Home ರಾಜ್ಯ ಒಕ್ಕಲಿಗರ ವಿರುದ್ಧದ ಪಿತೂರಿಯ ಭಾಗವಾಗಿ ಪ್ರಜ್ವಲ್‌ ವಿಡಿಯೋ ಲೀಕ್:‌ ಆರ್‌ ಅಶೋಕ್

ಒಕ್ಕಲಿಗರ ವಿರುದ್ಧದ ಪಿತೂರಿಯ ಭಾಗವಾಗಿ ಪ್ರಜ್ವಲ್‌ ವಿಡಿಯೋ ಲೀಕ್:‌ ಆರ್‌ ಅಶೋಕ್

0

ಹಾಸನ: ‌ಒಕ್ಕಲಿಗ ಸಮುದಾಯಕ್ಕೆ ಅಪಖ್ಯಾತು ತರಲೆಂದು ರಾಜಕೀಯ ಪಿತೂರಿ ನಡೆಸಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೊಗಳು ಸೋರಿಕೆ ಮಾಡಲಾಗಿದೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಶೋಕ್ ಭಾನುವಾರ ಆರೋಪಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಬಿಜೆಪಿ ಶಾಸಕರೊಬ್ಬರ ಸಹಚರರನ್ನು ಬಂಧಿಸಿದ ನಂತರ ಅಶೋಕ ಈ ಹೇಳಿಕೆ ನೀಡಿದ್ದಾರೆ.

ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ರಣದೀಪ್ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಹಗರಣದ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿರುವುದು ಮೈತ್ರಿ ಪಾಲುದಾರ ಜೆಡಿಎಸ್ ಜೊತೆಗಿನ ಅಂತರವನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಅಶೋಕ್ ಅವರ ಹೇಳಿಕೆ ಬಂದಿದೆ. ಕಳೆದ ವಾರ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರ ಇಬ್ಬರು ಸಹಚರರನ್ನು ವಿಡಿಯೋ ವಿತರಣೆ ಆರೋಪದ ಮೇಲೆ ಬಂಧಿಸಲಾಗಿತ್ತು.

“ಇದು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಮಸಿ ಬಳಿಯಲು ಮತ್ತು ಒಕ್ಕಲಿಗ ಸಮುದಾಯವನ್ನು ಒಡೆಯಲು ಸುರ್ಜೇವಾಲಾ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ರೂಪಿಸಿದ ಮಾಸ್ಟರ್ ಪ್ಲಾನ್. ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗುವುದನ್ನು ತಡೆಯುವ ಮೂಲಕ ಸಿದ್ದರಾಮಯ್ಯ ಈಗಾಗಲೇ ದಲಿತ ಸಮುದಾಯವನ್ನು ಮೂಲೆಗುಂಪು ಮಾಡಿದ್ದಾರೆ. ಈಗ ಅವರ ಗುರಿ ಒಕ್ಕಲಿಗ ಸಮುದಾಯ” ಎಂದು ಅವರು ಪ್ರತಿಪಾದಿಸಿದರು.

ಸುದ್ದಿಮನೆಗಳಲ್ಲಿ ಮೋದಿ| ಚಪರಾಸಿ ಪತ್ರಕರ್ತರ ಜೀ ಹುಜೂರ್‌ ಸಂದರ್ಶನ

You cannot copy content of this page

Exit mobile version