ನವದೆಹಲಿ: ರೊಹಿಂಗ್ಯಾ ನಿರಾಶ್ರಿತರನ್ನು ದೆಹಲಿಯಲ್ಲಿ ನೆಲೆಸಲು ಅಮ್ ಅದ್ಮಿ ಪಾರ್ಟಿ ನೇತೃತ್ವದ ಸರ್ಕಾರ ಬಿಡುವುದಿಲ್ಲ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು.
ರೊಹಿಂಗ್ಯಾ ಮುಸ್ಲಿಮರಿಗೆ ಫ್ಲಾಟ್‌ಗಳು ಮತ್ತು ಭದ್ರತೆಯ ಭರವಸೆ ನೀಡುವ ಕೇಂದ್ರ ಸಚಿವರ ಹೇಳಿಕೆಯನ್ನು ವಿರೋಧಿಸಿದ ಕೇಲವೇ ಗಂಟೆಗಳ ನಂತರ ಈ ಹೇಳಿಕೆಯನ್ನು ನೀಡಿದ್ದಾರೆ.
ರೊಹಿಂಗ್ಯಾ ನಿರಾಶ್ರಿತರನ್ನು ದಿಲ್ಲಿಯ ದುರ್ಬಲ ವರ್ಗದವರಿಗೆ ಗೋತ್ತುಪಡಿಸಿದ ಪ್ಲಾಟ್‌ಗಳಿಗೆ ಸ್ಥಳಾಂತರಿಸಲಾಗುವುದು ಮತ್ತು ಪೋಲಿಸ್ ರಕ್ಷಣೆಯೊಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಹೇಳಿದ್ದರು.
ಇದರ ವಿರುದ್ಧವಾಗಿ ಪತ್ರಿಕಘೋಷ್ಠಿ ನಡೆಸಿದ ಮನೀಶ್ ಸಿಸೋಡಿಯಾ ನಿರಾಶ್ರಿತರನ್ನು ಆಕ್ರಮವಾಗಿ ನೆಲೆಸಲು ಭಾರತೀಯ ಜನತಾ ಪಕ್ಷ ಸಂಚು ನಡೆಸುತ್ತಿದೆ ಎಂದು ದೂರಿದರು.