಮಾಡುತ್ತಿದೆ ಎಂದು ಪ್ರಕರಣದ ದೂರುದಾರರಾದ ಮಾಜಿ ಜೆಎನ್‌ಯು ಪ್ರೊಫೆಸರ್ ಅಮಿತಾ ಸಿಂಗ್ ಆರೋಪಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page