Saturday, November 22, 2025

ಸತ್ಯ | ನ್ಯಾಯ |ಧರ್ಮ

‘ಮಾರ್ನಮಿ’ಗೆ ಮದುವೆಯಾಗಲು ರೆಡಿಯಾದ ದೀಕ್ಷಾ…ಚೈತ್ರಾ ಆಚಾರ್ ಸಿನಿಮಾಗೆ ರಮ್ಯಾ ಸಾಥ್

‘ಮಾರ್ನಮಿ’ಗೆ ಮೋಹಕ ತಾರೆ ರಮ್ಯಾ ಸಾಥ್…ಚೈತ್ರಾ ಆಚಾರ್ ಪಾತ್ರ ಪರಿಚಯ

ಕರಾವಳಿ ಭಾಗದ ಪ್ರೇಮಕಥೆ ಮಾರ್ನಮಿಗೆ ರಮ್ಯಾ ಸಾಥ್..ನಾಯಕಿ ಚೈತ್ರಾ ಆಚಾರ್ ಪಾತ್ರ ಪರಿಚಯ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿರಲ್ಲಿ ಒಬ್ಬರು ಚೈತ್ರಾ ಜೆ ಆಚಾರ್.‌ ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವ ನಟಿ ಈಗ ಮಾರ್ನಮಿಗೆ ಮದುವೆಯಾಗೋದಿಕ್ಕೆ ಹೊರಟಿದ್ದಾರೆ. ಅರೇ! ಚೈತ್ರಾ ಮದುವೆನಾ ಅಂತಾ ಹುಬ್ಬೇರಿಸಬೇಡಿ. ಮದುವೆ‌ ನಿಜವೇ.‌ ಆದರೆ ರೀಲ್ ನಲ್ಲಿ. ಕರಾವಳಿ ಭಾಗದ ಪ್ರೇಮಕಥೆಯುಳ್ಳ ಮಾರ್ನಮಿ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರದ ಪರಿಚಯದ ಟೀಸರ್ ಬಿಡುಗಡೆ ಮಾಡಲಾಗಿದೆ.

ಗುನಾಧ್ಯ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಚೈತ್ರಾ ಪಾತ್ರದ ಝಲಕ್ ಬಿಡುಗಡೆ ಮಾಡಲಾಗಿದೆ. ಮಾರ್ನಮಿಯಲ್ಲಿ ಚೈತ್ರಾ ದೀಕ್ಷಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ತನ್ನ ಪ್ರೀತಿ,‌ ಮದುವೆ ಬಗ್ಗೆ ಕರಾವಳಿ ಭಾಷೆಯಲ್ಲಿ ಪರಿಚಯ ಮಾಡಿಕೊಳ್ಳುತ್ತಾರೆ. ಡಿ ಗ್ಲಾಮ್ ಲುಕ್ ನಲ್ಲಿ ಚೈತ್ರಾ ಆಚಾರ್ ಕಾಣಿಸಿಕೊಂಡಿದ್ದು, ಮೋಹಕ ತಾರೆ ರಮ್ಯಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಟೀಸರ್ ಬಿಡುಗಡೆ ಮಾಡಿ‌ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಕುಂದಾಪುರದ ಪಡುಕೋಣೆಯ ರಿಶಿತ್ ಶೆಟ್ಟಿ ಮಾರ್ನಮಿ ಸಿನಿಮಾದ ಸೂತ್ರಧಾರ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆ ಜೊತೆಗೆ ಪ್ರೇಮಕಥೆ , ಆಕ್ಷನ್, ಎಮೋಷನ್, ಕಾಮಿಡಿ ಮಿಶ್ರಣದ ಮಾರ್ನಮಿ ಚಿತ್ರವನ್ನು ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ ರಿತ್ವಿಕ್ ಮಠದ್ ನಾಯಕನಾಗಿ ಅಭಿನಯಿಸಿದ್ದಾರೆ. ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page