Wednesday, June 19, 2024

ಸತ್ಯ | ನ್ಯಾಯ |ಧರ್ಮ

ವಿವಿಧ ದೇಶಗಳ ಸರ್ಕಾರದ ನಡುವೆ ಆಳವಾದ ತಿಳುವಳಿಕೆ ಮತ್ತು ಸಹಕಾರ ಅಗತ್ಯವಿದೆ : ಮೋದಿ

ಹೊಸದಿಲ್ಲಿ: ಇಂದು ಹೊಸದಿಲ್ಲಿ ಆಯೋಜಿಸಿದ್ದ ನೋ ಮನಿ ಫಾರ್‌ ಟೆರರ್‌(NMFT) ಸಮಾವೇಶ ಆರಂಭವಾಗಿದ್ದು, ಭಯೋತ್ಪಾದಾನೆಯ ಬಗ್ಗೆ ಮಾತನಾಡಲಾರಂಭಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತೀ ದೇಶಗಳಲ್ಲಿ ಅದರದ್ದೇ ಆದ ಕಾನೂನುಗಳಿದ್ದು ಸರ್ಕಾರದ ನಡುವೆ ಆಳವಾದ ತಿಳುವಳಿಕೆ ಮತ್ತು ಸಹಕಾರ ಅಗತ್ಯವಿದೆ ಎಂದು ಮಾತನಾಡಲಾರಂಭಿದ್ದಾರೆ. ಹೇಳಿದರು.

ನವೆಂಬರ್‌ 18 ಮತ್ತು 19 ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ನೋ ಮನಿ ಫಾರ್‌ ಟೆರರ್‌ (NMFT) ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ 75 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಪ್ಯಾರೀಸ್‌(2018) ಮತ್ತು ಮೆಲ್ಬೋರ್ನ್‌(2019) ನಲ್ಲಿ ನಡೆದ ಹಿಂದಿನ ಎರಡು ಸಮ್ಮೇಳನಗಳಲ್ಲಿ ಅಂತರರಾಷ್ಟ್ರೀಯ ಸಮುದಾಯವು ನಡೆಸಿದ ಭಯೋತ್ಪಾಧಕ ಹಣಕಾಸು ವಿರುದ್ಧ ಹೋರಾಡುವ ಚರ್ಚೆಗಳನ್ನು ಮತ್ತಷ್ಟು ಪ್ರಗತಿಗೊಳಿಸುವ ಉದ್ಧೇಶದಿಂದ ಸಮಾವೇಶ ನಡೆಸಲಿದ್ದಾರೆ.

ಸಮಾವೇಶದಲ್ಲಿ ಈಗಾಗಲೇ ಮಾತು ಆರಂಭಿಸಿರುವ ಪ್ರಧಾನಿ  ನರೇಂದ್ರ ಮೋದಿಯವರು, ʼಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳ ಮೇಲೆ ವೆಚ್ಚವನ್ನು ವಿಧಿಸಬೇಕು, ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಮೂಡಿಸಲು ಪ್ರಯತ್ನಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಸಹ ಪ್ರತ್ಯೇಕಿಸಬೇಕುʼ ಎಂದು ಹೇಳಿದರು.

ʼಎಲ್ಲಾ ದೇಶಗಳು ಅದರದ್ದೇ ಆದ ವಿಭಿನ್ನ ಕಾನೂನುಗಳನ್ನು ಹೊಂದಿವೆ. ಆದ್ಧರಿಂದ ಸರ್ಕಾರಗಳ ನಡುವೆ ಆಳವಾದ ತಿಳುವಳಿಕೆ ಮತ್ತು ಸಹಕಾರ ಅಗತ್ಯವಿದೆ. ನಾವೆಲ್ಲಾ ಜೊತೆಗೂಡಿ ಮೂಲಭೂತವಾದ ಮತ್ತು ಉಗ್ರವಾದದ ಸಮಸ್ಯೆಯನ್ನು ಪರಿಹರಿಸಬೇಕು. ಯಾವುದೇ ದೇಶದಲ್ಲಿಯೂ ಸಹ ಮೂಲಭೂತವಾದವನ್ನು ಬೆಂಬಲಿಸುವವರನ್ನು ಸಹಿಸುವುದಿಲ್ಲʼ ಎಂದು ಮಾತನಾಡಿದರು.

ʼಅದು ಪ್ರವಾಸೋದ್ಯಮವಾಗಿರಲಿ ಅಥವಾ ವ್ಯಾಪಾರವಾಗಿರಲಿ, ನಿರಂತರವಾಗಿ ಅಪಾಯದಲ್ಲಿರುವ ಪ್ರದೇಶವನ್ನು ಯಾರೂ ಇಷ್ಟಪಡುವುದಿಲ್ಲ. ಇದು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವ ಮಾರ್ಗವನ್ನು ಹೊಡೆಯಲು ಇದು ಕಾರಣವಾಗಿದೆʼ ಎಂದು ತಿಳಿಸಿದರು.

ʼನಾವು ಭಯೋತ್ಪಾದನೆಯ ವಿರುದ್ಧ ಧೈರ್ಯದಿಂದ ಹೋರಾಡಿದ್ದೇವೆ ಆದರೂ ಸಾವಿರಾರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ನಾವು ದೃಢವಾಗಿದ್ದೇವೆʼ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು